Jai Hanuman: ರಿಷಬ್ ಗೆ ಜೈ ಎಂದ ಹನುಮಾನ್ ನಿರ್ದೇಶಕ
Team Udayavani, Nov 3, 2024, 8:45 AM IST
ನಟ ರಿಷಬ್ ಶೆಟ್ಟಿ (Rishab Shetty) ಅವರ “ಕಾಂತಾರ 2′ ಹುಟ್ಟಿಸಿದ ನಿರೀಕ್ಷೆಯಷ್ಟೇ ಅವರ ಹೊಸ ಸಿನಿಮಾ “ಜೈ ಹನುಮಾನ್’ (Jai Hanuman) ಕೂಡ ನಿರೀಕ್ಷೆ ಹುಟ್ಟಿಸಿದೆ. ಇತ್ತೀಚೆಗೆ ಚಿತ್ರದಲ್ಲಿನ ಅವರ ಫಸ್ಟ್ ಪೋಸ್ಟರ್ ಬಿಡುಗಡೆಗೊಂಡಿತ್ತು. ರಾಮನ ಮೂರ್ತಿ ಹಿಡಿದ ಹನುಮನ ಪಾತ್ರದಲ್ಲಿ ರಿಷಬ್ ಮಿಂಚಿದ್ದರು. ಸದ್ಯ ಪೋಸ್ಟರ್ ಎಲ್ಲೆಡೆ ವೈರಲ್ ಆಗುತ್ತಿದೆ.
ಈ ಬಗ್ಗೆ “ಜೈ ಹನುಮಾನ್’ ನಿರ್ದೇಶಕ ಪ್ರಶಾಂತ್ ವರ್ಮಾ, ಚಿತ್ರೀಕರಣದ ಫೋಟೋ ಜೊತೆ ಸಂತಸದ ಮಾತುಗಳನ್ನು ಹಂಚಿಕೊಂಡಿದ್ದಾರೆ. “ರಾಷ್ಟ್ರಪ್ರಶಸ್ತಿ ವಿಜೇತ ನಟ ರಿಷಬ್ ಶೆಟ್ಟಿ ಅವರಿಗೆ ಹೃದಯಪೂರ್ವಕ ಧನ್ಯವಾದಗಳು. ಹನುಮನ ಕುರಿತ ಅವರ ಭಕ್ತಿ ಹಾಗೂ ಅಪರಿಮಿತ ಪರಿಶ್ರಮದಿಂದ ಈ ಧ್ಯೇಯಕ್ಕೆ ಜೀವ ಬಂದಂತಾಗಿದೆ. ಪಾತ್ರಕ್ಕಾಗಿ ಅವರ ಅದ್ಭುತ ರೂಪಾಂತರ, ನಿಖರತೆ ಹಾಗೂ ಸ್ಥಿರ ಬದ್ಧತೆಗಳಿಂದ “ಜೈ ಹನುಮಾನ್’ ಚಿತ್ರ ಅತ್ಯದ್ಭುತವನ್ನಾಗಿಸಿದೆ. ಕರ್ನಾಟಕದ ಒಂದು ಊರಿನಿಂದ ವಿಶ್ವದೆಲ್ಲೆಡೆ ಖ್ಯಾತರಾಗಿರುವ ನೀವು, ತಮ್ಮ ಅಭಿಮಾನಿಗಳಿಗೋಸ್ಕರ ಮರೆಯಲಾಗದ ಅನುಭವ ನೀಡಲು ಸಜ್ಜಾಗುತ್ತಿದ್ದೀರಿ. ನಿಮ್ಮೊಂದಿಗೆ “ಜೈ ಹನುಮಾನ್’ ಪಯಣ ಆರಂಭಿಸಲು ಉತ್ಸುಕನಾಗಿದ್ದೇನೆ’ ಎಂದು ಸೋಶಿಯಲ್ ಮಿಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಇದಕ್ಕೆ ನಟ ರಿಷಬ್, ಪ್ರಶಾಂತ್ ಕುರಿತಾಗಿ, “ನಿಮ್ಮ ಧ್ಯೇಯ ಹಾಗೂ ಸೃಜನಶೀಲನೆ ಅದ್ಭುತವಾಗಿದೆ! ಚಿತ್ರದ ತೆರೆಯ ಹಿಂದಿನ ಕ್ಷಣಗಳು ಸ್ಮರಣೀಯ. ನಿಮ್ಮ ನಿರ್ದೇಶನದಿಂದ ತೆರೆಯ ಮೇಲೆ ಜಾದೂ ಮೂಡಲಿದೆ’ ಎಂದು ಬರೆದುಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್
Actress: ರೊಮ್ಯಾನ್ಸ್ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್
Pushpa 2: ಖಾಕಿಗೆ ಸವಾಲು ಹಾಕುವ ʼಪುಷ್ಪ-2ʼ ಹಾಡು ರಿಲೀಸ್; ವಿವಾದದ ಬೆನ್ನಲ್ಲೇ ಡಿಲೀಟ್
Updated: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ
ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.