Cinema: ಸಿಂಗಲ್ ಸ್ಕ್ರೀನ್‌ಗೆ ಪ್ರೇಕ್ಷಕರ ಬರ: ಇದೇ ಶುಕ್ರವಾರದಿಂದ 10 ದಿನ ಥಿಯೇಟರ್ ಬಂದ್
Team Udayavani, May 15, 2024, 4:41 PM IST
ಹೈದರಾಬಾದ್: ಐಪಿಎಲ್, ಎಲೆಕ್ಷನ್ ಭರಾಟೆ ನಡುವೆ ದಕ್ಷಿಣ ಸಿನಿಮಾರಂಗ ಸಪ್ಪೆಯಾಗಿದೆ. ಮಾಲಿವುಡ್ ನಲ್ಲಿ ಮಾತ್ರ ಸಿನಿಮಾಗಳು ರಿಲೀಸ್ ಆಗುತ್ತಿದೆ. ಅದು ಬಿಟ್ಟರೆ ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿಯಲ್ಲೂ ಕೈಲೆಕ್ಕದಷ್ಟು ಸಿನಿಮಾ ರಿಲೀಸ್ ಆಗುತ್ತಿದೆ.
ಓಟಿಟಿ, ಪ್ಯಾನ್ ಇಂಡಿಯಾ ಜಮಾನ ಬಂದ ಬಳಿಕ ಈಗೀಗ ಮೊದಲಿನ ಹಾಗೆ ಸ್ಟಾರ್ ನಟರ ಸಿನಿಮಾಗಳು ತಿಂಗಳಿಗೊಮ್ಮೆ ಅಥವಾ ವಾರದಲ್ಲಿ ಒಂದಾದರೂ ಬರುವುದಿಲ್ಲ. ಸ್ಟಾರ್ ನಟರು ಪ್ಯಾನ್ ಇಂಡಿಯಾ ರಿಲೀಸ್ ಗಾಗಿ ವರ್ಷದಲ್ಲಿ ಅಥವಾ ಎರಡು ವರ್ಷಕ್ಕೊಂದು ಸಿನಿಮಾಗಳನ್ನು ರಿಲೀಸ್ ಮಾಡುತ್ತಿದ್ದಾರೆ. ಆ ಸಿನಿಮಾಗಳು ರಿಲೀಸ್ ಆದ ವೇಳೆ ಹೆಚ್ಚಾಗಿ ಮಲ್ಟಿಫ್ಲೆಕ್ಸ್ ಗಳೇ ಹೌಸ್ ಫುಲ್ ಆಗುತ್ತದೆ ವಿನಃ ಸಿಂಗಲ್ ಸ್ಕ್ರೀನ್ ಗಳತ್ತ ಜನ ಬರುವುದೇ ಕಡಿಮೆ.
ಇತ್ತೀಚೆಗೆ ಸಿಂಗಲ್ ಸ್ಕ್ರೀನ್ ಥಿಯೇಟರ್ ಗೆ ಪ್ರೇಕ್ಷಕರ ಬರ ಉಂಟಾಗಿದೆ. ಈ ಕಾರಣದಿಂದ ಅನೇಕ ಸಿಂಗಲ್ ಸ್ಕ್ರೀನ್ ಥಿಯೇಟರ್ ಗಳು ಕಳೆದ ಕೆಲ ವರ್ಷಗಳಿಂದ ಬಾಗಿಲು ಮುಚ್ಚುತ್ತಿವೆ. ಕರ್ನಾಟಕ ಹೆಚ್ಚಾಗಿ ಬೆಂಗಳೂರಿನಲ್ಲಿ ಕಳೆದ ಎರಡು – ಮೂರು ವರ್ಷಗಳಿಂದ ಅನೇಕ ವರ್ಷ ಇತಿಹಾಸವುಳ್ಳ ಥಿಯೇಟರ್ ಗಳು ಪ್ರೇಕ್ಷಕರ ಕೊರತೆಯಿಂದ ಬಂದ್ ಆಗಿವೆ.
ಟಾಲಿವುಡ್ ಚಿತ್ರರಂಗದಲ್ಲೂ ಪ್ರೇಕ್ಷಕರ ಕೊರತೆ ಉಂಟಾಗಿದೆ. ಈ ಕಾರಣದಿಂದ ಥಿಯೇಟರ್ ಗಳು ಬಂದ್ ಆಗುವ ದಿನ ಬಂದಿದೆ.
ತೆಲಂಗಾಣ ಸ್ಟೇಟ್ ಸಿಂಗಲ್ ಥಿಯೇಟರ್ ಅಸೋಸಿಯೇಷನ್ ಹತ್ತು ದಿನಗಳ ಕಾಲ ರಾಜ್ಯದಾದ್ಯಂತ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳನ್ನು ಮುಚ್ಚಲು ನಿರ್ಧರಿಸಿರುವುದಾಗಿ ವರದಿಯಾಗಿದೆ.
ಕಳೆದ ಕೆಲ ವಾರಗಳಿಂದ ಟಾಲಿವುಡ್ ನಲ್ಲಿ ಯಾವ ಪ್ರಮುಖ ಸಿನಿಮಾಗಳು ರಿಲೀಸ್ ಆಗುತ್ತಿಲ್ಲ. ರಿಲೀಸ್ ಆದರೂ ಅದಕ್ಕೆ ಪ್ರೇಕ್ಷಕರು ಬರುವುದು ಕಡಿಮೆಯಾಗಿದೆ. ಪ್ರತಿ ವರ್ಷ ಏಪ್ರಿಲ್ – ಮೇ ತಿಂಗಳಿನಲ್ಲಿ ಸ್ಟಾರ್ ನಟರ ಸಿನಿಮಾಗಳು ರಿಲೀಸ್ ಆಗುತ್ತಿತ್ತು. ಈ ಬಾರಿ ಐಪಿಎಲ್ ಹಾಗೂ ಎಲೆಕ್ಷನ್ ಜೊತೆಯಾಗಿ ಬಂದಿರುವುದರಿಂದ ಹತ್ತಾರು ಚಿತ್ರತಂಡಗಳು ಈ ಸಮಯದಲ್ಲಿ ಸಿನಿಮಾ ರಿಲೀಸ್ ಮಾಡುವ ಸಾಹಸಕ್ಕೆ ಮುಂದಾಗುತ್ತಿಲ್ಲ.
ತೆಲಂಗಾಣದಲ್ಲಿ ಸುಮಾರು 400 ಕ್ಕೂ ಅಧಿಕ ಥಿಯೇಟರ್ ಗಳಿವೆ. ಇದೇ ಶುಕ್ರವಾರ(ಮೇ.17 ರಿಂದ) ಸಿಂಗಲ್ ಸ್ಕ್ರೀನ್ ಥಿಯೇಟರ್ ಗಳನ್ನು ಬಂದ್ ಮಾಡಲಾಗುತ್ತಿದೆ. ಸದ್ಯ ರಿಲೀಸ್ ಆಗಿರುವ ಸಿನಿಮಾಗಳನ್ನು ನೋಡಲು ಪ್ರೇಕ್ಷಕರು ಬರುತ್ತಿಲ್ಲ ಹಾಗಾಗಿ ಮಾಲೀಕರು ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ವರದಿಯಾಗಿದೆ.
ಥಿಯೇಟರ್ ನಲ್ಲಿ ದುಡಿಯುವ ಕೆಲಸಗಾರರಿಗೆ ಸಂಬಳ, ಕರೆಂಟ್ ಬಿಲ್ ಗೆ ಸೇರಿದಂತೆ ಪ್ರತಿಯೊಂದಕ್ಕೂ ಹಣ ವ್ಯಯಿಸಬೇಕಿದೆ. ಇದು ಸದ್ಯದ ಪರಿಸ್ಥಿತಿಯಲ್ಲಿ ಕಷ್ಟವಾಗುತ್ತಿರುವುದರಿಂದ ಸಿಂಗಲ್ ಸ್ಕ್ರೀನ್ ಥಿಯೇಟರ್ ಮಾಲೀಕರು ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.
ಮೇ.17 ರಿಂದ 25 ರವರೆಗೆ ಥಿಯೇಟರ್ ಗಳನ್ನು ಬಂದ್ ಮಾಡಲಾಗುತ್ತಿದೆ. ಮೇ.26 ರಂದು ಥಿಯೇಟರ್ ಓಪನ್ ಆಗಲಿದೆ. “ಲವ್ ಮಿ,” “ಗ್ಯಾಂಗ್ಸ್ ಆಫ್ ಗೋದಾವರಿ”, “ಹರೋಮ್ ಹರಾ,”, “ಸತ್ಯಭಾಮಾ” ಸೇರಿದಂತೆ ತಿಂಗಳಾಂತ್ಯದಲ್ಲಿ ಕೆಲ ಸಿನಿಮಾಗಳು ರಿಲೀಸ್ ಆಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Malayalam actor: ಹಾಲಿವುಡ್‌ನಲ್ಲೂ ಮಿಂಚಿದ್ದ ಮಾಲಿವುಡ್‌ನ ಹಿರಿಯ ನಟ ಥಾಮಸ್ ನಿಧನ
‘Pushpa 2: 10 ದಿನಗಳಲ್ಲಿ ಹೊಸ ದಾಖಲೆಯ ಕಲೆಕ್ಷನ್ ಕಂಡು ಮುನ್ನುಗ್ಗುತ್ತಿರುವ ಪುಷ್ಪ 2
Tulu cinema; ಕೋಸ್ಟಲ್‌ನಲ್ಲೀಗ ಸಿನೆಮಾ ಹಂಗಾಮಾ!
SSMB29: ರಾಜಮೌಳಿ – ಮಹೇಶ್ ಬಾಬು ಸಿನಿಮಾದ ಲೀಡ್ ರೋಲ್‌ನಲ್ಲಿ ಪ್ರಿಯಾಂಕಾ ಚೋಪ್ರಾ?
Video: ಜೈಲಿನಿಂದ ಅಲ್ಲು ಅರ್ಜುನ್ ಬಿಡುಗಡೆಗೆ ಆಗ್ರಹ; ಆತ್ಮಹತ್ಯೆ ಯತ್ನಿಸಿದ ಅಭಿಮಾನಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.