”Pushpa 2′′ ಭಾಷೆಯ ತಡೆಯನ್ನು ಮುರಿಯುತ್ತಿದೆ, ತೆಲುಗು ಜನರಿಗೆ ಹೆಮ್ಮೆ: ಅಲ್ಲು ಅರ್ಜುನ್
ಅಲ್ಲು ಅರ್ಜುನ್ ಜತೆ ಕೆಲಸ ಮಾಡುವ ವೇಳೆ ನಾನು ನರ್ವಸ್ ಆಗಿದ್ದೆ: ರಶ್ಮಿಕಾ ಮಂದಣ್ಣ
Team Udayavani, Nov 29, 2024, 8:01 PM IST
ಮುಂಬೈ : ‘ಪುಷ್ಪ 2’ (Pushpa 2: The Rule) ಚಿತ್ರ ಭಾಷೆಯ ತಡೆಯನ್ನು ಮುರಿಯುತ್ತಿದೆ, ಚಿತ್ರದ ಮೂಲಕ ರಾಷ್ಟ್ರ ಮಟ್ಟದಲ್ಲಿ ತೆಲುಗು ಜನರನ್ನು ಹೆಮ್ಮೆಪಡುವಂತೆ ಮಾಡುವ ಸಮಯ ನನ್ನದು ಎಂದು ಚಿತ್ರದ ನಾಯಕ ನಟ ಅಲ್ಲು ಅರ್ಜುನ್ ಶುಕ್ರವಾರ(ನ29) ಹೇಳಿಕೆ ನೀಡಿದ್ದಾರೆ.
ಮಂಬೈನಲ್ಲಿ ನಡೆದ ಚಿತ್ರದ ಪ್ರಚಾರ ಸಮಾರಂಭದಲ್ಲಿ ಮಾತನಾಡಿದ ಅಲ್ಲೂ ಅರ್ಜುನ್ ‘ಒಂದು ಕಾಲದಲ್ಲಿ ಬಾಲಿವುಡ್‌ಗೆ ಪ್ರವೇಶಿಸುವುದು ಅಸಾಧ್ಯವೆಂದು ಭಾವಿಸಿಲಾಗಿತ್ತು ಆದರೆ ‘ಪುಷ್ಪ 2: ದಿ ರೂಲ್’ ಮೂಲಕ ದೇಶಾದ್ಯಂತದ ಪ್ರೇಕ್ಷಕರೊಂದಿಗೆ ಸಂಪರ್ಕ ಸಾಧಿಸುವ ನನ್ನ ಆಸೆ ಈಡೇರುತ್ತಿದೆ’ ಎಂದರು.
‘ಪುಷ್ಪ ಮೊದಲ ಭಾಗದಂತೆಯೇ ಅದೇ ಮಟ್ಟದ ಯಶಸ್ಸನ್ನು ಆನಂದಿಸುವ ನಿರೀಕ್ಷೆ ಇದೆ. ತೆಲುಗು ಉದ್ಯಮದಲ್ಲಿ ಅತಿ ದೊಡ್ಡ ಹಿಟ್‌ಗಳಲ್ಲಿ ಒಂದಾಗಬೇಕಿದೆ. ಪುಷ್ಪ 2 ಚಿತ್ರವು ಭಾರತದಲ್ಲೇ ಅತಿ ದೊಡ್ಡ ಚಿತ್ರವಾಗಲಿದೆ ಎಂಬ ನಿರೀಕ್ಷೆ ಇದೆ. ಇಡೀ ಭಾರತವೇ ನಮ್ಮಿಂದ ಈ ಚಿತ್ರವನ್ನು ನಿರೀಕ್ಷಿಸುತ್ತಿರುವಾಗ ನಮಗೆ ದೊಡ್ಡ ವಿಷಯ ಎಂದು ನಾನು ಭಾವಿಸಿದ್ದು, ನನ್ನ ತಾಯ್ನಾಡಿಗೆ ಒಳ್ಳೆಯ ಹೆಸರನ್ನು ತರುತ್ತದೆ ಎಂಬ ಕಾರಣಕ್ಕೆ ನಾನು ಜವಾಬ್ದಾರನಾಗಿದ್ದನೆ’ ಎಂದರು.
“20 ವರ್ಷಗಳಿಂದ ನನ್ನನ್ನು ಬೆಂಬಲಿಸಿದ ಮತ್ತು ನನ್ನನ್ನು ನಟನನ್ನಾಗಿ ಮಾಡಿದ ತೆಲುಗು ಜನರಿಗೆ ಇದು ಹೆಮ್ಮೆಯ ಕ್ಷಣವಾಗಿದೆ, ನಾನು ಅವರಿಗಾಗಿ ರಾಷ್ಟ್ರೀಯ ಮಟ್ಟದಲ್ಲಿ ಹೆಮ್ಮೆಪಡುವ ಮತ್ತು ‘ಪುಷ್ಪ’ವನ್ನು ಹಿಟ್ ಮಾಡುವ ಸಮಯ ಇದು” ಎಂದು 42 ರ ಹರೆಯದ ನಟ ಅಲ್ಲು ಅರ್ಜುನ್ ಹೇಳಿದರು.
ನಟಿ ರಶ್ಮಿಕಾ ಮಂದಣ್ಣ ಮಾತನಾಡಿ’“ ಇಂದು ನನ್ನ ಪೂರ್ಣ ಹೃದಯ, ನನ್ನ ಸಂಪೂರ್ಣ ವಿಶ್ವಾಸ ಮತ್ತು ಅತೀ ಉತ್ಸಾಹದಿಂದ ‘ಪುಷ್ಪ 2’ ಡಿಸೆಂಬರ್ 5 ಕ್ಕೆ ಬರಲಿದೆ ಎಂದು ಹೆಮ್ಮೆಯಿಂದ ಘೋಷಿಸುತ್ತೇನೆ.ನಟಿಯಾಗಿ ನನಗೆ ಇದು ಏಳು ವರ್ಷಗಳ ಪಯಣ, ಅದರಲ್ಲಿ ಐದು ವರ್ಷ ನಾನು ‘ಪುಷ್ಪ’ ಜತೆ ಇದ್ದೇನೆ. ಈ ಚಿತ್ರದೊಂದಿಗೆ, ಹೇಗೆ ಪ್ರತಿಕ್ರಿಯಿಸಬೇಕೆಂದು ನನಗೆ ತಿಳಿದಿಲ್ಲ. ಅದೀಗ ಕೊನೆಗೊಳ್ಳುತ್ತಿದೆ ಎಂದು ನನಗೆ ತುಂಬಾ ಬೇಸರವಾಗಿದೆ. ಚಿತ್ರ ಬಿಡುಗಡೆಗಾಗಿ ನಾನು ತುಂಬಾ ಉತ್ಸುಕಳಾಗಿದ್ದೇನೆ. ಹಾಗಾಗಿ ನಾನು ಸ್ವಲ್ಪಮಟ್ಟಿಗೆ ಆ ಗುಂಗಿನಲ್ಲೇ ಮುಳುಗಿದ್ದೇನೆ, ”ಎಂದರು.
‘ಅಲ್ಲು ಅರ್ಜುನ್ ಅವರ ಜತೆ ಕೆಲಸ ಮಾಡುವ ವೇಳೆ ನಾನು ನರ್ವಸ್ ಆಗಿದ್ದೆ’ ಎಂದು 28ರ ಹರೆಯದ ರಶ್ಮಿಕಾ ಮಂದಣ್ಣ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪೊಂಗಲ್ – ಸಂಕ್ರಾಂತಿಗೆ ಮನರಂಜನೆಯ ಹಬ್ಬದೂಟ: ಇಲ್ಲಿದೆ ರಿಲೀಸ್ ಆಗಲಿರುವ ಚಿತ್ರಗಳ ಪಟ್ಟಿ
Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್ ಜಾಮೀನು ಮಂಜೂರು
Marco: ಕೋಟಿ ಕೋಟಿ ಗಳಿಕೆ ಕಾಣುತ್ತಿರುವ ʼಮಾರ್ಕೊʼಗೆ ಪೈರಸಿ ಕಾಟ; ಹೆಚ್ ಡಿ ಪ್ರಿಂಟ್ ಲೀಕ್
ಕೋಮಾದಲ್ಲಿದ್ದ ನನ್ನ ಮಗನ ನೆನಪಿನ ಶಕ್ತಿ ಮರಳಲು ದಳಪತಿ ವಿಜಯ್ ಕಾರಣವೆಂದ ಖ್ಯಾತ ನಟ
Mollywood: 13 ವರ್ಷದ ಬಳಿಕ ರೀ- ರಿಲೀಸ್ ಆಗಲಿದೆ ಸೂಪರ್ ಹಿಟ್ ʼಉಸ್ತಾದ್ ಹೊಟೇಲ್ʼ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nagavalli Bangale Movie: ಸೆನ್ಸಾರ್ ಪಾಸಾದ ನಾಗವಲ್ಲಿ
Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್ʼ ಟ್ರೇಲರ್ ಔಟ್- ಮಿಂಚಿದ ಅಕ್ಷಯ್
Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ
Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು
Hunsur: ಬ್ಯಾರಿಕೇಡ್ ಗೆ ಸಿಲುಕಿದ ಗಜರಾಜ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.