Allu Arjun: ʼಪುಷ್ಪ-2ʼಗಾಗಿ ಇದುವರೆಗೆ ಯಾರು ಕೇಳದ್ದಷ್ಟು ಸಂಭಾವನೆ ಕೇಳಿದ ಅಲ್ಲು ಅರ್ಜುನ್?
Team Udayavani, Oct 27, 2024, 4:25 PM IST
ಹೈದರಾಬಾದ್: ಕಾಲಿವುಡ್ನಲ್ಲಿ ದಳಪತಿ ವಿಜಯ್ ((Thalapathy Vijay) ಹಾಗೂ ಟಾಲಿವುಡ್‌ನಲ್ಲಿ ಅಲ್ಲು ಅರ್ಜುನ್ (Allu Arjun) ಇಬ್ಬರಿಗೂ ದೊಡ್ಡ ಫ್ಯಾನ್ ಫಾಲೋವರ್ಸ್ ಗಳಿದ್ದಾರೆ.
ಈ ಸೂಪರ್ ಸ್ಟಾರ್‌ಗಳ ಸಿನಿಮಾಗಳು ಬಾಕ್ಸಾಫೀಸ್ ನಲ್ಲಿ ಚಿನ್ನದ ಮೊಟ್ಟಯಿಡುವ ಕೋಳಿಯಂತೆ ಆರಾಮವಾಗಿ ಕೋಟಿ ಕೋಟಿ ಗಳಿಸುತ್ತವೆ. ಫ್ಯಾನ್ ಫಾಲೋವರ್ಸ ಗಳ ಜತೆ ಇಬ್ಬರ ಮಾರ್ಕೆಟ್ ವ್ಯಾಲ್ಯೂ ಅಷ್ಟೇ ದೊಡ್ಡದಾಗಿದೆ.
ಇತ್ತೀಚೆಗಿನ ವರ್ಷದಲ್ಲಿ ಅಲ್ಲು ಅರ್ಜುನ್ – ವಿಜಯ್ ಅವರ ಸಿನಿಮಾಗಳು ಪ್ಯಾನ್ ಇಂಡಿಯಾದಲ್ಲಿ ರಿಲೀಸ್ ಆಗಿ ಸದ್ದು ಮಾಡುತ್ತಿವೆ. ಅಲ್ಲು , ವಿಜಯ್ ಅವರ ಸಂಭಾವನೆ ವಿಚಾರ ಸೌತ್ ಸಿನಿ ಗಲ್ಲಿಯಲ್ಲಿ ಸದ್ದು ಮಾಡಿದೆ.
ದಳಪತಿ ವಿಜಯ್ 2026ರ ತಮಿಳುನಾಡು ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಇದಕ್ಕೂ ಮುನ್ನ ಅವರು ಒಂದು ಸಿನಿಮಾ ಮಾಡಲಿದ್ದಾರೆ. ಈ ಸಿನಿಮಾಕ್ಕೆ ಕನ್ನಡದ ಪ್ರತಿಷ್ಠಿತ ‘ಕೆವಿಎನ್ ಪ್ರೊಡಕ್ಷನ್ಸ್’ (Kvn Productions) ಬಂಡವಾಳ ಹಾಕಲಿದೆ.
ಈ ಸಿನಿಮಾಕ್ಕೆ ʼThalapathy 69’ ಎಂದು ಟೈಟಲ್ ಇಡಲಾಗಿದೆ. ಸಿನಿಮಾವನ್ನು ಎಚ್ ವಿನೋದ್ (H. Vinoth) ಅವರು ನಿರ್ದೇಶನ ಮಾಡಲಿದ್ದಾರೆ. ಈ ಸಿನಿಮಾಕ್ಕೆ ವಿಜಯ್ ಬರೋಬ್ಬರಿ 275 ಕೋಟಿ ರೂ. ಸಂಭಾವನೆ ಪಡೆಯಲಿದ್ದಾರೆ ಎನ್ನಲಾಗಿದೆ. ಆ ಮೂಲಕ ಅವರು ಅತೀ ಹೆಚ್ಚು ಸಂಭಾವನೆ ಪಡೆಯುವ ಭಾರತೀಯ ನಟ ಆಗಲಿದ್ದಾರೆ. ಶಾರುಖ್ ಖಾನ್, ರಜಿನಿಕಾಂತ್ ಅವರನ್ನೂ ಮೀರಿಸಲಿದ್ದಾರೆ ಎಂದು ವರದಿಯಾಗಿತ್ತು.
ಈ ನಡುವೆ ಅಲ್ಲು ಅರ್ಜುನ್ ಸಂಭಾವನೆ ವಿಚಾರದಲ್ಲಿ ವಿಜಯ್ ಅವರನ್ನು ಮೀರಿಸಿದ್ದಾರೆ ಎಂದು ʼಟ್ರ್ಯಾಕ್ ಟಾಲಿವುಡ್ʼ ವರದಿ ತಿಳಿಸಿದೆ.
ʼಪುಷ್ಪ-2ʼಗೆ ಅಲ್ಲು ಅರ್ಜುನ್ ಪಡೆದ ಸಂಭಾವನೆ ಎಷ್ಟು? : ಈ ವರ್ಷದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಒಂದಾಗಿರುವ ʼಪುಷ್ಪ-2ʼ ಸಿನಿಮಾ ರಿಲೀಸ್‌ಗೆ ಸಿದ್ದವಾಗಿದೆ. ಮೊದಲ ಭಾಗಕ್ಕೆ ಸಿಕ್ಕ ದೊಡ್ಡ ಗೆಲುವು ಎರಡನೇ ಭಾಗದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.
ʼಪುಷ್ಪರಾಜ್ʼ ಪಾತ್ರಕ್ಕಾಗಿ ಅಲ್ಲು ಅರ್ಜುನ್ ಬರೋಬ್ಬರಿ 300 ಕೋಟಿ ರೂ. ಸಂಭಾವನೆ ಪಡೆಯಲಿದ್ದಾರೆ ಎಂದು ವರದಿಯಾಗಿದೆ. ಆ ಮೂಲಕ ವಿಜಯ್ ಅವರ ಸಂಭಾವನೆ ದಾಖಲೆಯನ್ನು ಮುರಿಯಲಿದ್ದಾರೆ ಎನ್ನಲಾಗುತ್ತಿದೆ.
ಒಂದು ವೇಳೆ ಅಲ್ಲು ಅರ್ಜುನ್ ಈ ಸಂಭಾವನೆಯನ್ನು ಪಡೆದುಕೊಂಡರೆ ಭಾರತದ ಅತ್ಯಂತ ದುಬಾರಿ ಸಂಭಾವನೆ ಪಡೆಯುವ ನಟನಾಗಲಿದ್ದಾರೆ.
ಯಾವುದಕ್ಕೂ ಚಿತ್ರತಂಡವೇ ಮುಂದಿನ ದಿನಗಳಲ್ಲಿ ಈ ಬಗ್ಗೆ ಅಧಿಕೃತ ಮಾಹಿತಿ ನೀಡಬೇಕಿದೆ.
ಸುಕುಮಾರ್ ನಿರ್ದೇಶನದ ʼಪುಷ್ಪ-2ʼ ಇದೇ ಡಿಸೆಂಬರ್ 5 ರಂದು ವರ್ಲ್ಡ್ ವೈಡ್ ರಿಲೀಸ್ ಆಗಲಿದೆ. ಸಿನಿಮಾದಲ್ಲಿ ಅಲ್ಲು ಅರ್ಜುನ್ ಜತೆ ರಶ್ಮಿಕಾ ಮಂದಣ್ಣ, ಫಾಹದ್ ಫಾಸಿಲ್ ಮುಂತಾವರು ನಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mollywood: ಸೂಪರ್ ಸ್ಟಾರ್ ಮೋಹನ್ ಲಾಲ್‌ಗೆ ‘ಆವೇಶಮ್ʼ ನಿರ್ದೇಶಕ ಆ್ಯಕ್ಷನ್ ಕಟ್
Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ
Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ
Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ
Malayalam actor: ಹಾಲಿವುಡ್‌ನಲ್ಲೂ ಮಿಂಚಿದ್ದ ಮಾಲಿವುಡ್‌ನ ಹಿರಿಯ ನಟ ಥಾಮಸ್ ನಿಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.