Kollywood: ʼಇಳಯರಾಜʼನ ಬಯೋಪಿಕ್‌ನಲ್ಲಿ ನಟ ಧನುಷ್; ಫಸ್ಟ್ ಲುಕ್ ಔಟ್
Team Udayavani, Mar 20, 2024, 4:41 PM IST
ಚೆನ್ನೈ: ಸದಾ ವಿಭಿನ್ನ ಪಾತ್ರಗಳಿಗೆ ಬಣ್ಣ ಹಚ್ಚುವ ನಟ ಧನುಷ್ ಅವರ ಮುಂದಿನ ಸಿನಿಮಾದ ಟೈಟಲ್ ಅನೌನ್ಸ್ ಆಗಿದೆ.
ಸಂಗೀತ ದಿಗ್ಗಜ ಇಳಯರಾಜ ಅವರ ಜೀವನ ಆಧಾರಿತ ಸಿನಿಮಾದಲ್ಲಿ ಪ್ರಧಾನ ಪಾತ್ರದಲ್ಲಿ ಧನುಷ್ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾತುಗಳು ಈ ಹಿಂದೆ ಕಾಲಿವುಡ್ ನಲ್ಲಿ ಹರಿದಾಡಿತ್ತು. ಈ ಸಿನಿಮಾ ಬರುವುದು ಅಧಿಕೃತವಾಗಿದೆ. ಅದರಂತೆ ಸಿನಿಮಾದ ಟೈಟಲ್ ಹಾಗೂ ಫಸ್ಟ್ ಲುಕ್ ಪೋಸ್ಟರ್ ರಿವೀಲ್ ಆಗಿದೆ.
ಧನುಷ್ ಪ್ಯಾನ್ ಇಂಡಿಯಾ ʼ ರಾಯನ್ʼ, ʼಕುಬೇರʼ ಸಿನಿಮಾವನ್ನು ಇತ್ತೀಚೆಗೆ ಅನೌನ್ಸ್ ಮಾಡಿದ್ದಾರೆ. ಈ ನಡುವೆ ಇಳಯರಾಜ ಅವರ ಬಯೋಪಿಕ್ ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡಿದ್ದಾರೆ. ಕನಸು ಹೊತ್ತುಕೊಂಡು, ಹೆಗಲಿನಲ್ಲಿ ಬ್ಯಾಗ್ ಹಿಡಿದುಕೊಂಡು ನಿಂತಿರುವ ಪೋಸ್ಟರ್ ವೊಂದನ್ನು ಹಂಚಿಕೊಳ್ಳಲಾಗಿದೆ. ಪೋಸ್ಟರ್ ಕೆಳಗೆ ʼಕಿಂಗ್ ಆಫ್ ಮ್ಯೂಸಿಕ್ʼ ಎಂದು ಬರೆಯಲಾಗಿದೆ.
ಸಿನಿಮಾಕ್ಕೆ ಸಂಗೀತ ದಿಗ್ಗಜ ʼಇಳಯರಾಜʼ ನೆಂದೇ ಟೈಟಲ್ ಇಡಲಾಗಿದೆ. ಟೈಟಲ್ ರೋಲ್ ನಲ್ಲಿ ಧನುಷ್ ಕಾಣಿಸಿಕೊಳ್ಳಲಿದ್ದು, ಇಳಯರಾಜ ಅವರ ಆರಂಭಿಕ ದಿನಗಳು ಹಾಗೂ ಸಂಗೀತ ಪಯಣದ ಕಥೆಯನ್ನು ಸಿನಿಮಾದಲ್ಲಿ ತೋರಿಸಲಾಗುತ್ತದೆ. ಸಿನಿಮಾಕ್ಕೆ ಈ ಹಿಂದೆ ಧನುಷ್ ಅವರ ʼಕ್ಯಾಪ್ಟನ್ ಮಿಲ್ಲರ್ʼ ಸಿನಿಮಾವನ್ನು ನಿರ್ದೇಶನ ಮಾಡಿದ ಅರುಣ್ ಮಾಥೇಶ್ವರನ್ ಅವರು ನಿರ್ದೇಶನ ಮಾಡಲಿದ್ದಾರೆ.
ವಿಶೇಷವೆಂದರೆ ತನ್ನ ಬಯೋಪಿಕ್ ಸಿನಿಮಾಕ್ಕೆ ಇಳಯರಾಜ ಅವರೇ ಸಂಗೀತ ಸಂಯೋಜನೆ ಮಾಡಲಿದ್ದಾರೆ. ನೀರವ್ ಶಾ ಛಾಯಾಗ್ರಹಣ ಮಾಡಲಿದ್ದು, ಕನೆಕ್ಟ್ ಮೀಡಿಯಾ, ಪಿಕೆ ಪ್ರೈಮ್ ಪ್ರೊಡಕ್ಷನ್ ಮತ್ತು ಮರ್ಕ್ಯುರಿ ಮೂವೀಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಲಿದೆ.
ತಮಿಳು, ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ಸಿನಿಮಾ ತೆರೆ ಕಾಣಲಿದೆ. ಸಿನಿಮಾದ ಇತರೆ ಪಾತ್ರವರ್ಗದ ಬಗ್ಗೆ ಇನ್ನಷ್ಟೇ ಮಾಹಿತಿ ಹೊರಬೀಳಬೇಕಿದೆ.
ILAIYARAAJA BIOPIC FIRST ANNOUNCEMENT POSTER: DHANUSH ESSAYS TITLE ROLE… #Dhanush steps into the shoes of music maestro #Ilaiyaraaja… The creators of the much-awaited biopic unveil the retro-style first announcement poster of #Ilaiyaraaja, directed by #ArunMatheswaran.… pic.twitter.com/2uiWoWU4m3
— taran adarsh (@taran_adarsh) March 20, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Saira Banu: ಎ.ಆರ್.ರೆಹಮಾನ್‌ರಿಂದ ದೂರವಾದ ಬಗ್ಗೆ ಕೊನೆಗೂ ಮೌನ ಮುರಿದ ಸಾಯಿರಾ
Viral Pics: ಡೇಟಿಂಗ್ ರೂಮರ್ಸ್ ನಡುವೆ ವಿಜಯ್ – ರಶ್ಮಿಕಾ ಸೀಕ್ರೆಟ್ ಲಂಚ್ ಡೇಟ್
Dhanashree Verma: ಯಶ್ ಸಿನಿಮಾಕ್ಕೆ ಕ್ರಿಕೆಟಿಗ ಚಹಾಲ್ ಪತ್ನಿ ಹೀರೋಯಿನ್
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.