![1-sidda](https://www.udayavani.com/wp-content/uploads/2025/02/1-sidda-415x281.jpg)
![1-sidda](https://www.udayavani.com/wp-content/uploads/2025/02/1-sidda-415x281.jpg)
Team Udayavani, Sep 8, 2024, 11:40 AM IST
ಚೆನ್ನೈ: ಕಾಲಿವುಡ್ ಸೂಪರ್ ಸ್ಟಾರ್ ದಳಪತಿ ವಿಜಯ್ (Thalapathy Vijay) ಅವರ ʼಗೋಟ್ʼ (GOAT Movie) ರಿಲೀಸ್ ಆದ ಮೂರೇ ದಿನದಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದೆ.
ಸೆ.5ರಂದು ಅಂದರೆ ಆರಂಭಿಕ ದಿನದಲ್ಲಿ ಸಿನಿಮಾಕ್ಕೆ ಮಿಶ್ರ ಪ್ರತಿಕ್ರಿಯೆ ಕೇಳಿಬಂದಿತ್ತು. ಇದಾದ ಬಳಿಕ ಎರಡನೇ ದಿನ ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಹಿಂದೆ ಬಿದ್ದಿತ್ತು. ಗಣೇಶ ಹಬ್ಬದ ರಜಾದಿನದಂದು(ಸೆ.7ರಂದು) ಸಿನಿಮಾ ಗಳಿಕೆಯಲ್ಲಿ ಮತ್ತೆ ಸದ್ದು ಮಾಡಿದೆ.
ಶನಿವಾರ ʼಗೋಟ್ʼ ಭಾರತದಲ್ಲಿ 33 ಕೋಟಿ ರೂ. ಗಳಿಕೆ ಕಂಡಿದೆ. ಇದರಲ್ಲಿ ತಮಿಳು ಆವೃತ್ತಿಯಿಂದ 29.1 ಕೋಟಿ ರೂ. ಬಂದಿದ್ದು, ಹಿಂದಿ ಆವೃತ್ತಿಯಿಂದ ಸರಿಸುಮಾರು ರೂ 2.15 ಕೋಟಿ ರೂ.ಬಂದಿದೆ. ಮತ್ತು ತೆಲುಗು ಆವೃತ್ತಿಯಿಂದ ರೂ 1.75 ಕೋಟಿ ರೂ. ಸಂಗ್ರಹವಾಗಿದೆ. ಆ ಮೂಲಕ ರಿಲೀಸ್ ಆದ ಮೂರೇ ದಿನದಲ್ಲಿ ಭಾರತದಲ್ಲಿ 102.5 ಕೋಟಿ ರೂ.ಗಳಿಕೆ ಕಂಡಿದೆ. ಇದರಲ್ಲಿ 91 ಕೋಟಿ ರೂ. ಬರೀ ತಮಿಳು ವರ್ಷನ್ ನಿಂದಲೇ ಬಂದಿದೆ.
ಶುಕ್ರವಾರದ ವೇಳೆಗೆ ಚಿತ್ರವು ಜಾಗತಿಕವಾಗಿ 155 ಕೋಟಿ ರೂಪಾಯಿ ಗಳಿಸಿದೆ. ವಾರಾಂತ್ಯದ ಅಂತ್ಯದ ವೇಳೆಗೆ 200 ಕೋಟಿ ಮೈಲಿಗಲ್ಲನ್ನು ದಾಟುವ ನಿರೀಕ್ಷೆಯಿದೆ.
ದಳಪತಿ ವಿಜಯ್ ಚಿತ್ರದಲ್ಲಿ ತಂದೆ ಮತ್ತು ಅವರ ಮಗನಾಗಿ ದ್ವಿಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವು 2004ರ ಮಾಸ್ಕೋ ಮೆಟ್ರೋ ಬಾಂಬ್ ದಾಳಿಯನ್ನು ಆಧರಿಸಿದೆ ಎನ್ನಲಾಗಿದೆ. ವಿಜಯ್ ಅವರು ವಿಶೇಷ ಭಯೋತ್ಪಾದನಾ ನಿಗ್ರಹ ದಳದ (SATS) ಏಜೆಂಟ್ ಗಾಂಧಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ವೆಂಕಟ್ ಪ್ರಭು (Venkat Prabhu) ನಿರ್ದೇಶನದ ʼಗೋಟ್ʼನಲ್ಲಿ ವಿಜಯ್ ಜತೆ ಪ್ರಶಾಂತ್, ಪ್ರಭುದೇವ, ಅಜ್ಮಲ್ ಅಮೀರ್, ಮೋಹನ್, ಜಯರಾಮ್, ಸ್ನೇಹಾ, ಲೈಲಾ, ಮೀನಾಕ್ಷಿ ಚೌಧರಿ, ವೈಭವ್, ಯೋಗಿ ಬಾಬು, ಪ್ರೇಮ್ಗಿ ಅಮರೇನ್ ಮತ್ತು ಯುಗೇಂದ್ರನ್ ಮುಂತಾದವರು ಕಾಣಿಸಿಕೊಂಡಿದ್ದಾರೆ.
You seem to have an Ad Blocker on.
To continue reading, please turn it off or whitelist Udayavani.