Tollywood: ಬಹುನಿರೀಕ್ಷಿತ ʼಪುಷ್ಪ-2ʼ ರಿಲೀಸ್ ಡೇಟ್ ಮುಂದೂಡಿಕೆ?
Team Udayavani, May 16, 2024, 3:38 PM IST
ಹೈದರಾಬಾದ್: ಅಲ್ಲು ಅರ್ಜುನ್ ಅವರ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ʼಪುಷ್ಪ-2ʼ ಚಿತ್ರದ ಬಗ್ಗೆ ದಿನ ಕಳೆದಂತೆ ಕುತೂಹಲ ಹೆಚ್ಚಾಗುತ್ತಿದೆ. ಇನ್ನೇನು ಕೆಲವೇ ತಿಂಗಳಿನಲ್ಲಿ ಬಿಗ್ ಸ್ಕ್ರೀನ್ ಮೇಲೆ ಸಿನಿಮಾ ಅಪ್ಪಳಿಸಲಿದೆ.
ಶೂಟಿಂಗ್ ಹಂತದಲ್ಲಿರುವ ಸಿನಿಮಾ ಪೋಸ್ಟರ್, ಬರ್ತ್ ಡೇ ಟೀಸರ್ ಹಾಗೂ ಫಸ್ಟ್ ಸಿಂಗಲ್ ಹಾಡಿನಿಂದ ಹೈಪ್ ಹೆಚ್ಚಿಸಿದೆ. ಇತ್ತೀಚೆಗೆ ಬಂದ ʼಪುಷ್ಪ ಪುಷ್ಪʼ ಹಾಡು ಸಖತ್ ಸೌಂಡ್ ಮಾಡಿದೆ.
ದೊಡ್ಡಮಟ್ಟದಲ್ಲೇ ಸದ್ದು ಮಾಡಿರುವ ʼಪುಷ್ಪ-2ʼ ಸಿನಿಮಾದ ಬಗ್ಗೆ ಟಾಲಿವುಡ್ ನಲ್ಲಿ ನೆಗೆಟಿವ್ ಸುದ್ದಿಯೊಂದು ಹರಿದಾಡಿದೆ. ರಿಲೀಸ್ ಗಾಗಿ ಕಾಯುತ್ತಿರುವ ಫ್ಯಾನ್ಸ್ ಗಳಿಗೆ ಈ ವಿಚಾರ ಭಾರೀ ನಿರಾಸೆ ಮೂಡಿಸಿದೆ.
ʼಪುಷ್ಪ-2ʼ ಚಿತ್ರದ ರಿಲೀಸ್ ಡೇಟ್ ಮುಂದೂಡಿಕೆ ಆಗಿದೆ ಎನ್ನುವ ವಿಚಾರ ಟಾಲಿವುಡ್ ನಲ್ಲಿ ಹರಿದಾಡಿದೆ.
ಚಿತ್ರದ ಎಡಿಟರ್ ಆಂಟೋನಿ ರೂಬೆನ್ ದಿನಾಂಕ ಹೊಂದಾಣಿಕೆಯಾಗದ ಕಾರಣದಿಂದ ಸಿನಿಮಾದಿಂದ ಹೊರನಡೆದಿದ್ದಾರೆ. ಅವರ ಬದಲಿಗೆ ನವೀನ್ ನೂಲಿ ಅವರು ಬರಲಿದ್ದಾರೆ. ಈ ಕಾರಣದಿಂದ ಸಿನಿಮಾದ ರಿಲೀಸ್ ಡೇಟ್ ಮುಂದೂಡಿಕೆ ಆಗಿದೆ ಎಂದು ಕೆಲ ತೆಲುಗು ವೆಬ್ ಸೈಟ್ ಗಳು ವರದಿ ಮಾಡಿದೆ.
ಆದರೆ ರಿಲೀಸ್ ಡೇಟ್ ಯಾವುದೇ ಕಾರಣದಿಂದ ಮುಂದೂಡಿಕೆ ಆಗಿಲ್ಲ ಎಂದು ಮೂಲವೊಂದು ಹೇಳಿರುವುದಾಗಿ ʼಹಿಂದೂಸ್ತಾನ್ ಟೈಮ್ಸ್ʼ ವರದಿ ಮಾಡಿದೆ.
ʼಪುಷ್ಪ 2ʼ ಆಗಸ್ಟ್ 15 ರಂದೇ ಬಿಡುಗಡೆಯಾಗಲಿದೆ. ಇದರಲ್ಲಿ ಯಾವುದೇ ಸಂಶಯವಿಲ್ಲ. ಅಲ್ಲು ಅರ್ಜುನ್ ಈ ತಿಂಗಳು ಚಿತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸಲಿದ್ದಾರೆ. ಜೂನ್ ವೇಳೆಗೆ ಉಳಿದ ಚಿತ್ರೀಕರಣವನ್ನು ಪೂರ್ಣಗೊಳಿಸಲಾಗುವುದು. ಹಾಗಾಗಿ ಚಿತ್ರ ತಡವಾಗುವ ಸಾಧ್ಯತೆ ಇಲ್ಲ” ಎಂದು ಮೂಲಗಳು ಹೇಳಿರುವುದಾಗಿ ವರದಿ ತಿಳಿಸಿದೆ.
ಚಿತ್ರದ ಎಡಿಟರ್ ಬದಲಾಯಿಸಲಾಗಿದೆಯೇ ಎನ್ನುವ ಪ್ರಶ್ನೆಗೆ ಸ್ಷಷ್ಟವಾದ ಉತ್ತರ ಮೂಲಗಳಿಂದ ತಿಳಿದು ಬಂದಿಲ್ಲ.
ಸುಕುಮಾರ್ ನಿರ್ದೇಶನದ ಈ ಸಿನಿಮಾದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಫಾಹಾದ್ ಫಾಸಿಲ್ ಮುಂತಾದವರು ನಟಿಸಿದ್ದಾರೆ. ಇದೇ ಆಗಸ್ಟ್ 15 ರಂದು ಸಿನಿಮಾ ತೆರೆಕಾಣಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !
Kollywood: ʼಅಮರನ್ʼ ಚಿತ್ರತಂಡದಿಂದ 1 ಕೋಟಿ ರೂ. ಪರಿಹಾರ ಕೇಳಿದ ವಿದ್ಯಾರ್ಥಿ; ಕಾರಣವೇನು?
Kollywood: ಧನುಷ್ – ಐಶ್ವರ್ಯಾ ವಿಚ್ಚೇದನ ಪ್ರಕರಣ; ನ.27ಕ್ಕೆ ಅಂತಿಮ ತೀರ್ಪು
Tollywood: ನಾನು ಸಿಂಗಲ್ ಅಲ್ಲ.. ರಶ್ಮಿಕಾ ಜತೆಗಿನ ಸಂಬಂಧ ದೃಢಪಡಿಸಿದ್ರಾ ದೇವರಕೊಂಡ?
Malayalam Actor: ಶ್ವಾಸಕೋಶದ ಕಾಯಿಲೆ; ಖ್ಯಾತ ನಟ ಮೇಘನಾಥನ್ ನಿಧನ
MUST WATCH
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ
ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ಸಾವು
ಹೊಸ ಸೇರ್ಪಡೆ
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ
IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !
Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.