Producer: ಬಸ್ಸಿನಲ್ಲಿ ಪ್ರಯಾಣಿಸುತ್ತಿರುವಾಗಲೇ ಕುಸಿದು ಬಿದ್ದು ಖ್ಯಾತ ನಿರ್ಮಾಪಕ ಮೃ*ತ್ಯು
Team Udayavani, Dec 2, 2024, 3:49 PM IST
ತಿರುವನಂತಪುರಂ: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಸಿನಿಮಾ ನಿರ್ಮಾಪಕ (Film Producer) ರೊಬ್ಬರು ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಭಾನುವಾರ (ಡಿ.1ರಂದು) ನಡೆದಿದೆ.
ಮಲಯಾಳಂ ಚಲನಚಿತ್ರ ನಿರ್ಮಾಪಕ ಮನು ಪದ್ಮನಾಭನ್ ನಾಯರ್ (Producer Manu Padmanabhan Nair) ಮೃತ ನಿರ್ಮಾಪಕ.
ಮನು ಪದ್ಮನಾಭನ್ ನಾಯರ್ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರು. ಕೊಯಮತ್ತೂರಿನಿಂದ ಪಾಲಕ್ಕಾಡ್‌ಗೆ ಹೋಗುತ್ತಿದ್ದ ವೇಳೆ ಅವರು ಇದ್ದಕ್ಕಿದ್ದಂತೆ ಅವರು ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಸ್ಥಳೀಯರು ಸೇರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ವೈದ್ಯರ ಸತತ ಪ್ರಯತ್ನದ ಹೊರತಾಗಿಯೂ ಮನು ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ.
ಇದನ್ನೂ ಓದಿ: Tollywood: ಓಯೋ ರೂಮಲ್ಲಿ ಡ್ರಗ್ಸ್ ಪಾರ್ಟಿ; ಖ್ಯಾತ ನೃತ್ಯ ಸಂಯೋಜಕ ಸೇರಿ ನಾಲ್ವರ ಬಂಧನ
ಯಾರು ಈ ಮನು ಪದ್ಮನಾಭನ್ ನಾಯರ್: ಮಾಲಿವುಡ್ ಸಿನಿಮಾರಂಗದಲ್ಲಿ ಮನು ಚಿರಪರಿಚಿತ ಹೆಸರು. ಹಲವು ಸಿನಿಮಾಗಳಿಗೆ ತಮ್ಮ ಬ್ಯಾನರ್ ಅಡಿಯಲ್ಲಿ ಬಂಡವಾಳ ಹಾಕಿ ಗೆದ್ದಿದ್ದಾರೆ.
ಮೀರಾ ಜಾಸ್ಮಿನ್ ಪ್ರಧಾನ ಭೂಮಿಕೆಯಲ್ಲಿದ್ದ ’10 ಕಲ್ಪನಾಕಲ್’ ಎನ್ನುವ ಸಿನಿಮಾಕ್ಕೆ ಬಂಡವಾಳ ಹಾಕುವ ಮೂಲಕ ಅವರು ಚಿತ್ರರಂಗಕ್ಕೆ ಪ್ರವೇಶಿಸಿದ್ದರು. ಇದಾದ ಬಳಿಕ ಅವರು ಜಯಸೂರ್ಯ ಅವರ ‘ವೆಲ್ಲಾಂʼ ಸಿನಿಮಾಕ್ಕೆ ಬಂಡವಾಳ ಹಾಕಿದ್ದರು. ಈ ಸಿನಿಮಾ ವಿಮರ್ಶಕರಿಂದ ಮೆಚ್ಚುಗೆ ಗಳಿಸಿತು. ಇದಾದ ನಂತ ಅವರು ಆಸಿಫ್ ಅಲಿ ಅಭಿನಯದ ತನಿಖಾ ಥ್ರಿಲ್ಲರ್ ‘ಕೂಮನ್ʼ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಇದು ಆಸಿಫ್ ಅಲಿ ಅವರಿಗೆ ಕಂಬ್ಯಾಕ್ ಮಾಡಿಕೊಟ್ಟ ಸಿನಿಮಾವಾಗಿತ್ತು.
ಸದ್ಯ ಅವರು ʼವೀನೆʼ ಎನ್ನುವ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tollywood: ಓಯೋ ರೂಮಲ್ಲಿ ಡ್ರಗ್ಸ್ ಪಾರ್ಟಿ; ಖ್ಯಾತ ನೃತ್ಯ ಸಂಯೋಜಕ ಸೇರಿ ನಾಲ್ವರ ಬಂಧನ
Pushpa 2: ಬಹುಕೋಟಿ ʼಪುಷ್ಪ-2ʼನಲ್ಲಿ ಅಭಿನಯಿಸಲು ಕಲಾವಿದರು ಪಡೆದ ಸಂಭಾವನೆ ಎಷ್ಟು?
Pushpa 2: ಪುಷ್ಪ ಹವಾ ಮುಂದೆ ಮಂಕಾದ ಟಿಕೆಟ್ ದರ ಹೋರಾಟ
NayantharaVsDhanush: ಕರ್ಮ ಬಡ್ಡಿ ಸಮೇತ ಬರುತ್ತೆ..: ಧನುಷ್ ಗೆ ಟಾಂಗ್ ಕೊಟ್ಟ ನಯನತಾರಾ
Pushpa-2: 12 ಸಾವಿರ ಸ್ಕ್ರೀನ್‌ಗಳಲ್ಲಿ ಪುಷ್ಪ-2 ರಿಲೀಸ್
MUST WATCH
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಹೊಸ ಸೇರ್ಪಡೆ
Lucknow; ಸಂಭಾಲ್ ನತ್ತ ಹೋರಟ ಕಾಂಗ್ರೆಸ್ ನಿಯೋಗ: ತಡೆದ ಪೊಲೀಸರೊಂದಿಗೆ ತೀವ್ರ ವಾಗ್ವಾದ
Cyclone Fengal Effect: ದ.ಕನ್ನಡ ಜಿಲ್ಲೆಯ ಶಾಲೆ, ಕಾಲೇಜುಗಳಿಗೆ ಡಿ.3ರಂದು ರಜೆ ಘೋಷಣೆ
ಸಿದ್ದಾಪುರ: ಕಾಯಕಲ್ಪಕ್ಕೆ ಕಾದಿರುವ ಕೃಷಿ ಮಾರುಕಟ್ಟೆ
ಆಲಮಟ್ಟಿ ಅಣೆಕಟ್ಟೆ ಎತ್ತರ ಕಡಿತ ವದಂತಿ; ಆರು ದಶಕಗಳ ಬೇಡಿಕೆ ಕೃಷ್ಣಾರ್ಪಣ
Cyclone Fengal Effect: ಕರಾವಳಿ ಸೇರಿ ಹಲವೆಡೆ ಭಾರೀ ಮಳೆ; ನಾಳೆಯೂ ಆರೆಂಜ್ ಅಲರ್ಟ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.