ʼಪುಷ್ಪ-2ʼ ರಿಲೀಸ್ ಮುಂದೂಡಿಕೆ ಬೆನ್ನಲ್ಲೇ ‘Double iSmart’ ರಿಲೀಸ್ ಡೇಟ್ ಅನೌನ್ಸ್
Team Udayavani, Jun 16, 2024, 12:15 PM IST
ಹೈದರಾಬಾದ್: ಅಲ್ಲು ಅರ್ಜುನ್ ಅವರ ʼಪುಷ್ಪ-2ʼ ಸಿನಿಮಾದ ರಿಲೀಸ್ ಡೇಟ್ ಮುಂದೂಡಿಕೆ ಆಗಲಿದೆ ಎನ್ನುವ ಮಾತು ಚರ್ಚೆ ಆಗುತ್ತಿರುವ ಬೆನ್ನಲ್ಲೇ ಟಾಲಿವುಡ್ ನಲ್ಲಿ ಹೊಸ ಸಿನಿಮಾಗಳ ರಿಲೀಸ್ ಡೇಟ್ ಅನೌನ್ಸ್ ಆಗುತ್ತಿದೆ.
ʼಪುಷ್ಪ-2ʼ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಕ್ಕೆ ಹೆಚ್ಚಿನ ಸಮಯ ಬೇಕಾಗಿದೆ. ಹೀಗಾಗಿ ಚಿತ್ರದ ರಿಲೀಸ್ ಡೇಟ್ ಆಗಸ್ಟ್ ಬದಲಿಗೆ ಡಿಸೆಂಬರ್ ಗೆ ಮುಂದೂಡಿಕೆ ಆಗಲಿದೆ ಎನ್ನುವ ಮಾತುಗಳು ಟಾಲಿವುಡ್ ನಲ್ಲಿ ಹರಿದಾಡುತ್ತಿದೆ. ಆದರೆ ಚಿತ್ರತಂಡ ಇದುವರೆಗೆ ರಿಲೀಸ್ ಡೇಟ್ ಮುಂದೂಡಿಕೆ ಬಗ್ಗೆ ಅಧಿಕೃತವಾಗಿ ಹೇಳಿಕೊಂಡಿಲ್ಲ.
ʼಪುಷ್ಪ-2ʼ ರಿಲೀಸ್ ಮುಂದೂಡಿಕೆಯ ಬಗ್ಗೆ ಚರ್ಚೆ ಆರಂಭವಾಗುತ್ತಿದ್ದಂತೆ ಇತ್ತ ಸ್ವಾತಂತ್ರ್ಯ ದಿನದಂದೇ ಸಿನಿಮಾ ರಿಲೀಸ್ ಮಾಡಬೇಕೆನ್ನುವ ಚರ್ಚೆ ಇತರೆ ಚಿತ್ರತಂಡಗಳಲ್ಲಿ ಶುರುವಾಗಿದೆ. ಇದರಲ್ಲಿ ಪ್ರಮುಖವಾಗಿ ದುಲ್ಕರ್ ಸಲ್ಮಾನ್ ಅವರ ʼಲಕ್ಕಿ ಬಾಸ್ಕರ್ʼ ಚಿತ್ರದ ಹೆಸರು ಕೇಳಿ ಬರುತ್ತಿದೆ.
ಇನ್ನು ಕಾಲಿವುಡ್ ನತ್ತ ಗಮನಹರಿಸಿದರೆ, ವಿಕ್ರಮ್ ಅವರ ‘ತಂಗಲಾನ್’ ಕೂಡ ಆ.15 ರ ರಿಲೀಸ್ ಡೇಟ್ ನ್ನು ಉಪಯೋಗ ಮಾಡಿಕೊಳ್ಳುವ ಸಾಧ್ಯತೆಯಿದ ಎನ್ನಲಾಗುತ್ತಿದೆ.
ಇದೀಗ ಅಧಿಕೃತವಾಗಿ ಟಾಲಿವುಡ್ ನಲ್ಲಿ ಆಗಸ್ಟ್ 15 ರಂದು ಬಹುನಿರೀಕ್ಷಿತ ಸಿನಿಮಾವೊಂದು ರಿಲೀಸ್ ಆಗಲಿದ್ದು, ಹೊಸ ಪೋಸ್ಟರ್ ಮೂಲಕ ರಿಲೀಸ್ ಡೇಟ್ ಅನೌನ್ಸ್ ಮಾಡಿದೆ.
ರಾಮ್ ಪೋತಿನೇನಿ ಮತ್ತು ನಿರ್ದೇಶಕ ಪುರಿ ಜಗನ್ನಾಥ್ ಅವರ ಬ್ಲಾಕ್‌ಬಸ್ಟರ್ ‘ಇಸ್ಮಾರ್ಟ್ ಶಂಕರ್’ ನ ಸೀಕ್ವೆಲ್ ʼಡಬಲ್ ಇಸ್ಮಾರ್ಟ್ʼ ಆಗಸ್ಟ್ 15 ರಂದು ರಿಲೀಸ್ ಆಗಲಿದೆ ಎಂದು ಚಿತ್ರತಂಡ ಅನೌನ್ಸ್ ಮಾಡಿದೆ.
ಈಗಾಗಲೇ ತನ್ನ ಮಾಸ್ ಟೀಸರ್‌ನಿಂದ ಗಮನ ಸೆಳೆದಿರುವ ನಿರೀಕ್ಷೆಯನ್ನು ಹೆಚ್ಚಿಸಿದೆ. ʼಡಬಲ್ ಇಸ್ಮಾರ್ಟ್ʼ ನಲ್ಲಿ ಸಂಜಯ್ ದತ್ ಖಡಕ್ ರೋಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶಿವಲಿಂಗದ ಮುಂದೆ ತಲೆಗೆ ವಿಭೂತಿ ಹಚ್ಚಿಕೊಂಡು ಮಾಸ್ ಲುಕ್ ನಲ್ಲಿ ನಡೆದುಕೊಂಡು ಬರುತ್ತಿರುವ ಪೋಸ್ಟರ್ ಮೂಲಕ ರಿಲೀಸ್ ಡೇಟ್ ಅನೌನ್ಸ್ ಮಾಡಲಾಗಿದೆ.
ರಾಮ್ ಪೋತಿನೇನಿಗೆ ಕಾವ್ಯಾ ಥಾಪರ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಚಿತ್ರ ರಿಲೀಸ್ ಆಗಲಿದೆ.
View this post on Instagram
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !
Kollywood: ʼಅಮರನ್ʼ ಚಿತ್ರತಂಡದಿಂದ 1 ಕೋಟಿ ರೂ. ಪರಿಹಾರ ಕೇಳಿದ ವಿದ್ಯಾರ್ಥಿ; ಕಾರಣವೇನು?
Kollywood: ಧನುಷ್ – ಐಶ್ವರ್ಯಾ ವಿಚ್ಚೇದನ ಪ್ರಕರಣ; ನ.27ಕ್ಕೆ ಅಂತಿಮ ತೀರ್ಪು
Tollywood: ನಾನು ಸಿಂಗಲ್ ಅಲ್ಲ.. ರಶ್ಮಿಕಾ ಜತೆಗಿನ ಸಂಬಂಧ ದೃಢಪಡಿಸಿದ್ರಾ ದೇವರಕೊಂಡ?
Malayalam Actor: ಶ್ವಾಸಕೋಶದ ಕಾಯಿಲೆ; ಖ್ಯಾತ ನಟ ಮೇಘನಾಥನ್ ನಿಧನ
MUST WATCH
ಹೊಸ ಸೇರ್ಪಡೆ
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.