![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Jan 16, 2024, 10:42 AM IST
ಮುಂಬಯಿ/ ಹೈದರಾಬಾದ್/ ಚೆನ್ನೈ: ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಬಾಲಿವುಡ್ , ಟಾಲಿವುಡ್ ಹಾಗೂ ಕಾಲಿವುಡ್ ನಲ್ಲಿ ದೊಡ್ಡ ಸಿನಿಮಾಗಳು ರಿಲೀಸ್ ಆಗಿವೆ. ಬಹು ನಿರೀಕ್ಷಿತ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲೂ ನಿರೀಕ್ಷೆಗೆ ತಕ್ಕಂತೆ ಕಮಾಲ್ ಮಾಡಿವೆ.
ಯಾವೆಲ್ಲಾ ಸಿನಿಮಾ ಇದುವರೆಗೆ ಬಾಕ್ಸ್ ಆಫೀಸ್ ನಲ್ಲಿ ಎಷ್ಟು ಕಲೆಕ್ಷನ್ ಮಾಡಿವೆ ಎನ್ನುವುದರ ಬಗೆಗಿನ ಒಂದು ಕ್ವಿಕ್ ಲುಕ್ ಇಲ್ಲಿದೆ.
ಕ್ಯಾಪ್ಟನ್ ಮಿಲ್ಲರ್: ಅರುಣ್ ಮಾಥೇಶ್ವರನ್ ನಿರ್ದೇಶನದ ʼಕ್ಯಾಪ್ಟನ್ ಮಿಲ್ಲರ್ʼ ಸಿನಿಮಾದ ಬಗ್ಗೆ ಎಲ್ಲೆಡೆಯಿಂದ ಪಾಸಿಟಿವ್ ರೆಸ್ಪಾನ್ಸ್ ಕೇಳಿ ಬರುತ್ತಿದೆ. ಸಿನಿಮಾ ರಿಲೀಸ್ ಆಗಿ 4 ದಿನ ಕಳೆದಿದೆ. ಥಿಯೇಟರ್ ನಲ್ಲಿ ಇನ್ನು ಕೂಡ ಹೌಸ್ ಫುಲ್ ಆಗಿ ಸಿನಿಮಾ ಪ್ರದರ್ಶನ ಕಾಣುತ್ತಿದೆ.
ಧನುಷ್ ಅವರ ಅಭಿನಯ ಹಾಗೂ ಸಿನಿಮಾದಲ್ಲಿನ ಕಥೆಯನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದು,ಗ್ಲೋಬಲ್ ಬಾಕ್ಸ್ ಆಫೀಸ್ ನಲ್ಲಿ 50 ಕೋಟಿ ಕಮಾಯಿ ಮಾಡುವತ್ತ ಸಿನಿಮಾ ಸಾಗುತ್ತಿದೆ. 4ನೇ ದಿನ ಅಂದರೆ ಜನವರಿ 15 ರಂದು ಭಾರತದಲ್ಲಿ 6.50 ಕೋಟಿ ರೂ.ಗಳಿಸಿದ್ದು, ಇಂಡಿಯನ್ ಬಾಕ್ಸ್ ಆಫೀಸ್ ನಲ್ಲಿ ಇದುವರೆಗೆ 30.45 ಕೋಟಿ ರೂ.ಗಳಿಸಿದೆ. ವರ್ಲ್ಡ್ ಬಾಕ್ಸ್ ಆಫೀಸ್ ನಲ್ಲಿ ಶೀಘ್ರದಲ್ಲಿ ಸಿನಿಮಾ 50 ಕೋಟಿ ಕ್ಲಬ್ ಸೇರಲಿದೆ.
ಅಯಲಾನ್: ನಟ ಶಿವ ಕಾರ್ತಿಕೇಯನ್ ಸಾಕಷ್ಟು ಶ್ರಮವಹಿಸಿ ತೊಡಗಿಸಿಕೊಂಡ ಕಾಣಿಸಿಕೊಂಡ ʼಅಯಲಾನ್ʼ ಧನುಷ್ ಅವರ ʼಕ್ಯಾಪ್ಟನ್ ಮಿಲ್ಲರ್ʼ ಸಿನಿಮಾದೊಂದಿಗೆ ರಿಲೀಸ್ ಆಗಿದೆ. ಸಿನಿಮಾ ಒಂದು ಹೊಸ ಅನುಭವವನ್ನು ನೀಡುವುದರ ಜೊತೆ ವಿಎಫ್ ಎಕ್ಸ್ ಕೂಡ ಮೆಚ್ಚುಗೆ ಗಳಿಸಿದೆ. ಕಳೆದು ಹೋದ ಅನ್ಯಗ್ರಹ ಎಲಿಯನ್ ತನ್ನ ಗ್ರಹಕ್ಕೆ ಹೋಗಲು ನಾಲ್ವರ ಸಹಾಯ ಕೇಳುವ ಕಥೆಯನ್ನು ಸಿನಿಮಾ ಒಳಗೊಂಡಿದೆ.
ಸಿನಿಮಾಕ್ಕೆ ಎಲ್ಲೆಡಯಿಂದ ಪಾಸಿಟಿವ್ ರೆಸ್ಪಾನ್ಸ್ ಕೇಳಿ ಬರುತ್ತಿದೆ. ರಿಲೀಸ್ ಆದ 4ನೇ ದಿನ ಭಾರತದಲ್ಲಿ 6.75 ಕೋಟಿ ರೂಪಾಯಿ ಕಮಾಯಿ ಮಾಡಿದೆ. ಇದುವರೆಗೆ ಅಂದಾಜು 19.45 ಕೋಟಿ ರೂಪಾಯಿಯನ್ನು ಸಿನಿಮಾ ಗಳಿಸಿದೆ.
‘ಗುಂಟೂರು ಖಾರಂʼ: ಟಾಲಿವುಡ್ ನ ಬಹು ನಿರೀಕ್ಷಿತ ಸಿನಿಮಾ ಪ್ರಿನ್ಸ್ ಮಹೇಶ್ ಬಾಬು ಅಭಿನಯದ ‘ಗುಂಟೂರು ಖಾರಂʼ ರಿಲೀಸ್ ಆಗಿ 4 ದಿನ ಕಳೆದರೂ ಭರ್ಜರಿ ಗಳಿಕೆಯ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ.
10 ವರ್ಷದ ಬಳಿಕ ಮಹೇಶ್ ಬಾಬು ಜೊತೆ ತ್ರಿವಿಕ್ರಮ್ ಸಿನಿಮಾ ಮಾಡಿರುವುದು ವರ್ಕೌಟ್ ಆಗಿದೆ. ಭಾರತದಲ್ಲಿ ಇದುವರೆಗೆ ಸಿನಿಮಾ 83.40 ಕೋಟಿ ರೂ.ಗಳಿಸಿದೆ. 4ನೇ ದಿನ ಭಾರತದಲ್ಲಿ 14.50 ಕೋಟಿ ರೂ.ಗಳಿಸಿದೆ. ಇಂಡಿಯನ್ ಬಾಕ್ಸ್ ಆಫೀಸ್ ನಲ್ಲಿ ಶೀಘ್ರದಲ್ಲಿ 100 ಕೋಟಿ ಕ್ಲಬ್ ಸೇರಲಿದ್ದು, ವರ್ಲ್ಡ್ ಬಾಕ್ಸ್ ಆಫೀಸ್ ನಲ್ಲಿ ಇದುವರೆಗೆ ಮೂರೇ ದಿನದಲ್ಲಿ 164 ಕೋಟಿ ರೂ. ಗಳಿಸಿದೆ. ಶೀಘ್ರದಲ್ಲಿ 200 ಕೋಟಿ ಗಳಿಸುವ ಸಾಧ್ಯತೆಯಿದೆ.
ಹನುಮಾನ್: ʼಗುಂಟೂರು ಖಾರಂʼ ಸಿನಿಮಾದೊಂದಿಗೆ ತೆರೆಕಂಡ ತೇಜಾ ಸಜ್ಜಾ ಅವರ ʼಹನುಮಾನ್ʼ ಸಿನಿಮಾಕ್ಕೆ ದೊಡ್ಡಮಟ್ಟದ ಆರಂಭ ಸಿಕ್ಕಿದ್ದು, ಪಾಸಿಟಿವ್ ರೆಸ್ಪಾನ್ಸ್ ಪಡೆದುಕೊಂಡಿದೆ. ನಿರ್ದೇಶಕ ಪ್ರಶಾಂತ್ ವರ್ಮಾ ಅವರ ಸೂಪರ್ ಹೀರೋ ಫ್ರಾಂಚೈಸಿಯ ಕಥೆಯನ್ನೊಳಗೊಂಡ ಸಿನಿಮಾದ ಟಿಕೆಟ್ ಗೆ ಭರ್ಜರಿ ಬೇಡಿಕೆ ಬರುತ್ತಿದೆ.
ಜ.15 ರಂದು ʼಹನುಮಾನ್ʼ ಭಾರತದಲ್ಲಿ 14.50 ಕೋಟಿಯ ಗಳಿಕೆಯನ್ನು ಕಂಡಿದೆ. ನಾಲ್ಕು ದಿನದಲ್ಲಿ ಭಾರತದಲ್ಲಿ 55.15 ಕೋಟಿ ರೂಪಾಯಿ ಕಮಾಯಿ ಮಾಡಿದೆ.
ಮೇರಿ ಕ್ರಿಸ್ಮಸ್: ಶ್ರೀರಾಮ್ ರಾಘವನ್ ಥ್ರಿಲ್ಲರ್ ಕಥೆಯ ʼಮೇರಿ ಕ್ರಿಸ್ಮಸ್ʼ ಸಿನಿಮಾಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ನಿಧಾನಗತಿಯ ಸ್ಕ್ರೀನ್ ಪ್ಲೇ ಇದ್ದರೂ ಪ್ರೇಕ್ಷಕರು ಸಿನಿಮಾದಲ್ಲಿನ ಟ್ವಿಸ್ಟ್ & ಟರ್ನ್ ಗಳನ್ನು ಮೆಚ್ಚಿಕೊಂಡಿದ್ದಾರೆ. ವಿಜಯ್ ಸೇತುಪತಿ ಹಾಗೂ ಕತ್ರಿನಾ ಕೈಫ್ ಮೊದಲ ಬಾರಿ ಕಾಣಿಸಿಕೊಂಡಿದ್ದು ಇಬ್ಬರ ನಟನೆಯನ್ನು ಪ್ರೇಕ್ಷಕರು ಕೊಂಡಾಡಿದ್ದಾರೆ.
ವಿಮರ್ಶಕರಿಂದ ಸಿನಿಮಾ ಮೆಚ್ಚುಗೆ ಪಡೆದಿದ್ದು, ತಮಿಳು ಮತ್ತು ಹಿಂದಿಯಲ್ಲಿ ಸಿನಿಮಾ ತೆರೆಕಂಡಿದೆ. ಜ.15 ರಂದು ಭಾರತದಲ್ಲಿ 1.65 ಕೋಟಿಯ ಕಮಾಯಿ ಮಾಡಿದೆ. ಇದುವರೆಗೆ ಸಿನಿಮಾ 11 ಕೋಟಿ ರೂ.ಗಳಿಸಿದೆ.
You seem to have an Ad Blocker on.
To continue reading, please turn it off or whitelist Udayavani.