Kollywood: ʼಅಮರನ್‌ʼ ಚಿತ್ರತಂಡದಿಂದ 1 ಕೋಟಿ ರೂ. ಪರಿಹಾರ ಕೇಳಿದ ವಿದ್ಯಾರ್ಥಿ; ಕಾರಣವೇನು?

Team Udayavani, Nov 21, 2024, 6:50 PM IST

Kollywood: ʼಅಮರನ್‌ʼ ಚಿತ್ರತಂಡದಿಂದ 1 ಕೋಟಿ ರೂ. ಪರಿಹಾರ ಕೇಳಿದ ವಿದ್ಯಾರ್ಥಿ; ಕಾರಣವೇನು?

ಚೆನ್ನೈ: ಇತ್ತೀಚೆಗೆ ತೆರೆಕಂಡ ಶಿವಕಾರ್ತಿಕೇಯನ್ (Sivakarthikeyan), ಸಾಯಿ ಪಲ್ಲವಿ (Sai Pallavi) ಅಭಿನಯದ ʼಅಮರನ್‌ʼ (Amaran) ಕಾಲಿವುಡ್‌ ಸಿನಿರಂಗದಲ್ಲಿ ಮೋಡಿ ಮಾಡಿದೆ.

ಮೇಜರ್ ಮುಕುಂದ್ ವರದರಾಜನ್ ಸಾಹಸಗಾಥೆಯನ್ನು ಸ್ಕ್ರೀನ್‌ ಮೇಲೆ ಪ್ರೆಸೆಂಟ್‌ ಮಾಡಿರುವ ರೀತಿಗೆ ಸಿನಿಮಂದಿ ಫಿದಾ ಆಗಿದ್ದಾರೆ. ಶೀಘ್ರದಲ್ಲಿ ಸಿನಿಮಾ ಓಟಿಟಿ ಬರುತ್ತದೆ ಎನ್ನಲಾಗುತ್ತಿತ್ತು. ಆದರೆ ಬಾಕ್ಸ್‌ ಆಫೀಸ್‌ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿರುವ ಹಿನ್ನೆಲೆ ಓಟಿಟಿ ರಿಲೀಸ್‌ ಡೇಟ್‌ ಮುಂದೂಡಿಕೆ ಆಗಿದೆ.

ʼಅಮರನ್‌ʼ ಸಿನಿಮಾದಲ್ಲಿನ ಒಂದು ದೃಶ್ಯ ಚೆನ್ನೈ ಮೂಲದ ವಿದ್ಯಾರ್ಥಿಯೊಬ್ಬನಿಗೆ ಇಕ್ಕಟ್ಟಿನ ಪರಿಸ್ಥಿತಿಯನ್ನು ತಂದಿಟ್ಟಿರುವ ಬಗ್ಗೆ ವರದಿಯಾಗಿತ್ತು. ಇದೀಗ  ಈ ವಿದ್ಯಾರ್ಥಿಯೇ ಚಿತ್ರತಂಡಕ್ಕೆ ಕಾನೂನು ಸಂಕಷ್ಟ ತಂದಿಟ್ಟಿದ್ದಾನೆ.

ಏನಿದು ಘಟನೆ?: ʼಅಮರನ್‌ʼ ಸಿನಿಮಾದಲ್ಲಿ ಮೇಜರ್ ಮುಕುಂದ್ ವರದರಾಜನ್ ಅವರ ಪತ್ನಿಯ ಪಾತ್ರದಲ್ಲಿ ಸಾಯಿಪಲ್ಲವಿ (ಇಂಧೂ ರೆಬೆಕ್ಕಾ ವರ್ಗೀಸ್) ಕಾಣಿಸಿಕೊಂಡಿದ್ದಾರೆ.  ಸಿನಿಮಾದಲ್ಲಿ ಸಾಯಿಪಲ್ಲವಿ ಕಾಗದವೊಂದರಲ್ಲಿ ತಮ್ಮ ಮೊಬೈಲ್‌ ನಂಬರ್‌ ವೊಂದನ್ನು ಬರೆದು ಶಿವಕಾರ್ತಿಕೇಯನ್ ಅವರ ಬಳಿ ಎಸೆಯುವ ದೃಶ್ಯವಿದೆ. ಈ ಕಾಗದದಲ್ಲಿ ಎರಡು ನಂಬರ್‌ ಇರುತ್ತದೆ.

ಅಸಲಿಗೆ ವಿಷಯ ಏನಂದರೆ ಕಾಗದದಲ್ಲಿ ಸಾಯಿಪಲ್ಲವಿ ಬರೆದ ನಂಬರ್‌ ಗಳಿಗೆ ಪ್ರೇಕ್ಷಕರು ಕರೆ ಮಾಡಿದ್ದಾರೆ. ಇದರಲ್ಲಿ ಒಂದು ನಂಬರ್‌ ಚಾಲ್ತಿಯಲ್ಲಿ ಇಲ್ಲ. ಆದರೆ ಇನ್ನೊಂದು ನಂಬರ್‌ ಚೆನ್ನೈನ ವಿದ್ಯಾರ್ಥಿ ವಾಗೀಶನ್ ವಿವಿ ಎನ್ನುವವನದ್ದು.

ಸಿನಿಮಾ ನೋಡಿದವರು ಕಾಗದದಲ್ಲಿನ ನಂಬರ್‌ ನಿಜವಾಗಿಯೂ ಸಾಯಿಪಲ್ಲವಿ ಅವರ ನಂಬರ್‌ ಆಗಿದೆ ಅಥವಾ ಮೇಜರ್ ಮುಕುಂದ್ ವರದರಾಜನ್ ಅವರ ಪತ್ನಿ ಇಂಧೂ ರೆಬೆಕ್ಕಾ ವರ್ಗೀಸ್ ಅವರ ನಂಬರ್‌ ಆಗಿರಬಹುದೆಂದು ನೂರಾರು ಕರೆಗಳನ್ನು ಮಾಡಿದ್ದಾರೆ.

ಎಲ್ಲ ಕರೆಗಳಿಗೆ ಉತ್ತರಿಸಿ ಉತ್ತರಿಸಿ ವಾಗೀಶನ್ ಸುಸ್ತಾಗಿದ್ದಾನೆ. ಇದಲ್ಲದೆ ಟ್ರೂ ಕಾಲರ್‌ನಲ್ಲಿ ಯಾರೋ ಕಿಡಿಗೇಡಿಗಳು ವಾಗೀಶನ್ ಅವರ ನಂಬರ್‌ ಗೆ ರೆಬೆಕ್ಕಾ ಅವರ ಹೆಸರು ಸೇರಿಸಿ ಎಡಿಟ್‌ ಮಾಡಿದ್ದಾರೆ. ಇದು ವಾಗೀಶನ್ ಮತ್ತಷ್ಟು ಸಂಕಷ್ಟ ತಂದಿಟ್ಟಿದೆ.

ಚಿತ್ರತಂಡದ ಎಡವಟ್ಟಿನಿಂದ ಸಮಸ್ಯೆಯನ್ನು ಎದುರಿಸಿರುವ ವಿದ್ಯಾರ್ಥಿ ವಾಗೀಶನ್ ಚಿತ್ರದಲ್ಲಿ ತಮ್ಮ ಮೊಬೈಲ್ ಸಂಖ್ಯೆಯನ್ನು ಅನುಮತಿಯಿಲ್ಲದೆ ಬಳಸಲಾಗಿದೆ. ಚಿತ್ರದ ಒಂದು ದೃಶ್ಯದಲ್ಲಿ ತೆರೆಯ ಮೇಲೆ ಪ್ರದರ್ಶಿಸಲಾಗಿದೆ ಎಂದು ಆರೋಪಿಸಿ ವಿದ್ಯಾರ್ಥಿ ಅಮರನ್ ನಿರ್ಮಾಪಕರಿಂದ₹ 1.1 ಕೋಟಿ ರೂ. ಪರಿಹಾರವನ್ನು ಕೋರಿ ಚಿತ್ರತಂಡಕ್ಕೆ ಲೀಗಲ್‌ ನೋಟಿಸ್‌ ಕಳುಹಿಸಿದ್ದಾರೆ.

ತನ್ನ ಈ ಸಂಖ್ಯೆಯನ್ನು ಬ್ಯಾಂಕ್‌ ಹಾಗೂ ಇತರೆ ದಾಖಲೆಗಳಿಗೆ ನೀಡಿದ್ದು, ತಕ್ಷಣಕ್ಕೆ ಬದಲು ಮಾಡಲು ಆಗುತ್ತಿಲ್ಲ ಎಂದು ವಾಗೀಶನ್ ಹೇಳಿದ್ದಾರೆ.

ಟಾಪ್ ನ್ಯೂಸ್

ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್‌ ಸೂರ್ಯವಂಶಿ

Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್‌ ಸೂರ್ಯವಂಶಿ

virat-Hotel

BBMP Notice: ವಿರಾಟ್‌ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್‌

Shabarimala

Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್‌ ಬುಕ್ಕಿಂಗ್‌ ತಾತ್ಕಾಲಿಕ ರದ್ದು

Dinesh-Gundurao

Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್‌

CT-Ravi-BJP

Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ

Mulki-kambala

Kambala Kalarava: ರಾಜ ಮನೆತನದ ಐತಿಹ್ಯವಿರುವ ಮೂಲ್ಕಿ ಸೀಮೆಯ ʼಅರಸು ಕಂಬಳʼ

IND-W vs WI: ವನಿತೆಯರ ಏಕದಿನ ಮುಖಾಮುಖಿ

IND-W vs WI: ವನಿತೆಯರ ಏಕದಿನ ಮುಖಾಮುಖಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ

Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ

Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ

Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ

Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ

Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ

Malayalam actor: ಹಾಲಿವುಡ್‌ನಲ್ಲೂ ಮಿಂಚಿದ್ದ ಮಾಲಿವುಡ್‌ನ ಹಿರಿಯ ನಟ ಥಾಮಸ್ ನಿಧನ

Malayalam actor: ಹಾಲಿವುಡ್‌ನಲ್ಲೂ ಮಿಂಚಿದ್ದ ಮಾಲಿವುಡ್‌ನ ಹಿರಿಯ ನಟ ಥಾಮಸ್ ನಿಧನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್‌ ಸೂರ್ಯವಂಶಿ

Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್‌ ಸೂರ್ಯವಂಶಿ

virat-Hotel

BBMP Notice: ವಿರಾಟ್‌ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್‌

Shabarimala

Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್‌ ಬುಕ್ಕಿಂಗ್‌ ತಾತ್ಕಾಲಿಕ ರದ್ದು

Dinesh-Gundurao

Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್‌

CT-Ravi-BJP

Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.