Mollywood: ʼಮಾರ್ಕೊʼ ಬಳಿಕ ಮೋಹನ್ ಲಾಲ್ ನಿರ್ದೇಶನದ ʼಬರೋಜ್ʼ ಚಿತ್ರಕ್ಕೂ ಪೈರಸಿ ಕಾಟ
Team Udayavani, Jan 5, 2025, 4:45 PM IST
ಕೊಚ್ಚಿ: ಮಾಲಿವುಡ್ ಸೂಪರ್ ಸ್ಟಾರ್ ಮೋಹನ್ ಲಾಲ್ (Malayalam superstar Mohanlal) ಅವರ ಚೊಚ್ಚಲ ನಿರ್ದೇಶನದ ʼಬರೋಜ್ʼ (Barroz) ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ನಡುವೆ ಚಿತ್ರಕ್ಕೆ ಪೃರಸಿ ಕಾಟ ಕಾಡಿದೆ.
ʼಬರೋಜ್: ಗಾರ್ಡಿಯನ್ ಆಫ್ ಟ್ರೆಷರ್ʼ(Barroz: Guardian of Treasure) ಒಂದು ಫ್ಯಾಂಟಸಿ ಚಿತ್ರವಾಗಿದ್ದು, ಮಕ್ಕಳನ್ನು ಕೇಂದ್ರಿಕರಿಸಿಕೊಂಡು ನಿಧಿಯನ್ನು ಕಾಪಾಡುವ ಕಥೆಯನ್ನೊಳಗೊಂಡಿದೆ.
ಮೋಹನ್ ಲಾಲ್ ಅವರ ಚೊಚ್ಚಲ ನಿರ್ದೇಶನದ ಸಿನಿಮಾದ ಇದಾಗಿರುವುದರಿಂದ ಚಿತ್ರದ ಮೇಲೆ ಭಾರೀ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿತ್ತು. ಆದರೆ ಅಂದುಕೊಂಡ ಹಾಗೆ ಕಲೆಕ್ಷನ್ ಚಿತ್ರ ಇದುವರೆಗೆ ಮಾಡಿಲ್ಲ. ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ.
ಡಿ.25 ರಂದು ಚಿತ್ರ ರಿಲೀಸ್ ಆಗಿದ್ದು, 10 ದಿನದಲ್ಲೇ ಚಿತ್ರಕ್ಕೆ ಪೈರಸಿ ಕಾಟ ಶುರುವಾಗಿದೆ. ಇಡೀ ಚಿತ್ರದ ಹೆಚ್ ಡಿ ಪ್ರಿಂಟ್ ಆನ್ಲೈನ್ ನಲ್ಲಿ ಸೋರಿಕೆಯಾಗಿದೆ.
ತಮಿಳು, ಮಲಯಾಳಂ ಮತ್ತು ತೆಲುಗು ಭಾಷೆಗಳಲ್ಲಿ ಪೈರಸಿ ವೆಬ್‌ಸೈಟ್‌ಗಳಲ್ಲಿ ʼಬರೋಜ್ʼ ಹೆಚ್‌ಡಿ ಆವೃತ್ತಿಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗಿವೆ. ಚಲನಚಿತ್ರವನ್ನು ಸ್ಟ್ರೀಮ್ ಮಾಡಬಹುದು ಅಥವಾ ಡೌನ್‌ಲೋಡ್ ಮಾಡಬಹುದು ಮತ್ತು 1080p ಮತ್ತು 720p ರೆಸಲ್ಯೂಶನ್‌ಗಳಲ್ಲಿ ಲಭ್ಯವಿದೆ.
ಇತ್ತೀಚೆಗೆ ಹಲವಾರು ಮಲಯಾಳಂ ಚಿತ್ರಗಳು ಪೈರಸಿಗೆ ಬಲಿಯಾಗಿವೆ. ಮೋಹನ್‌ಲಾಲ್ ಅವರ ಚಿತ್ರಕ್ಕೂ ಮೊದಲು, ʼಮಾರ್ಕೊʼ ಮತ್ತು ʼಸೂಕ್ಷ್ಮದರ್ಶಿನಿʼ ಕೂಡ ಆನ್‌ಲೈನ್‌ನಲ್ಲಿ ಲೀಕ್ ಆಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actor: ಮದ್ಯ ಸೇವಿಸಿ ರಂಪಾಟ; ನೆರೆಹೊರೆಯವರ ಮುಂದೆ ಅರೆನಗ್ನವಾಗಿ ಹೊರಳಾಡಿದ ಖ್ಯಾತ ನಟ
Kannappa Movie: ಕಣ್ಣಪ್ಪ ಮಾಡಲು ಡಾ.ರಾಜ್ ಸ್ಫೂರ್ತಿ
Actor Darshan: ದರ್ಶನ್ ಗನ್ ಲೈಸೆನ್ಸ್ ರದ್ದು ಮಾಡಿದ ಪೊಲೀಸರು
IT Raids: ʼಪುಷ್ಪ-2ʼ, ‘ಗೇಮ್ ಚೇಂಜರ್’ ನಿರ್ಮಾಪಕರ ನಿವಾಸ, ಕಚೇರಿ ಮೇಲೆ ಐಟಿ ರೇಡ್
ಶೂಟಿಂಗ್‌ನಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಜನಪ್ರಿಯ ನಟ ಹೃದಯಾಘಾತದಿಂದ ನಿಧನ