‘Kadavule…Ajithey’; ಘೋಷಣೆಗಳ ಬಳಕೆಗೆ ತಮಿಳು ಸೂಪರ್ ಸ್ಟಾರ್ ಅಜಿತ್ ಅಸಮಾಧಾನ
ಅತಿಶಯೋಕ್ತಿ ಅಥವಾ ಪೂರ್ವಪ್ರತ್ಯಯಗಳನ್ನು ಸೇರಿಸಬೇಡಿ...
Team Udayavani, Dec 11, 2024, 10:22 AM IST
ಮುಂಬೈ:“ಕಡವುಲೆ…ಅಜಿತೇ”(ದೇವರು) ಎಂಬ ಘೋಷಣೆಯನ್ನು ಬಳಸಿದ್ದಕ್ಕಾಗಿ ತಮ್ಮ ಅಭಿಮಾನಿಗಳೊಂದಿಗೆ ತಮಿಳು ಸೂಪರ್ ಸ್ಟಾರ್ ಅಜಿತ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಮ್ಮ ಹೆಸರಿನ ಮೊದಲು ಅತಿಶಯೋಕ್ತಿ ಅಥವಾ ಪೂರ್ವಪ್ರತ್ಯಯಗಳನ್ನು ಸೇರಿಸುವುದನ್ನು ತಪ್ಪಿಸುವಂತೆ ಒತ್ತಾಯಿಸಿದ್ದಾರೆ.
ಅಜಿತ್ ಅವರ ಪರವಾಗಿ ಆಪ್ತ ಸುರೇಶ್ ಚಂದ್ರ ಅವರು ತಮಿಳು ಮತ್ತು ಇಂಗ್ಲಿಷ್ ಎರಡರಲ್ಲೂ ಅಜಿತ್ ಪರವಾಗಿ ಅಧಿಕೃತ ಹೇಳಿಕೆಯನ್ನು X ನಲ್ಲಿ ಹಂಚಿಕೊಂಡಿದ್ದು, ಇದರಲ್ಲಿ ಅಜಿತ್ ಅವರು ತನ್ನ ಅಭಿಮಾನಿಗಳೆಲ್ಲರೂ ತಮ್ಮ ವೈಯಕ್ತಿಕ ಜೀವನದ ಮೇಲೆ ಕೇಂದ್ರೀಕರಿಸಿ, ಸಾರ್ವಜನಿಕ ಘೋಷಣೆಗಳಲ್ಲಿ ಪಾಲ್ಗೊಳ್ಳಬೇಡಿ ಎಂದು ಒತ್ತಾಯಿಸಿದ್ದಾರೆ.
“ನನ್ನ ಹೆಸರಿನ ಜೊತೆಗೆ ಅತಿಶಯೋಕ್ತಿ ಅಥವಾ ಯಾವುದೇ ರೀತಿಯ ಪೂರ್ವಪ್ರತ್ಯಯವನ್ನು ನಮೂದಿಸುವುದರಿಂದ ನನಗೆ ಅನಾನುಕೂಲವಾಗುತ್ತಿದೆ. ನನ್ನ ಹೆಸರು ಅಥವಾ ನನ್ನ ಮೊದಲಕ್ಷರಗಳ ಮೂಲಕ ಸಂಬೋಧಿಸಲು ನಾನು ಇಷ್ಟಪಡುತ್ತೇನೆ” ಎಂದು 53 ರ ಹರೆಯದ ಖ್ಯಾತ ನಟ ಮನವಿ ಮಾಡಿದ್ದಾರೆ.
ಅಜಿತ್ ಅವರ ಕೊನೆಯ ಚಿತ್ರ “ತುನಿವು” 2023 ರಲ್ಲಿ ಬಿಡುಗಡೆಯಾಗಿತ್ತು. ಸದ್ಯ ತ್ರಿಶಾ, ಅರ್ಜುನ್ ಸರ್ಜಾ ಮತ್ತು ರೆಜಿನಾ ಕಸ್ಸಂದ್ರ ಅವರೊಂದಿಗೆ “ವಿದಾ ಮುಯಾರ್ಚಿ” ಮತ್ತು ತ್ರಿಶಾ ಅವರೊಂದಿಗೆ “ಗುಡ್ ಬ್ಯಾಡ್ ಅಗ್ಲಿ” ನಲ್ಲಿ ನಟಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Most Searched Movies& Shows:ಈ ವರ್ಷ ಅತೀ ಹೆಚ್ಚು ಹುಡುಕಲ್ಪಟ್ಟ ಸಿನಿಮಾ ಹಾಗೂ ಶೋಗಳಿವು
Coolie Movie: 29 ವರ್ಷಗಳ ಬಳಿಕ ಒಂದೇ ಸಿನಿಮಾದಲ್ಲಿ ರಜಿನಿಕಾಂತ್ – ಆಮಿರ್ ನಟನೆ
Pushpa 2: ಮನೆಗೆ ನುಗ್ಗಿ ಥಳಿಸುತ್ತೇವೆ.. ʼಪುಷ್ಪ-2ʼ ನಿರ್ಮಾಪಕರಿಗೆ ಕರ್ಣಿ ಸೇನೆ ಬೆದರಿಕೆ
OTT Release: ಸದ್ದಿಲ್ಲದೆ ಓಟಿಟಿಗೆ ಬಂತು ʼತಂಗಲಾನ್ʼ: ಎಲ್ಲಿ ವೀಕ್ಷಿಸಬಹುದು?
Tollywood: ಪ್ರಭಾಸ್ ಸಿನಿಮಾಕ್ಕೆ ರಿಷಬ್ ಶೆಟ್ಟಿ ಸ್ಕ್ರಿಪ್ಟ್ ? – ವರದಿ
MUST WATCH
ಹೊಸ ಸೇರ್ಪಡೆ
Mangaluru: ಶುಭ ಸುದ್ದಿ… ಹೊಸ ವರ್ಷಕ್ಕೆ ಮಂಗಳೂರಿನಿಂದ ಸಿಂಗಾಪುರಕ್ಕೆ ನೇರ ವಿಮಾನ
Sagara: ಖಾಸಗಿ ಲಾಡ್ಜ್‌ನಲ್ಲಿ ಶಿರಸಿ ಮೂಲದ ವ್ಯಕ್ತಿ ನೇಣಿಗೆ ಶರಣು
ಮಂಗಳೂರು ನಗರ ಭಾಗದ ರೈಲ್ವೆ ಮಾರ್ಗ ನೈರುತ್ಯ ರೈಲ್ವೆಯಡಿ ಕಾರ್ಯನಿರ್ವಹಿಸಲು ಪ್ರಸ್ತಾಪ
Lack of Bus stand: ಹೊಸಕೋಟೆ; ಬಸ್ ನಿಲ್ದಾಣವಿಲ್ಲದೆ ಪರದಾಟ!
Gudibande: ಹೆಸರಿಗಷ್ಟೇ ಬಸ್ ನಿಲ್ದಾಣ; ಬಸ್‌ಗಳೇ ಬರಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.