Tollywood: ʼಫ್ಯಾಮಿಲಿ ಸ್ಟಾರ್ʼ ಸೋಲಿನ ಬಳಿಕ ಹೊಸ ಸಿನಿಮಾ ಅನೌನ್ಸ್ ಮಾಡಿದ ದೇವರಕೊಂಡ
Team Udayavani, May 4, 2024, 4:32 PM IST
ಹೈದರಾಬಾದ್: ʼಅರ್ಜುನ್ ರೆಡ್ಡಿʼ ನಟ ವಿಜಯ್ ದೇವರಕೊಂಡ ಹೊಸ ಸಿನಿಮಾವನ್ನು ಅನೌನ್ಸ್ ಮಾಡಿದ್ದಾರೆ.
ವಿಜಯ್ ದೇವರಕೊಂಡ ಇತ್ತೀಚೆಗೆ ʼದಿ ಫ್ಯಾಮಿಲಿ ಸ್ಟಾರ್ʼ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾದ ಬಗ್ಗೆ ನಿರೀಕ್ಷೆಗಳು ಹೆಚ್ಚಿತ್ತು. ಆದರೆ ಪ್ರೇಕ್ಷಕರನ್ನು ರಂಜಿಸುವಲ್ಲಿ ಸಿನಿಮಾ ಸೋತಿತ್ತು. ಸಿನಿಮಾಕ್ಕೆ ನಿರಾಶದಾಯಕ ಪ್ರತಿಕ್ರಿಯೆ ಬಂತು. ದೇವರಕೊಂಡ ಅವರ ಕಳೆದ ಕೆಲ ಸಿನಿಮಾಗಳು ಅಷ್ಟಾಗಿ ಸದ್ದು ಮಾಡಿಲ್ಲ.
“ದಿ ಫ್ಯಾಮಿಲಿ ಸ್ಟಾರ್” ಬಳಿಕ ಇದೀಗ ದೇವರಕೊಂಡ ಹೊಸ ಸಿನಿಮಾವನ್ನು ಅನೌನ್ಸ್ ಮಾಡಿದ್ದಾರೆ. ಈ ಹಿಂದೆ ಟಾಲಿವುಡ್ ನಲ್ಲಿ ʼರಾಜಾ ವರು ರಾಣಿ ಗಾರುʼ ಸಿನಿಮಾವನ್ನು ಮಾಡಿ ಗಮನ ಸೆಳೆದಿದ್ದ ರವಿಕಿರಣ್ ಕೋಲ ಅವರೊಂದಿಗೆ ದೇವರಕೊಂಡ ಮುಂದಿನ ಸಿನಿಮಾವನ್ನು ಮಾಡಲಿದ್ದಾರೆ.
ಮೂಲಗಳ ಪ್ರಕಾರ ಇದೊಂದು ಹೈ ಆಕ್ಟೇನ್ ಮಾಸ್ ಸಿನಿಮಾವಾಗಲಿದೆ ಎನ್ನಲಾಗಿದೆ. ಈ ಸಿನಿಮಾವನ್ನು ದಿಲ್ ರಾಜು ಅವರು ನಿರ್ಮಾಣ ಮಾಡಲಿದ್ದಾರೆ. ಸಿನಿಮಾದ ಪಾತ್ರವರ್ಗದ ಬಗ್ಗೆ ಸದ್ಯಕ್ಕೆ ಯಾವ ಮಾಹಿತಿಯೂ ಹೊರಬಿದ್ದಿಲ್ಲ.
ಸದ್ಯ ದೇವರಕೊಂಡ ಗೌತಮ್ ತಿನ್ನನೂರಿ ನಿರ್ದೇಶನದ ʼವಿಡಿ12ʼ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದಲ್ಲಿ ಶ್ರೀಲೀಲಾ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
A Larger-than-life “Rural Action Drama” is on the cards 🧨#SVC59 will be @TheDeverakonda‘s Mass Endeavour
X
A @storytellerkola‘s Vision 💥Produced by Raju – Shirish ✨
More Updates on 9th May, Stay tuned to @SVC_official pic.twitter.com/FVca4INOGC
— Sri Venkateswara Creations (@SVC_official) May 4, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Malayalam actor: ಹಾಲಿವುಡ್‌ನಲ್ಲೂ ಮಿಂಚಿದ್ದ ಮಾಲಿವುಡ್‌ನ ಹಿರಿಯ ನಟ ಥಾಮಸ್ ನಿಧನ
‘Pushpa 2: 10 ದಿನಗಳಲ್ಲಿ ಹೊಸ ದಾಖಲೆಯ ಕಲೆಕ್ಷನ್ ಕಂಡು ಮುನ್ನುಗ್ಗುತ್ತಿರುವ ಪುಷ್ಪ 2
Tulu cinema; ಕೋಸ್ಟಲ್‌ನಲ್ಲೀಗ ಸಿನೆಮಾ ಹಂಗಾಮಾ!
SSMB29: ರಾಜಮೌಳಿ – ಮಹೇಶ್ ಬಾಬು ಸಿನಿಮಾದ ಲೀಡ್ ರೋಲ್‌ನಲ್ಲಿ ಪ್ರಿಯಾಂಕಾ ಚೋಪ್ರಾ?
Video: ಜೈಲಿನಿಂದ ಅಲ್ಲು ಅರ್ಜುನ್ ಬಿಡುಗಡೆಗೆ ಆಗ್ರಹ; ಆತ್ಮಹತ್ಯೆ ಯತ್ನಿಸಿದ ಅಭಿಮಾನಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.