ನಟನೆ ಜೊತೆ ನಿರ್ದೇಶನದಲ್ಲೂ ಬ್ಯುಸಿಯಾದ ಧನುಷ್; ನಿರ್ದೇಶನದ‌ 2 ಸಿನಿಮಾ ಇದೇ ವರ್ಷ ತೆರೆಗೆ

Team Udayavani, Jan 16, 2024, 2:40 PM IST

ನಟನೆ ಜೊತೆ ನಿರ್ದೇಶನದಲ್ಲೂ ಬ್ಯುಸಿಯಾದ ಧನುಷ್; ನಿರ್ದೇಶನದ‌ 2 ಸಿನಿಮಾ ಇದೇ ವರ್ಷ ತೆರೆಗೆ

ಚೆನ್ನೈ: ಧನುಷ್‌ ಅಭಿನಯದ ʼಕ್ಯಾಪ್ಟನ್‌ ಮಿಲ್ಲರ್‌ʼ ಸಿನಿಮಾಕ್ಕೆ ಎಲ್ಲೆಡೆಯಿಂದ ಪಾಸಿಟಿವ್‌ ರೆಸ್ಪಾನ್ಸ್‌ ವ್ಯಕ್ತವಾಗುತ್ತಿದೆ. ಥಿಯೇಟರ್‌ನಲ್ಲಿ ಧನುಷ್‌ ಅಭಿನಯವನ್ನು ನೋಡಿ ಪ್ರೇಕ್ಷಕರು ಫುಲ್‌ ಖುಷ್‌ ಆಗಿದ್ದಾರೆ.

ʼಕ್ಯಾಪ್ಟನ್‌ ಮಿಲ್ಲರ್‌ʼ ಯಶಸ್ಸಿನ ನಡುವೆಯೇ ಧನುಷ್‌ ತನ್ನ ಮುಂದಿನ ಸಿನಿಮಾಗಳತ್ತ ನಿರತರಾಗಿದ್ದಾರೆ. ನಟನೆ ಮಾತ್ರವಲ್ಲದೆ ಧನುಷ್‌ ನಿರ್ದೇಶನದಲ್ಲೂ ಮೋಡಿ ಮಾಡಿರುವುದು ಗೊತ್ತೇ ಇದೆ. 2017 ರಲ್ಲಿ ‘ಪಾ ಪಾಂಡಿ’ ಚಿತ್ರದ ಮೂಲಕ ಧನುಷ್ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದ್ದರು. ಈ ಚಿತ್ರವು ಅವರಿಗೆ ಅತ್ಯುತ್ತಮ ನಿರ್ದೇಶಕ-ತಮಿಳಿನ ಮೊದಲ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ತಂದುಕೊಟ್ಟಿತು.

ಇದಾದ ಬಳಿಕ ಧನುಷ್‌ ಒಂದಷ್ಟು ಗ್ಯಾಪ್‌ ನಂತರ ಮತ್ತೆ ಡೈರೆಕ್ಷನ್‌ ಕ್ಯಾಪ್‌ ತೊಟ್ಟು ಆ್ಯಕ್ಷನ್‌ ಕಟ್‌ ಹೇಳಲು ರೆಡಿಯಾಗಿದ್ದಾರೆ. ಧನುಷ್‌ ʼನಿಲವುಕ್ಕು ಎನ್ ಮೆಲ್ ಎನ್ನಡಿ ಕೋಬಮ್‌ʼ  ಸಿನಿಮಾವನ್ನು ಘೋಷಿಸಿದ್ದು, ಇದು ಅವರ ನಿರ್ದೇಶನದ 2ನೇ ಸಿನಿಮಾವಾಗಲಿದೆ. ಈಗಾಗಲೇ ಈ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಈ ಸಿನಿಮಾವನ್ನು ಧನುಷ್‌ ನಿರ್ದೇಶನದ ಜೊತೆ ಸ್ವಂತ ನಿರ್ಮಾಣ ಕಂಪನಿ ವುಂಡರ್‌ಬಾರ್ ಫಿಲ್ಮ್ಸ್ ಅಡಿಯಲ್ಲಿ ನಿರ್ಮಾಣ ಮಾಡುತ್ತಿದ್ದಾರೆ.

ಇದನ್ನೂ ಓದಿ: Filmfare: ಪ್ರತಿಷ್ಠಿತ ಫಿಲ್ಮ್‌ಫೇರ್‌ ನಾಮಿನೇಷನ್‌ ಲಿಸ್ಟ್‌ ಔಟ್; ಇಲ್ಲಿದೆ ಸಂಪೂರ್ಣ ಪಟ್ಟಿ

ಈ ಸಿನಿಮಾದಲ್ಲಿ ಪವೀಶ್, ಅನಿಖಾ ಸುರೇಂದ್ರನ್, ಪ್ರಿಯಾ ಪ್ರಕಾಶ್ ವಾರಿಯರ್, ಮ್ಯಾಥ್ಯೂ ಥಾಮಸ್, ವೆಂಕಟೇಶ್ ಮೆನನ್, ರಬಿಯಾ ಖಾತೂನ್ ಮತ್ತು ರಮ್ಯಾ ರಂಗನಾಥನ್ ಮುಂತಾದವರು ನಟಿಸಿದ್ದಾರೆ.ಚಿತ್ರದ ಸಂಗೀತವನ್ನು ಜಿವಿ ಪ್ರಕಾಶ್ ಕುಮಾರ್ ಸಂಯೋಜಿಸಿದ್ದು, ಲಿಯಾನ್ ಬ್ರಿಟ್ಟೊ ಮತ್ತು ಜಿಕೆ ಪ್ರಸನ್ನ ಕ್ಯಾಮೆರಾ ಮತ್ತು ಸಂಕಲನವನ್ನು ನಿರ್ವಹಿಸಿದ್ದಾರೆ.

ಇದಲ್ಲದೆ ಗ್ಯಾಂಗ್‌ ಸ್ಟರ್‌ ಕಥೆಯನ್ನೊಳಗೊಂಡಿರುವ ಮತ್ತೊಂದು ಸಿನಿಮಾವನ್ನು ನಿರ್ದೇಶನ ಮಾಡುವುದಾಗಿ ಧನುಷ್‌ ಘೋಷಿಸಿದ್ದು ,ಈ ಸಿನಿಮಾಕ್ಕೆ ತಾತ್ಕಾಲಿಕ ʼಡಿ50ʼ ಎಂದು ಟೈಟಲ್‌ ಇಡಲಾಗಿದೆ. ಈ ಸಿನಿಮಾದಲ್ಲಿ ಎಸ್‌ಜೆ ಸೂರ್ಯ, ಕಾಳಿದಾಸ್ ಜಯರಾಮ್, ಸಂದೀಪ್ ಕಿಶನ್ ಮತ್ತು ಇನ್ನೂ ಅನೇಕರು ಕಾಣಿಸಿಕೊಳ್ಳಲಿದ್ದಾರೆ.

ಸನ್ ಪಿಕ್ಚರ್ಸ್ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದು, ಎಆರ್ ರೆಹಮಾನ್ ಹಾಡುಗಳನ್ನು ಸಂಯೋಜಿಸುತ್ತಿದ್ದಾರೆ. ಓಂ ಪ್ರಕಾಶ್ ಛಾಯಾಗ್ರಹಣ ಮತ್ತು ಜಿಕೆ ಪ್ರಸನ್ನ ಚಿತ್ರಕ್ಕೆ ಸಂಕಲನ ಮಾಡುತ್ತಿದ್ದಾರೆ.

ನಿರ್ದೇಶನ ಬಿಟ್ಟರೆ ಧನುಷ್‌ ತೆಲುಗು ನಿರ್ದೇಶಕ ಶೇಖರ್ ಕಮ್ಮುಲ ಅವರ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾಕ್ಕೆ ʼಡಿ51ʼ ಎಂದು ತಾತ್ಕಾಲಿಕವಾಗಿ ಟೈಟಲ್‌ ಇಡಲಾಗಿದೆ. ನಟ ನಾಗಾರ್ಜುನ ಹಾಗೂ ರಶ್ಮಿಕಾ ಮಂದಣ್ಣ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಧನುಷ್‌ ನಿರ್ದೇಶನದ ಎರಡೂ ಸಿನಿಮಾಗಳು ಇದೇ ವರ್ಷ ರಿಲೀಸ್‌ ಆಗಲಿದೆ.

ಟಾಪ್ ನ್ಯೂಸ್

11-venur

Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ

9

Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ

governer

Governor: ಮಣಿಪುರದ 19 ನೇ ರಾಜ್ಯಪಾಲರಾಗಿ ಅಜಯ್ ಭಲ್ಲಾ ಪ್ರಮಾಣ ವಚನ ಸ್ವೀಕಾರ

Bidar; ಗುತ್ತಿಗೆದಾರ ಸಚಿನ್‌ ಕೇಸ್;‌ ತನಿಖೆ ಆರಂಭಿಸಿದ ಸಿಐಡಿ ತಂಡ

Bidar; ಗುತ್ತಿಗೆದಾರ ಸಚಿನ್‌ ಕೇಸ್;‌ ತನಿಖೆ ಆರಂಭಿಸಿದ ಸಿಐಡಿ ತಂಡ

Explainer: HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್ಸ್… ಅಂತ್ಯಕ್ರಿಯೆಗೆ ತಯಾರಿ ನಡೆಸಿದ್ದರು

Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್… ರಸ್ತೆಯಲ್ಲೇ ನಡೆಯಿತು ಪವಾಡ

Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?

Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Marco: ಕೋಟಿ ಕೋಟಿ ಗಳಿಕೆ ಕಾಣುತ್ತಿರುವ ʼಮಾರ್ಕೊʼಗೆ ಪೈರಸಿ ಕಾಟ; ಹೆಚ್ ಡಿ ಪ್ರಿಂಟ್‌ ಲೀಕ್

Marco: ಕೋಟಿ ಕೋಟಿ ಗಳಿಕೆ ಕಾಣುತ್ತಿರುವ ʼಮಾರ್ಕೊʼಗೆ ಪೈರಸಿ ಕಾಟ; ಹೆಚ್ ಡಿ ಪ್ರಿಂಟ್‌ ಲೀಕ್

ಕೋಮಾದಲ್ಲಿದ್ದ ನನ್ನ ಮಗನಿಗೆ ನೆನಪಿನ ಶಕ್ತಿ ಬರಲು ದಳಪತಿ ವಿಜಯ್‌ ಕಾರಣವೆಂದ ಖ್ಯಾತ ನಟ

ಕೋಮಾದಲ್ಲಿದ್ದ ನನ್ನ ಮಗನ ನೆನಪಿನ ಶಕ್ತಿ ಮರಳಲು ದಳಪತಿ ವಿಜಯ್‌ ಕಾರಣವೆಂದ ಖ್ಯಾತ ನಟ

Mollywood: 13 ವರ್ಷದ ಬಳಿಕ ರೀ- ರಿಲೀಸ್‌ ಆಗಲಿದೆ ಸೂಪರ್‌ ಹಿಟ್‌ ʼಉಸ್ತಾದ್‌ ಹೊಟೇಲ್‌ʼ

Mollywood: 13 ವರ್ಷದ ಬಳಿಕ ರೀ- ರಿಲೀಸ್‌ ಆಗಲಿದೆ ಸೂಪರ್‌ ಹಿಟ್‌ ʼಉಸ್ತಾದ್‌ ಹೊಟೇಲ್‌ʼ

1-ewewq

Malayalam; ಹೋಟೆಲ್ ರೂಂನಲ್ಲಿ ಶ*ವವಾಗಿ ಪತ್ತೆಯಾದ ಖ್ಯಾತ ನಟ ದಿಲೀಪ್ ಶಂಕರ್

allu arjun

Stampede case:ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರಾದ ಅಲ್ಲು ಅರ್ಜುನ್

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

11-venur

Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ

9

Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ

governer

Governor: ಮಣಿಪುರದ 19 ನೇ ರಾಜ್ಯಪಾಲರಾಗಿ ಅಜಯ್ ಭಲ್ಲಾ ಪ್ರಮಾಣ ವಚನ ಸ್ವೀಕಾರ

Bidar; ಗುತ್ತಿಗೆದಾರ ಸಚಿನ್‌ ಕೇಸ್;‌ ತನಿಖೆ ಆರಂಭಿಸಿದ ಸಿಐಡಿ ತಂಡ

Bidar; ಗುತ್ತಿಗೆದಾರ ಸಚಿನ್‌ ಕೇಸ್;‌ ತನಿಖೆ ಆರಂಭಿಸಿದ ಸಿಐಡಿ ತಂಡ

Prajwal Devaraj; ಶಿವರಾತ್ರಿಗೆ ʼರಾಕ್ಷಸʼ ಅಬ್ಬರ

Prajwal Devaraj; ಶಿವರಾತ್ರಿಗೆ ʼರಾಕ್ಷಸʼ ಅಬ್ಬರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.