20 ವರ್ಷದ ಬಳಿಕ ರೀ- ರಿಲೀಸ್ ಆಗಲಿದೆ ದಳಪತಿ ವಿಜಯ್ ಸೂಪರ್ ಹಿಟ್ ʼಗಿಲ್ಲಿʼ ಸಿನಿಮಾ
Team Udayavani, Apr 4, 2024, 4:40 PM IST
ಚೆನ್ನೈ: ಇತ್ತೀಚಿನ ದಿನಗಳಲ್ಲಿ ಸೂಪರ್ ಹಿಟ್ ಸಿನಿಮಾಗಳು ರೀ – ರಿಲೀಸ್ ಆಗುವ ಟ್ರೆಂಡ್ ಹುಟ್ಟಿಕೊಂಡಿದೆ. ನಟರ ಹುಟ್ಟುಹಬ್ಬ ಅಥವಾ ಪ್ರೇಮಿಗಳ ದಿನ.. ಹೀಗೆ ವಿಶೇಷ ದಿನದಂದು ಆ ಕಾಲದಲ್ಲಿ ಹಿಟ್ ಆದ ಸಿನಿಮಾಗಳನ್ನು ರೀ – ರಿಲೀಸ್ ಮಾಡಲಾಗುತ್ತಿದೆ.
ಈ ಸಾಲಿಗೆ ದಳಪತಿ ವಿಜಯ್ ಅವರ ಸಿನಿಮಾವೊಂದು ಸೇರಿದೆ. ದಳಪತಿ ವಿಜಯ್ – ತ್ರಿಷಾ ಕೃಷ್ಣನ್ ಜೊತೆಯಾಗಿ ಕಾಣಿಸಿಕೊಂಡಿದ್ದ, 2004 ರಲ್ಲಿ ಬಂದ ʼಗಿಲ್ಲಿʼ ಸಿನಿಮಾ 20 ವರ್ಷದ ಬಳಿಕ ಥಿಯೇಟರ್ ನಲ್ಲಿ ಮತ್ತೆ ತೆರೆ ಕಾಣಲಿದೆ.
ದಳಪತಿ ವಿಜಯ್ ಅವರ ʼಗಿಲ್ಲಿʼ ಮಹೇಶ್ ಬಾಬು ಅವರ ʼಒಕ್ಕಡುʼ ಸಿನಿಮಾದ ರಿಮೇಕ್ ಸಿನಿಮಾವಾಗಿದೆ. ಆದರೆ ರಿಮೇಕ್ ಆದರೂ ಸಿನಿಮಾ ಕಾಲಿವುಡ್ ಭರ್ಜರಿ ಯಶಸ್ಸು ಕಂಡಿತ್ತು. ಕಬಡ್ಡಿ ಆಟಗಾರನಾಗಿ ಗ್ಯಾಂಗ್ ಸ್ಟರ್ ವಿರುದ್ಧ ಹೋರಾಡುವ ದಳಪತಿ ವಿಜಯ್ , ತ್ರಿಷಾ ಜೊತೆ ರೊಮ್ಯಾಂಟಿಕ್ ಜೋಡಿಯಾಗಿ ಗಮನ ಸೆಳೆದಿದ್ದರು.
ವಿದ್ಯಾಸಾಗರ್ ಅವರ ಅದ್ಭುತ ಮ್ಯೂಸಿಕ್ ಹಾಗೂ ವಿಜಯ್, ತ್ರಿಷಾ ಹಾಗೂ ಪ್ರಕಾಶ್ ರಾಜ್ ಅವರ ಅಭಿನಯ ಪ್ರೇಕ್ಷಕರಿಗೆ ಮೋಡಿ ಮಾಡಿತ್ತು. ಈ ಸಿನಿಮಾವನ್ನು ಧರಣಿ ಅವರು ನಿರ್ದೇಶನ ಮಾಡಿದ್ದರು.
ಇದೇ ಏಪ್ರಿಲ್ 20 ರಂದು ಥಿಯೇಟರ್ ನಲ್ಲಿ ಸ್ಪೋರ್ಟ್ಸ್ ಆ್ಯಕ್ಷನ್ ʼಗಿಲ್ಲಿʼ ಸಿನಿಮಾ ಮರು ಬಿಡುಗಡೆ ಆಗಲಿದೆ ಎಂದು ಚಿತ್ರತಂಡ ಹೇಳಿದೆ.
ಆಶಿಶ್ ವಿದ್ಯಾರ್ಥಿ, ಧಮು, ಮಾಯಿಲ್‌ಸಾಮಿ, ಜಾನಕಿ ಸಬೇಶ್, ನ್ಯಾನ್ಸಿ ಜೆನ್ನಿಫರ್ ಮುಂತಾದವರು ಸಿನಿಮಾದಲ್ಲಿ ಪ್ರಧಾನ ಪಾತ್ರದಲ್ಲಿ ಕಾಣಸಿಕೊಂಡಿದ್ದರು.
Get ready to witness the full #Ghilli performance of THALAPATHY @actorvijay sir on big screens once again! 🔥
Let’s celebrate the massiest cult blockbuster of Namma Vijay Anna in theatres this 20th April commemorating its 20th Anniversary! 💥 pic.twitter.com/fUwFXSMu5n
— Mega Surya Production (@MegaSuryaProd) April 3, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mollywood: ಸೂಪರ್ ಸ್ಟಾರ್ ಮೋಹನ್ ಲಾಲ್‌ಗೆ ‘ಆವೇಶಮ್ʼ ನಿರ್ದೇಶಕ ಆ್ಯಕ್ಷನ್ ಕಟ್
Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ
Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ
Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ
Malayalam actor: ಹಾಲಿವುಡ್‌ನಲ್ಲೂ ಮಿಂಚಿದ್ದ ಮಾಲಿವುಡ್‌ನ ಹಿರಿಯ ನಟ ಥಾಮಸ್ ನಿಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.