ದಳಪತಿ ಅಭಿಮಾನಿಗಳ ಟ್ರೋಲ್‌ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?
Team Udayavani, Apr 18, 2024, 4:11 PM IST
ಚೆನ್ನೈ: ಕಾಲಿವುಡ್ ಸಿನಿರಂಗದ ಖ್ಯಾತ ಗಾಯಕ-ಸಂಯೋಜಕ ಯುವನ್ ಶಂಕರ್ ರಾಜಾ ಏಕಾಏಕಿ ಇನ್ಸ್ಟಾಗ್ರಾಮ್ ಖಾತೆಯನ್ನು ನಿಷ್ಕ್ರಿಯಗೊಳಿಸಿರುವುದು ಅವರ ಅಭಿಮಾನಿಗಳಲ್ಲಿ ಅನೇಕ ಪ್ರಶ್ನೆಗಳನ್ನು ಹುಟ್ಟಿಹಾಕಿದೆ.
ಕಾಲಿವುಡ್, ಟಾಲಿವುಡ್ ಸೇರಿದಂತೆ ದಕ್ಷಿಣದ ಹಲವು ಸಿನಿಮಾಗಳಿಗೆ ಮ್ಯೂಸಿಕ್ ನೀಡಿರುವ ಯುವನ್ ಶಂಕರ್ ರಾಜಾ ಇತ್ತೀಚೆಗೆ ದಳಪತಿ ವಿಜಯ್ ಅವರ ʼದಿ ಗ್ರೇಟಿಸ್ಟ್ ಆಫ್ ಆಲ್ ಟೈಮ್ʼ ಸಿನಿಮಾಕ್ಕೂ ಸಂಗೀತ ಸಂಯೋಜಿಸಿದ್ದಾರೆ.
ʼದಿ ಗ್ರೇಟಿಸ್ಟ್ ಆಫ್ ಆಲ್ ಟೈಮ್ʼ ಸಿನಿಮಾದ ಮೊದಲ ಸಿಂಗಲ್ ಟ್ರ್ಯಾಕ್ ʼವಿಜಿಲ್ ಪೋಡ್ʼ ಹಾಡು ರಿಲೀಸ್ ಆಗಿದೆ. ಆದರೆ ಈ ಹಾಡಿಗೆ ನಿರೀಕ್ಷೆಗೆ ತಕ್ಕ ಹಾಗೆ ಪಾಸಿಟಿವ್ ರೆಸ್ಪಾನ್ಸ್ ಕೇಳಿ ಬಂದಿಲ್ಲ. ಈ ಕಾರಣದಿಂದ ದಳಪತಿ ವಿಜಯ್ ಅವರ ಕೆಲ ಅಭಿಮಾನಿಗಳು ಯುವನ್ ಅವರನ್ನು ಟೀಕೆ ಮಾಡಿದ್ದಾರೆ. ಮಾತ್ರವಲ್ಲದೆ ಕೆಲ ಮಿಮ್ಸ್ ಪೇಜ್ ಗಳಲ್ಲಿ ಅವರನ್ನು ಟ್ರೋಲ್ ಮಾಡಿದ್ದಾರೆ.
ಇದನ್ನೂ ಓದಿ: Pushpa 2: ದಾಖಲೆ ಬೆಲೆಗೆ ʼಪುಷ್ಪ-2ʼ ಡಿಜಿಟಲ್ ಹಕ್ಕನ್ನು ಖರೀದಿಸಿದ ನೆಟ್‌ಫ್ಲಿಕ್ಸ್
ಇದೇ ಕಾರಣದಿಂದ ಯುವನ್ ಶಂಕರ್ ರಾಜಾ ಅವರು ತಮ್ಮ ಇನ್ಸ್ರಾಗ್ರಾಮ್ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ದಾರೆ ಎನ್ನಲಾಗುತ್ತಿದೆ.
ʼವಿಜಿಲ್ ಪೋಡ್ʼ ಹಾಡು ಅಷ್ಟಾಗಿ ಸದ್ದು ಮಾಡಿಲ್ಲ. ಈ ಬಗ್ಗೆ ಕೇಳಿ ಬರುತ್ತಿರುವ ಟೀಕೆ ಬಗ್ಗೆ ಯುವನ್ ಅವರು ಯಾವ ಪ್ರತಿಕ್ರಿಯೆಯನ್ನು ಇದುವರೆಗೆ ನೀಡಿಲ್ಲ.
ಯುವನ್ ಶಂಕರ್ ರಾಜಾ ಅವರು ಸಂಗೀತ ಮಾಂತ್ರಿಕ ಇಳಯರಾಜ ಅವರ ಪುತ್ರನಾಗಿದ್ದು, 1997 ರಲ್ಲಿ ಬಂದ ʼಅರವಿಂಧನ್ʼ ಸಿನಿಮಾದ ಮೂಲಕ ಮ್ಯೂಸಿಕ್ ಇಂಡಸ್ಟ್ರಿಗೆ ಕಾಲಿಟ್ಟರು. 2002 ರಲ್ಲಿ ಬಂಧ ಧನುಷ್ ಅಭಿನಯದ ʼತುಳ್ಳುವದೋ ಇಳಮೈʼ ಚಿತ್ರಕ್ಕಾಗಿ ಸಂಯೋಜಿಸಿದ ಹಾಡುಗಳಿಂದ ಅವರಿಗೆ ದೊಡ್ಡ ಬ್ರೇಕ್ ಸಿಕ್ಕಿತು.
ದಳಪತಿ ವಿಜಯ್ ಮತ್ತು ವೆಂಕಟ್ ಪ್ರಭು ಅವರ ಚೊಚ್ಚಲ ಸಹಯೋಗ ʼದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್ʼ ಸಿನಿಮಾದಲ್ಲಿ ಪ್ರಭುದೇವ, ಜಯರಾಮ್, ಮೀನಾಕ್ಷಿ ಚೌಧರಿ, ಮಿಕ್ ಮೋಹನ್, ಪ್ರಶಾಂತ್, ಅಜ್ಮಲ್ ಮುಂತಾದವರು ನಟಿಸಿದ್ದು ಇದೇ ಸೆ.5 ರಂದು ಸಿನಿಮಾ ತೆರೆ ಕಾಣಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !
Kollywood: ʼಅಮರನ್ʼ ಚಿತ್ರತಂಡದಿಂದ 1 ಕೋಟಿ ರೂ. ಪರಿಹಾರ ಕೇಳಿದ ವಿದ್ಯಾರ್ಥಿ; ಕಾರಣವೇನು?
Kollywood: ಧನುಷ್ – ಐಶ್ವರ್ಯಾ ವಿಚ್ಚೇದನ ಪ್ರಕರಣ; ನ.27ಕ್ಕೆ ಅಂತಿಮ ತೀರ್ಪು
Tollywood: ನಾನು ಸಿಂಗಲ್ ಅಲ್ಲ.. ರಶ್ಮಿಕಾ ಜತೆಗಿನ ಸಂಬಂಧ ದೃಢಪಡಿಸಿದ್ರಾ ದೇವರಕೊಂಡ?
MUST WATCH
ಹೊಸ ಸೇರ್ಪಡೆ
Kasaragod: ಫ್ಯಾಶನ್ ಗೋಲ್ಡ್ ವಂಚನೆ ಪ್ರಕರಣ: ಪೂಕೋಯ ತಂಙಳ್ ಮತ್ತೆ ಬಂಧನ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.