Amaran trailer: ಮೇಜರ್‌ ಮುಕುಂದ್‌ ಸಾಹಸಗಾಥೆಗೆ ಜೀವ ತುಂಬಿದ ಶಿವಕಾರ್ತಿಕೇಯನ್

Team Udayavani, Oct 23, 2024, 7:23 PM IST

15

ಚೆನ್ನೈ: ಕಾಲಿವುಡ್‌ನಲ್ಲಿ ರಿಲೀಸ್‌ ಆಗಲಿರುವ ವರ್ಷದ ಬಹುನಿರೀಕ್ಷಿತ ಪ್ಯಾನ್‌ ಇಂಡಿಯಾ ʼಅಮರನ್‌ʼ (Amaran) ಸಿನಿಮಾದ ಟ್ರೇಲರ್‌ (Amaran trailer) ಬುಧವಾರ (ಅ.23ರಂದು) ರಿಲೀಸ್‌ ಆಗಿದೆ.

ಶಿವಕಾರ್ತಿಕೇಯನ್ (Sivakarthikeyan) ಮತ್ತು ಸಾಯಿ ಪಲ್ಲವಿ (Sai Pallavi) ಮುಖ್ಯ ಭೂಮಿಕೆಯ ʼಅಮರನ್‌ʼ ಟ್ರೇಲರ್‌ ನೋಡಿ ಫ್ಯಾನ್ಸ್‌ ಫಿದಾ ಆಗಿದ್ದು, ಕಣ್ಣಂಚಿನಲ್ಲಿ ನೀರು ಬರುವಂತೆ ಟ್ರೇಲರ್‌ ಮೂಡಿಬಂದಿದೆ.

ಮೇಜರ್ ಮುಕುಂದ್ ವರದರಾಜನ್ ಅವರ ಸಾಹಸಗಾಥೆಯನ್ನು ಒಳಗೊಂಡಿರುವ ಸಿನಿಮಾದಲ್ಲಿ ಶಿವಕಾರ್ತಿಕೇಯನ್ ಯೋಧನಾಗಿ ಕಾಣಿಸಿಕೊಂಡಿದ್ದಾರೆ.

ಟ್ರೇಲರ್‌ನಲ್ಲಿ ಏನಿದೆ?:

ಸೇನಾ ರಜೆಯಲ್ಲಿ ಮನೆಗೆ ಬಂದಿರುವ ಯೋಧ ತನ್ನ ಮಗಳೊಂದಿಗೆ ಇರುವ ಕ್ಷಣವನ್ನು ಮೊದಲಿಗೆ ತೋರಿಸಲಾಗಿದೆ. ಮಗಳಿಗೆ ಒಂದು ಪ್ರೀತಿಯ ಅಪ್ಪುಗೆ ಕೊಟ್ಟು ಮತ್ತೆ ದೇಶ ಸೇವೆಗೆ ಹೋಗುವ ದೃಶ್ಯವನ್ನು ತೋರಿಸಲಾಗಿದೆ.

ಗಡಿ ಕಾಯುವ ತನ್ನ ಪತಿಯನ್ನು ನೆನೆಯುವ ಪತ್ನಿ, ಇರುವ ಒಬ್ಬನೇ ಮಗನನ್ನು ಸೇನೆಗೆ ಕಳುಹಿಸಲು ಹಿಂಜರಿಯುವ ತಾಯಿಯ ಮನಸ್ಸು, ಆರ್ಮಿ ನನಗೆ ಬರೀ ಜಾಬ್‌ ಅಲ್ಲ, ಆರ್ಮಿ ನನ್ನ ಲೈಫ್‌ ಎಂದು ದೇಶದ ಗಡಿ ಕಾಯುವ ವೀರ ಯೋಧನ ಕೆಚ್ಚೆದೆಯ ಹೋರಾಟವನ್ನು ಟ್ರೇಲರ್‌ನಲ್ಲಿ ತೋರಿಸಲಾಗಿದೆ.

ಆಜಾದಿಗಾಗಿ ದಂಗೆ ಎಬ್ಬಿಸುವ ಉಗ್ರರನ್ನು ಸದೆಬಡಿಯುವ ಇಂಡಿಯನ್‌ ಆರ್ಮಿಯ ಹೋರಾಟದಲ್ಲಿ ಮೇಜರ್‌ ಆಗಿ ಹೋರಾಡುವ ಮುಕುಂದ್‌ ಬದುಕಿನ ಕಥೆಯಲ್ಲಿ ದೃಶ್ಯರೂಪದಲ್ಲಿ ಶಿವಕಾರ್ತಿಕೇಯನ್ ಜೀವಿಸಿದ್ದಾರೆ.

ನಮ್ಮನ್ನು ಬಿಟ್ಟು ನೀನು ದೂರ ಆಗಿದ್ರೂ ಪರವಾಗಿಲ್ಲ, ಸೇಫ್‌ ಆಗಿರು ಎನ್ನುವ ಡೈಲಾಗ್ಸ್‌ ಗಳು ನೋಡುಗರ ಕಣ್ಣಂಚಿನಲ್ಲಿ ನೀರು ತರಿಸುತ್ತವೆ.

ಈ ಸಿನಿಮಾವನ್ನು ಕಮಲ್‌ ಹಾಸನ್‌ ಅವರ ರಾಜ್ ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್,  ಸೋನಿ ಪಿಕ್ಚರ್ಸ್ ಫಿಲ್ಮ್ಸ್ ಜಂಟಿಯಾಗಿ ನಿರ್ಮಾಣ ಮಾಡುತ್ತಿದೆ.

ರಾಜಕುಮಾರ್ ಪೆರಿಯಸಾಮಿ ನಿರ್ದೇಶನದ ಸಿನಿಮಾದಲ್ಲಿ ಸಾಯಿ ಪಲ್ಲವಿ, ಭುವನ್ ಅರೋರಾ, ರಾಹುಲ್ ಬೋಸ್ ಮುಂತಾದವರು ನಟಿಸಿದ್ದಾರೆ. ಇದೇ ಅಕ್ಟೋಬರ್‌ 31ರಂದು ಸಿನಿಮಾ ತೆರೆಗೆ ಬರಲಿದೆ.

ʼಅಮರನ್‌ʼ ಶಿವ ಆರೂರ್ ಮತ್ತು ರಾಹುಲ್ ಸಿಂಗ್ ಅವರ ʼಇಂಡಿಯಾಸ್ ಮೋಸ್ಟ್ ಫಿಯರ್ ಲೆಸ್: ಟ್ರೂ ಸ್ಟೋರೀಸ್ ಆಫ್ ಮಾಡರ್ನ್ ಮಿಲಿಟರಿʼ ಕೃತಿಯ ರೂಪಾಂತರವಾಗಿದೆ. ಇದು ಮೇಜರ್ ವರದರಾಜನ್ ಅವರ ಶೌರ್ಯದ ಕಥೆಯನ್ನೊಳಗೊಂಡಿದೆ.

ಟಾಪ್ ನ್ಯೂಸ್

1-naga

Mahakumbh; ಬಸಂತ್ ಪಂಚಮಿ ದಿನ 2.33 ಕೋಟಿ ಜನರ ಅಮೃತ ಸ್ನಾನ

office- bank

Working hours; 70 ರಿಂದ 90 ಗಂಟೆ ಕೆಲಸದ ಅವಧಿ: ಪ್ರತಿಕ್ರಿಯೆ ನೀಡಿದ ಕೇಂದ್ರ ಸರಕಾರ

ARMY (2)

Kashmir; ಉಗ್ರರ ದಾಳಿಯಲ್ಲಿ ನಿವೃತ್ತ ಯೋಧ ಹುತಾತ್ಮ: ಪತ್ನಿ, ಮಗಳಿಗೆ ಗಾಯ

Mandya-VC

Mandya: ವಿಸಿ ನಾಲೆಗೆ ಕಾರು ಬಿದ್ದು ಇಬ್ಬರ ದುರ್ಮರಣ, ಒಬ್ಬ ನಾಪತ್ತೆ, ಮತ್ತೊಬ್ಬನ ರಕ್ಷಣೆ

1-budget

Stupid self-confidence: ಲೋಕಸಭೆ ಭಾಷಣದ ಬಗ್ಗೆ ರಾಹುಲ್ ವಿರುದ್ಧ ನಿರ್ಮಲಾ ವಾಗ್ದಾಳಿ

Udupi: ಜಿಲ್ಲಾ ಸಹಕಾರ ಯೂನಿಯನ್‌ ಅಧ್ಯಕ್ಷರಾಗಿ ಬಿ.ಜಯಕರ ಶೆಟ್ಟಿ ಇಂದ್ರಾಳಿ ಆಯ್ಕೆ

Udupi: ಜಿಲ್ಲಾ ಸಹಕಾರ ಯೂನಿಯನ್‌ ಅಧ್ಯಕ್ಷರಾಗಿ ಬಿ.ಜಯಕರ ಶೆಟ್ಟಿ ಇಂದ್ರಾಳಿ ಆಯ್ಕೆ

Gudibande-Suside

Gudibande: ಮೈಕ್ರೋ ಫೈನಾನ್ಸ್ ಹಾವಳಿ; ಸಾಲದ ಸುಳಿಗೆ ಸಿಲುಕಿ ಕೂಲಿ ಕಾರ್ಮಿಕ ಆತ್ಮಹ*ತ್ಯೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೆಂಗಳೂರಿನಲ್ಲಿ ʼಟಾಕ್ಸಿಕ್‌ʼ ಶೂಟ್:‌ ಒಂದೇ ಫ್ರೇಮ್‌ನಲ್ಲಿ ಕಾಣಿಸಲಿದ್ದಾರೆ ನಾಲ್ವರು ನಟಿಯರು

ಬೆಂಗಳೂರಿನಲ್ಲಿ ʼಟಾಕ್ಸಿಕ್‌ʼ ಶೂಟ್:‌ ಒಂದೇ ಫ್ರೇಮ್‌ನಲ್ಲಿ ಕಾಣಿಸಲಿದ್ದಾರೆ ನಾಲ್ವರು ನಟಿಯರು

Kannappa: ವಿಷ್ಣು ಮಂಚು ʼಕಣ್ಣಪ್ಪʼ ಚಿತ್ರಕ್ಕೆ ʼರುದ್ರʼನಾದ ಪ್ರಭಾಸ್; ಫಸ್ಟ್‌ ಲುಕ್‌ ಔಟ್

Kannappa: ವಿಷ್ಣು ಮಂಚು ʼಕಣ್ಣಪ್ಪʼ ಚಿತ್ರಕ್ಕೆ ʼರುದ್ರʼನಾದ ಪ್ರಭಾಸ್; ಫಸ್ಟ್‌ ಲುಕ್‌ ಔಟ್

ಸ್ನಾನ ಮಾಡುವಾಗ ನನ್ನ ದೇಹದ ಪ್ರತಿ ಭಾಗಗಳನ್ನು ಮುಟ್ಟಿ ಥ್ಯಾಂಕ್ಸ್‌ ಹೇಳುತ್ತೇನೆ ಎಂದ ತಮನ್ನಾ

ಸ್ನಾನ ಮಾಡುವಾಗ ನನ್ನ ದೇಹದ ಪ್ರತಿ ಭಾಗಗಳನ್ನು ಮುಟ್ಟಿ ಥ್ಯಾಂಕ್ಸ್‌ ಹೇಳುತ್ತೇನೆ ಎಂದ ತಮನ್ನಾ

Samantha: ಡೇಟಿಂಗ್‌ ವದಂತಿ ನಡುವೆ ಮತ್ತೆ ಖ್ಯಾತ ನಿರ್ದೇಶಕನ ಜತೆ ಕಾಣಿಸಿಕೊಂಡ ನಟಿ ಸಮಂತಾ

Samantha: ಡೇಟಿಂಗ್‌ ವದಂತಿ ನಡುವೆ ಮತ್ತೆ ಖ್ಯಾತ ನಿರ್ದೇಶಕನ ಜತೆ ಕಾಣಿಸಿಕೊಂಡ ನಟಿ ಸಮಂತಾ

Kollywood: ಬಹು ನಿರೀಕ್ಷಿತ ʼವಿದಾಮುಯರ್ಚಿʼಗೆ ಅಜಿತ್‌ ಪಡೆದ ಸಂಭಾವನೆ ಎಷ್ಟು?

Kollywood: ಬಹು ನಿರೀಕ್ಷಿತ ʼವಿದಾಮುಯರ್ಚಿʼಗೆ ಅಜಿತ್‌ ಪಡೆದ ಸಂಭಾವನೆ ಎಷ್ಟು?

MUST WATCH

udayavani youtube

ಶ್ರೀ ಕೃಷ್ಣ ಮುಖ್ಯ ಪ್ರಾಣ ದೇವರ ದರ್ಶನ ಪಡೆದ e ಹಾಗೂ ಡಾ| ವೀರೇಂದ್ರ ಹೆಗ್ಗಡೆ

udayavani youtube

ಧರ್ಮಸ್ಥಳ ಕ್ಷೇತ್ರದಂತೆ ಎಸ್.ಡಿ.ಎಂ ಉಜಿರೆ ವೈದ್ಯಕೀಯ ತಂಡದಿಂದ ನಡೆಯಿತೇ ಪವಾಡ

udayavani youtube

ಬದನೆ ಕೃಷಿ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ

udayavani youtube

ಅಲ್ಲಲ್ಲಿ ನಡೆಯುತ್ತಿರುವ ಗೋ ಹಿಂಸೆ ಖಂಡಿಸುತ್ತೇವೆ :ಪೇಜಾವರ ಶ್ರೀ

udayavani youtube

ಉಡುಪಿ ಶ್ರೀ ಕೃಷ್ಣ ನಗರಿಯ ಡಿಸೆಂಬರ್ ತಿಂಗಳಿನ ಮಾಸ ವೈಭವ

ಹೊಸ ಸೇರ್ಪಡೆ

Hunsur: ಮಾಂಸಕ್ಕಾಗಿ ಜಿಂಕೆ ಕೊಂದವನ ಸೆರೆ; ಮತ್ತಿಬ್ಬರು ಪರಾರಿ

Hunsur: ಮಾಂಸಕ್ಕಾಗಿ ಜಿಂಕೆ ಕೊಂದವನ ಸೆರೆ; ಮತ್ತಿಬ್ಬರು ಪರಾರಿ

1-naga

Mahakumbh; ಬಸಂತ್ ಪಂಚಮಿ ದಿನ 2.33 ಕೋಟಿ ಜನರ ಅಮೃತ ಸ್ನಾನ

Hunsur: ಶಾಲಾ ವಾಹನ ಡಿಕ್ಕಿ ಹೊಡೆದು ರೈತ ಸಾವು

Hunsur: ಶಾಲಾ ವಾಹನ ಡಿಕ್ಕಿ ಹೊಡೆದು ರೈತ ಸಾವು

office- bank

Working hours; 70 ರಿಂದ 90 ಗಂಟೆ ಕೆಲಸದ ಅವಧಿ: ಪ್ರತಿಕ್ರಿಯೆ ನೀಡಿದ ಕೇಂದ್ರ ಸರಕಾರ

ARMY (2)

Kashmir; ಉಗ್ರರ ದಾಳಿಯಲ್ಲಿ ನಿವೃತ್ತ ಯೋಧ ಹುತಾತ್ಮ: ಪತ್ನಿ, ಮಗಳಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.