Devara: ಗಣೇಶ ಹಬ್ಬಕ್ಕೆ ʼದೇವರʼ ಸ್ಪಷೆಲ್ ಅಪ್ಡೇಟ್; ಟ್ರೇಲರ್ ಡೇಟ್ ರಿವೀಲ್
Team Udayavani, Sep 7, 2024, 3:34 PM IST
ಹೈದರಾಬಾದ್: ಗಣೇಶ ಹಬ್ಬಕ್ಕೆ ಜೂ.ಎನ್ ಟಿಆರ್ ಅಭಿನಯ್ (Jr NTR) ʼದೇವರʼ(Devara) ಚಿತ್ರತಂಡ ಸ್ಪೆಷೆಲ್ ಅನೌನ್ಸ್ ಮೆಂಟ್ ಮಾಡಿದೆ.
ಈಗಾಗಲೇ ಹಾಡುಗಳನ್ನು ರಿಲೀಸ್ ಮಾಡಿ, ವಿಶೇಷವಾಗಿ ʼ ಚುಟ್ಟಮಲ್ಲೆʼ ಎನ್ನುವ ಹಾಡು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದೇ ತಿಂಗಳು ಸಿನಿಮಾ ರಿಲೀಸ್ ಆಗಲಿದ್ದು, ರಿಲೀಸ್ ಸಮೀಪಕ್ಕೆ ಬರುತ್ತಿರುವಂತೆ ಒಂದೊಂದೇ ಅಪ್ಡೇಟ್‌ಗಳನ್ನು ಚಿತ್ರತಂಡ ನೀಡುತ್ತಿದೆ.
ಜೂ.ಎನ್.ಟಿಆರ್ – ಕೊರಟಾಲ ಶಿವ (Koratala Siva) ಕಾಂಬಿನೇಷನ್ ನ ‘ದೇವರ’ ಅನೌನ್ಸ್ ಆದ ದಿನದಿಂದಲೇ ದೊಡ್ಡಮಟ್ಟದಲ್ಲಿ ಸದ್ದು ಮಾಡಿದೆ. ಇದೊಂದು ಕಮರ್ಷಿಯಲ್ ಆ್ಯಕ್ಷನ್ ಬಿಗ್ ಬಜೆಟ್ ನ ಸಿನಿಮಾವಾಗಿದೆ.
ಗಣೇಶ ಹಬ್ಬಕ್ಕೆ ಚಿತ್ರತಂಡ ಹೊಸ ಪೋಸ್ಟ್ ರಿಲೀಸ್ ಮಾಡಿ ಟ್ರೇಲರ್ ರಿಲೀಸ್ ಡೇಟ್ ರಿವೀಲ್ ಮಾಡಿದೆ. ಜೂ.ಎನ್ ಟಿಆರ್ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡಿದ್ದು, ಕೈಯಲ್ಲೊಂದು ಆಯುಧವನ್ನು ಹಿಡಿದಿದ್ದಾರೆ. ಸೆ.10 ರಂದು ಟ್ರೇಲರ್ ರಿಲೀಸ್ ಆಗಲಿದೆ ಎಂದು ಚಿತ್ರತಂಡ ಹೇಳಿದೆ.
Celebrate today 🔥
Conquer in a couple of days ❤️Face your fears head on from September 10th with #DevaraTrailer 💥#Devara #DevaraOnSep27th pic.twitter.com/jowyODJPXB
— Devara (@DevaraMovie) September 7, 2024
ಈಗಾಗಲೇ ಚಿತ್ರದ ಪ್ರೀ ಸೇಲ್ ಟಿಕೆಟ್ ಲಭ್ಯವಿದ್ದು, ಟಿಕೆಟ್ ಲಭ್ಯವಾದ ಕೆಲವೇ ದಿನಗಳಲ್ಲಿ ಯುಎಸ್‌ನಲ್ಲಿ 15,000 ಕ್ಕೂ ಹೆಚ್ಚು ಟಿಕೆಟ್‌ಗಳು ಮಾರಾಟವಾಗುವ ಮೂಲಕ ʼದೇವರʼ ದಾಖಲೆ ಬರೆದಿದೆ.
‘ದೇವರ’ ಚಿತ್ರದಲ್ಲಿ ಜೂನಿಯರ್ ಎನ್‌ಟಿಆರ್, ಸೈಫ್ ಅಲಿ ಖಾನ್ ಮತ್ತು ಜಾಹ್ನವಿ ಕಪೂರ್ ಪ್ರಮುಖ ಪಾತ್ರಗಳಲ್ಲಿದ್ದಾರೆ.
ಬಹುನಿರೀಕ್ಷಿ ಸಿನಿಮಾ ಇದೇ ಸೆ.27ರಂದು ವರ್ಲ್ಡ್ ವೈಡ್ ರಿಲೀಸ್ ಆಗಲಿದೆ. ವಸುಧಾ ಆರ್ಟ್ಸ್ ಮತ್ತು ಎನ್.ಟಿಆರ್ ಆರ್ಟ್ಸ್ ಈ ಚಿತ್ರವನ್ನು ನಿರ್ಮಿಸಿದ್ದು, ನಂದಮೂರಿ ಕಲ್ಯಾಣ್ ರಾಮ್ ಅವರು ಪ್ರಸ್ತುತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kanguva: 10 ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್‌ನಲ್ಲಿ ಅದ್ಧೂರಿಯಾಗಿ ರಿಲೀಸ್ ಆಗಲಿದೆ ʼಕಂಗುವʼ
Amaran: ರಿಲೀಸ್ ಆದ ಮೂರೇ ದಿನದಲ್ಲಿ ʼಅಮರನ್ʼ ಸಿನಿಮಾದ ಹೆಚ್‌ಡಿ ಪ್ರಿಂಟ್ ಲೀಕ್
Chennai ಪುಸ್ತಕ ಮಾರುವ ನೆಪದಲ್ಲಿ ಖ್ಯಾತ ನಟಿಯ ಕೈಯಲ್ಲಿದ್ದ ಹಣ ಕಸಿದು ಪರಾರಿಯಾದ 8ರ ಬಾಲಕ
Devara OTT Release: ʼದೇವರʼ ಓಟಿಟಿ ಎಂಟ್ರಿಗೆ ಡೇಟ್ ಫಿಕ್ಸ್? ಈ ದಿನವೇ ರಿಲೀಸ್?
Actress Sreeleela: ಮೆಗಾ ಕುಟುಂಬದ ಸೊಸೆಯಾಗಲಿದ್ದಾರಾ ಕನ್ನಡದ ಶ್ರೀಲೀಲಾ? ಏನಿದು ಸುದ್ದಿ?
MUST WATCH
ಹೊಸ ಸೇರ್ಪಡೆ
US Polls: ಕಮಲಾ ಗೆಲುವಿಗಾಗಿ ಪೂರ್ವಿಕರ ಗ್ರಾಮದಲ್ಲಿ ಅರ್ಚನೆ, ಅಭಿಷೇಕ!
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.