ಮತ್ತೆ ನಿರ್ಮಾಣಕ್ಕಿಳಿದ ನಿರ್ದೇಶಕ ಲೋಕೇಶ್ ಕನಕರಾಜ್: ʼಬೆಂಜ್ʼ ಟೈಟಲ್ ಪೋಸ್ಟರ್ ಔಟ್
Team Udayavani, Apr 14, 2024, 2:44 PM IST
ಚೆನ್ನೈ: ಖ್ಯಾತ ಕಾಲಿವುಡ್ ನಿರ್ದೇಶಕ ಲೋಕೇಶ್ ಕನಕರಾಜ್ ತಮ್ಮ ನಿರ್ಮಾಣದ ಮುಂದಿನ ಸಿನಿಮಾವನ್ನು ಅನೌನ್ಸ್ ಮಾಡಿದ್ದಾರೆ.
ʼಮಾಸ್ಟರ್ʼ, ʼಕೈತಿʼ , ʼವಿಕ್ರಮ್ʼ, ʼಲಿಯೋʼ.. ಹೀಗೆ ಸೂಪರ್ ಹಿಟ್ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಲೋಕೇಶ್ ಕನಕರಾಜ್ ಸದ್ಯ ರಜಿನಿಕಾಂತ್ ಅವರೊಂದಿಗಿನ ಸಿನಿಮಾದ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಅವರು ತಮ್ಮ ಪ್ರೊಡಕ್ಷನ್ ಹೌಸ್ ಜಿ ಸ್ಕ್ವಾಡ್ ಮೂಲಕ ನಿರ್ಮಾಣವಾಗಲಿರುವ ಹೊಸ ಸಿನಿಮಾವನ್ನು ಅನೌನ್ಸ್ ಮಾಡಿದ್ದಾರೆ.
ಎನರ್ಜಿಟಿಕ್ ರಾಘವ ಲಾರೆನ್ಸ್ ಅವರ ಮುಂದಿನ ಸಿನಿಮಾದ ನಾಯಕರಾಗಲಿದ್ದು, ಈ ಸಿನಿಮಾವನ್ನು ʼಸುಲ್ತಾನ್ʼ , ʼರೆಮೋʼ ನಂತಹ ಸಿನಿಮಾಗಳನ್ನು ಮಾಡಿರುವ ಬಕ್ಕಿಯರಾಜ್ ಕಣ್ಣನ್ ಅವರು ನಿರ್ದೇಶನ ಮಾಡಲಿದ್ದಾರೆ.
ಸಿನಿಮಾಕ್ಕೆ ʼಬೆಂಜ್ʼ ಎನ್ನುವ ಟೈಟಲ್ ಇಡಲಾಗಿದೆ. ಸಿನಿಮಾದ ಕಥೆಯನ್ನು ಲೋಕೇಶ್ ಅವರೇ ಬರೆದಿದ್ದಾರೆ.
ಲೋಕೇಶ್ ಕನಕರಾಜ್, ನಿರ್ಮಾಪಕರಾದ ಸುಧನ್ ಸುಂದರಂ ಮತ್ತು ಜಗದೀಶ್ ಪಳನಿಸಾಮಿ ಅವರೊಂದಿಗೆ ಈ ಪ್ರಾಜೆಕ್ಟ್ ಗಾಗಿ ಕೈಜೋಡಿಸಿದ್ದಾರೆ.
ಸಿನಿಮಾದ ಇತರೆ ಪಾತ್ರವರ್ಗದ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ಬರಬೇಕಿದೆ.
It is my wish to bring #Benz to the screen and this is catching its own wish at 11:11 🤞🏻
I am very happy to be associating with our beloved @offl_Lawrence sir, thank you so much for trusting our team. And Director @bakkiyaraj_k , I am excited for you.
Thank you everyone for… pic.twitter.com/MOVB12Puh4— Lokesh Kanagaraj (@Dir_Lokesh) April 14, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mollywood: ಸೂಪರ್ ಸ್ಟಾರ್ ಮೋಹನ್ ಲಾಲ್‌ಗೆ ‘ಆವೇಶಮ್ʼ ನಿರ್ದೇಶಕ ಆ್ಯಕ್ಷನ್ ಕಟ್
Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ
Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ
Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ
Malayalam actor: ಹಾಲಿವುಡ್‌ನಲ್ಲೂ ಮಿಂಚಿದ್ದ ಮಾಲಿವುಡ್‌ನ ಹಿರಿಯ ನಟ ಥಾಮಸ್ ನಿಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.