ಬಾಕ್ಸಾಫೀಸ್ ಗೆ ಕಿಚ್ಚು ಹತ್ತಿಸಿದ ‘Kalki 2898 AD’ ಮೊದಲ ದಿನ ಗಳಿಸಿದ್ದೆಷ್ಟು?
Team Udayavani, Jun 28, 2024, 12:32 PM IST
ಮುಂಬೈ: ಡಾರ್ಲಿಂಗ್ ಪ್ರಭಾಸ್ ನಟನೆಯ ಬಹುನಿರೀಕ್ಷಿತ ಚಿತ್ರ ಕಲ್ಕಿ 2898 ಎಡಿ ಗುರುವಾರ ವಿಶ್ವದಾದ್ಯಂತ ಬಿಡುಗಡೆಯಾಗಿದೆ. ನಾಗ ಚೈತನ್ಯ ನಿರ್ದೇಶನ ಮಾಡಿರುವ ಚಿತ್ರದಲ್ಲಿ ಸ್ಟಾರ್ ಕಲಾವಿದರು ನಟಿಸಿದ್ದಾರೆ. ಪ್ರಭಾಸ್ ಜೊತೆಗೆ ಅಮಿತಾಭ್ ಬಚ್ಚನ್, ದೀಪಿಕಾ ಪಡುಕೋಣೆ, ದಿಶಾ ಪಟಾಣಿ, ಕಮಲ್ ಹಸನ್ ಮುಂತಾದವರು ಕಲ್ಕಿ 2898 ಎಡಿ ಚಿತ್ರದಲ್ಲಿದ್ದಾರೆ.
ಕಲ್ಕಿ 2898 ಎಡಿ ಸಿನಿಮಾ ರಿಲೀಸ್ ಗೂ ಮೊದಲೇ ಭಾರಿ ಹೈಪ್ ಮೂಡಿಸಿತ್ತು. ಹಲವು ಸೋಲು ಕಂಡಿದ್ದ ಪ್ರಭಾಸ್ ಅವರಿಗೆ ಸಲಾರ್ ಚಿತ್ರ ಗೆಲುವು ತಂದುಕೊಟ್ಟಿತ್ತು. ಅದರ ಹುಮ್ಮಸ್ಸಿನಲ್ಲಿದ್ದ ಪ್ರಭಾಸ್ ಗೆ ಈ ಚಿತ್ರ ದೊಡ್ಡ ಗೆಲುವು ತಂದುಕೊಡಲಿದೆ ಎಂಬ ನಿರೀಕ್ಷೆಯಲ್ಲಿದ್ದರು.
ಗುರುವಾರ ತೆರೆಗೆ ಅಪ್ಪಳಿಸಿರುವ ಕಲ್ಕಿ 2898 ಎಡಿ ಸಿನಿಮಾ ಭರ್ಜರಿ ಓಪನಿಂಗ್ ಪಡೆದಿದೆ. ಎಲ್ಲಾ ಥಿಯೇಟರ್ ಗಳು ಫುಲ್ ಹೌಸ್ ಆಗಿ ಓಡುತ್ತಿದ್ದು, ಪ್ರಭಾಸ್ ಮತ್ತೊಮ್ಮೆ ಗೆದ್ದಿದ್ದಾರೆ ಎನ್ನುತ್ತಿದೆ ವರದಿಗಳು. ಮೊದಲ ದಿನ ಕಲ್ಕಿ 2898 ಎಡಿ ಸಿನಿಮಾ ಭಾರತೀಯ ಮಾರುಕಟ್ಟೆಯಲ್ಲಿ 95 ಕೋಟಿ ರೂ ಬಾಚಿದೆ ಎಂದು ವರದಿಯಾಗಿದೆ.
“ಕಲ್ಕಿ 2898 ಎಡಿ ತನ್ನ ಮೊದಲ ದಿನದಲ್ಲಿ ಭಾರತದಲ್ಲಿ ಎಲ್ಲಾ ಭಾಷೆಗಳಲ್ಲಿ ಸುಮಾರು 95 ಕೋಟಿ ರೂ ನಿವ್ವಳ ಗಳಿಸಿದೆ” ಬಿಡುಗಡೆಯ ದಿನದ ವಿಶ್ವಾದ್ಯಂತ ಕಲೆಕ್ಷನ್ ಬಗ್ಗೆ ಹೇಳುವುದಾದರೆ, ಚಿತ್ರವು 180 ಕೋಟಿ ರೂ ಗಳಿಸುವಲ್ಲಿ ಯಶಸ್ವಿಯಾಗಿದೆ” ಎನ್ನುತ್ತಿದೆ ವರದಿ.
ಚಿತ್ರವು ತೆಲುಗು, ಹಿಂದಿ, ಕನ್ನಡ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ರಿಲೀಸ್ ಆಗಿದೆ. ಚಿತ್ರವನ್ನು ನಾಗ ಅಶ್ವಿನ್ ನಿರ್ದೇಶನ ಮಾಡಿದ್ದು, ವೈಜಯಂತಿ ಮೂವೀಸ್ ಬಂಡವಾಳ ಹಾಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Amaran: ರಿಲೀಸ್ ಆದ ಮೂರೇ ದಿನದಲ್ಲಿ ʼಅಮರನ್ʼ ಸಿನಿಮಾದ ಹೆಚ್‌ಡಿ ಪ್ರಿಂಟ್ ಲೀಕ್
Chennai ಪುಸ್ತಕ ಮಾರುವ ನೆಪದಲ್ಲಿ ಖ್ಯಾತ ನಟಿಯ ಕೈಯಲ್ಲಿದ್ದ ಹಣ ಕಸಿದು ಪರಾರಿಯಾದ 8ರ ಬಾಲಕ
Devara OTT Release: ʼದೇವರʼ ಓಟಿಟಿ ಎಂಟ್ರಿಗೆ ಡೇಟ್ ಫಿಕ್ಸ್? ಈ ದಿನವೇ ರಿಲೀಸ್?
Actress Sreeleela: ಮೆಗಾ ಕುಟುಂಬದ ಸೊಸೆಯಾಗಲಿದ್ದಾರಾ ಕನ್ನಡದ ಶ್ರೀಲೀಲಾ? ಏನಿದು ಸುದ್ದಿ?
Tollywood: ಲೋಕೇಶ್, ಪ್ರಶಾಂತ್ ವರ್ಮಾ ಸಿನಿಮ್ಯಾಟಿಕ್ ಯೂನಿವರ್ಸ್ ಗೆ ಪ್ರಭಾಸ್ ಎಂಟ್ರಿ?
MUST WATCH
ಹೊಸ ಸೇರ್ಪಡೆ
MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್
Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ
Mangaluru: ಪರಿಶಿಷ್ಟ ಜಾತಿ ಪಟ್ಟಿಗೆ ಮರುಸೇರ್ಪಡೆ ಆಗ್ರಹಿಸಿ ಕುಡುಬಿ ಸಮಾಜದವರಿಂದ ಜಾಥಾ
Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.