Kollywood: 33 ವರ್ಷದ ಬಳಿಕ ರಜಿನಿ ಜತೆ ಮಣಿರತ್ನಂ ಸಿನಿಮಾ? ನಿರ್ದೇಶಕರ ಪತ್ನಿ ಹೇಳಿದ್ದೇನು?
Team Udayavani, Oct 16, 2024, 6:14 PM IST
ಚೆನ್ನೈ: ಕಾಲಿವುಡ್‌ನಲ್ಲಿ ಕಳೆದ ಕೆಲ ದಿನಗಳಿಂದ ಸೂಪರ್ ಸ್ಟಾರ್ ರಜಿನಿಕಾಂತ್ (Rajinikanth) ಹಾಗೂ ಖ್ಯಾತ ನಿರ್ದೇಶಕ ಮಣಿರತ್ನಂ (Mani Ratnam) ಜತೆಯಾಗಿ ಸಿನಿಮಾ ಮಾಡಲಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ.
ಸೂಪರ್ ಸ್ಟಾರ್ – ಮಣಿರತ್ನಂ ಜತೆಯಲ್ಲಿ ಸಿನಿಮಾ ಮಾಡಲಿದ್ದಾರೆ ಎನ್ನಲಾಗಿದ್ದು, ಕೆಲ ಸ್ಕ್ರಿಪ್ಟ್ ಗಳ ಬಗ್ಗೆ ಆರಂಭಿಕ ಹಂತದ ಮಾತುಕತೆ ನಡೆದಿದೆ ಎಂದು ಹೇಳಲಾಗಿದೆ. ಆದರೆ ಈ ಸುದ್ದಿ ಹರಿದಾಡುತ್ತಿದ್ದಂತೆಯೇ ಇದಕ್ಕೆ ನಿರ್ದೇಶಕ ಮಣಿರತ್ನಂ ಅವರ ಪತ್ನಿ ಸುಹಾಸಿನಿ (Suhasini) ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: Thalapathy 69: 8 ವರ್ಷದ ಬಳಿಕ ಮತ್ತೆ ಪೊಲೀಸ್ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ವಿಜಯ್
“ರಜಿನಿಕಾಂತ್ ಮತ್ತು ಮಣಿ ಅವರಿಗೂ ಇದರ ಬಗ್ಗೆ ತಿಳಿದಿಲ್ಲ ಎಂದು ನಾನು ಭಾವಿಸುತ್ತೇನೆ. ಜನರು ಮಾತ್ರ ಅದರ ಬಗ್ಗೆ ಬರೆಯುತ್ತಿದ್ದಾರೆ” ಎಂದು ಸಂದರ್ಶನವೊಂದರಲ್ಲಿ ಸುಹಾಸಿನಿ ಸ್ಪಷ್ಟನೆ ನೀಡಿದ್ದು, ಆ ಮೂಲಕ ಗೊಂದಲಕ್ಕೆ ತೆರೆ ಎಳೆದಿದ್ದಾರೆ.
ರಜಿನಿ – ಮಣಿರತ್ನಂ ಕಾಂಬಿನೇಷನ್‌ನಲ್ಲಿ ಸಿನಿಮಾ ನಿರೀಕ್ಷೆ ಮಾಡುತ್ತಿದ್ದು ಫ್ಯಾನ್ಸ್ ಗಳಿಗೆ ಇದರಿಂದ ನಿರಾಸೆಯಾಗಿದೆ.
ಈ ಹಿಂದೆ 1991ರಲ್ಲಿ ಮಣಿರತ್ನಂ ರಜಿನಿಕಾಂತ್ ಅವರೊಂದಿಗೆ ʼ ದಳಪತಿʼ(Thalapathi) ಎನ್ನುವ ಸಿನಿಮಾವನ್ನು ಮಾಡಿದ್ದರು. ಈ ಸಿನಿಮಾ ಹಿಂದೂ ಪೌರಾಣಿಕ ಮಹಾಕಾವ್ಯವಾದ ಮಹಾಭಾರತವನ್ನು ಆಧರಿಸಿದ್ದು, ಕರ್ಣ ಮತ್ತು ದುರ್ಯೋಧನ ನಡುವಿನ ಸ್ನೇಹದ ಸುತ್ತ ಚಿತ್ರ ಕಥೆ ಸಾಗುತ್ತದೆ.
ಸೂರ್ಯನಾಗಿ ರಜಿನಿಕಾಂತ್, ದೇವರಾಜ್ ಆಗಿ ಮಮ್ಮುಟ್ಟಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಇದರೊಂದಿಗೆ ಅರವಿಂದ್ ಸ್ವಾಮಿ ,ಜೈಶಂಕರ್, ಅಮರೀಶ್ ಪುರಿ, ಶ್ರೀವಿದ್ಯಾ, ಭಾನುಪ್ರಿಯಾ, ಶೋಬನಾ, ಗೀತಾ ಮುಂತಾದವರು ನಟಿಸಿದ್ದರು.
ಸದ್ಯ ರಜಿನಿಕಾಂತ್ ʼವೆಟ್ಟೈಯನ್ʼ ಸಿನಿಮಾ ಸಕ್ಸಸ್ ಆದ ಖುಷಿಯಲ್ಲಿದ್ದು, ಮಣಿರತ್ನಂ ʼಥಗ್ ಲೈಫ್ʼ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.
ಮುಂದೆ ರಜಿನಿಕಾಂತ್ ʼಕೂಲಿʼ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kanguva: ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಆನ್‌ಲೈನ್‌ನಲ್ಲಿ ʼಕಂಗುವʼ ಫುಲ್ ಮೂವಿ ಲೀಕ್
Kasturi Shankar: ನಟಿ ಕಸ್ತೂರಿ ಶಂಕರ್ ಜಾಮೀನು ಅರ್ಜಿ ವಜಾ; ಶೀಘ್ರ ಬಂಧನ ಸಾಧ್ಯತೆ
Kanguva Movie: ಪ್ರೇಕ್ಷಕರ ಮನದಲ್ಲಿ ಕಂಗೊಳಿಸಿದ ʼಕಂಗುವʼ..ಸಿನಿಮಾ ನೋಡಿದವರು ಹೇಳಿದ್ದೇನು?
Tollywood: ʼಪುಷ್ಪ-2ʼ ಡಬ್ಬಿಂಗ್‌ನಲ್ಲಿ ʼಶ್ರೀವಲ್ಲಿʼ; ಮೊದಲ ರಿವ್ಯೂ ಕೊಟ್ಟ ರಶ್ಮಿಕಾ
Kanguva: ಪ್ಯಾನ್ ಇಂಡಿಯಾ ʼಕಂಗುವʼದಲ್ಲಿ ನಟಿಸಿರುವ ಕಲಾವಿದರ ಸಂಭಾವನೆ ಎಷ್ಟು?
MUST WATCH
ಹೊಸ ಸೇರ್ಪಡೆ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.