Jailer 2: ರಜಿನಿಕಾಂತ್ ʼಜೈಲರ್-2ʼ ಬರೋದು ಕನ್ಫರ್ಮ್; ಅಪ್ಡೇಟ್ ಕೊಟ್ಟ ಯೋಗಿ ಬಾಬು
Team Udayavani, Jul 30, 2024, 4:58 PM IST
ಚೆನ್ನೈ: ಸೂಪರ್ ಸ್ಟಾರ್ ರಜಿನಿಕಾಂತ್ (Rajinikanth) ಅವರ ʼಜೈಲರ್ʼ (Jailer) ಸಿನಿಮಾ ಕಾಲಿವುಡ್‌ನಲ್ಲಿ (Kollywood) ದೊಡ್ಡ ಹಿಟ್ ಆಗಿತ್ತು. ಬಾಕ್ಸ್ ಆಫೀಸ್‌ನಲ್ಲೂ ಕಮಾಲ್ ಮಾಡಿತ್ತು.
ನೆಲ್ಸನ್ ದಿಲೀಪ್ ಕುಮಾರ್ (Nelson Dilipkumar) ʼಬೀಸ್ಟ್ʼ ಬಳಿಕ ದೊಡ್ದದಾಗಿಯೇ ಕಂಬ್ಯಾಕ್ ಮಾಡಿದ್ದರು. 500 ಕೋಟಿಗೂ ಹೆಚ್ಚಿನ ಗಳಿಕೆ ಕಂಡ ಬಳಿಕ ನೆಲ್ಸನ್ ʼಜೈಲರ್ʼ ಸೀಕ್ವೆಲ್ ಮಾಡುತ್ತಾರೆ ಎನ್ನಲಾಗಿತ್ತು.
ಶಿವರಾಜ್ ಕುಮಾರ್, ಜಾಕಿಶ್ರಾಫ್, ಮೋಹನ್ ಲಾಲ್, ವಿನಾಯಕನ್ ಅವರ ಅಭಿನಯ ʼಜೈಲರ್ʼ ಮನರಂಜನೆಯನ್ನು ಹೆಚ್ಚಿಸಿತ್ತು.
ʼಜೈಲರ್ʼ ಬಳಿಕ ರಜಿನಿಕಾಂತ್ ಸಾಲು ಸಾಲು ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈ ನಡುವೆ ಅವರ ʼಜೈಲರ್-2ʼ ಬಗ್ಗೆ ಸಹನಟ ಯೋಗಿ ಬಾಬು(Yogi Babu) ಅಪ್ಡೇಟ್ ವೊಂದನ್ನು ನೀಡಿದ್ದಾರೆ.
ʼಜೈಲರ್ʼನಲ್ಲಿ ಹಾಸ್ಯನಟನಾಗಿ ಕಾಣಿಸಿಕೊಂಡ ಯೋಗಿ ಬಾಬು, ಯೂಟ್ಯೂಬ್ ಚಾನೆಲ್ ವೊಂದಕ್ಕೆ ಕೊಟ್ಟ ಸಂದರ್ಶನದಲ್ಲಿ ʼಜೈಲರ್-2ʼ ಬಗ್ಗೆ ಹೇಳಿದ್ದಾರೆ.
“ನೆಲ್ಸನ್ ಮತ್ತು ನಾನು ʼಕೊಲಮಾವ್ ಕೋಗಿಲೆʼ, ʼಬೀಸ್ಟ್ʼ, ʼಡಾಕ್ಟರ್ʼ, ʼಜೈಲರ್ʼ ನಲ್ಲಿ ಒಟ್ಟಾಗಿ ಕೆಲಸ ಮಾಡಿದ್ದೇವೆ. ಈ ಎಲ್ಲಾ ಸಿನಿಮಾಗಳಲ್ಲಿ ನನಗೆ ಉತ್ತಮವಾದ ಹಾಸ್ಯದ ಪಾತ್ರವಿತ್ತು. ಈಗ ʼಜೈಲರ್ 2ʼ ನಲ್ಲಿಯೂ ನೆಲ್ಸನ್ ನನ್ನ ಪಾತ್ರಕ್ಕಾಗಿ ವಿಶೇಷವಾದದ್ದನ್ನು ಬರೆಯುತ್ತಿದ್ದಾರೆ. ಅದಕ್ಕಾಗಿ ನಾನು ತುಂಬಾ ಉತ್ಸುಕನಾಗಿದ್ದೇನೆ” ಎಂದು ಹೇಳಿದ್ದಾರೆ.
ಯೋಗಿ ಬಾಬು ಅವರ ಮಾತನ್ನು ಕೇಳಿ ಕಾಲಿವುಡ್ ಪ್ರೇಕ್ಷಕರು ಖುಷ್ ಆಗಿದ್ದಾರೆ. ಸದ್ಯ ಯೋಗಿ ಬಾಬು ʼಚಟ್ನಿ ಸಾಂಬಾರ್ʼ ಎಂಬ ವೆಬ್ ಸಿರೀಸ್ ನ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ.
ಇತ್ತ ರಜಿನಿಕಾಂತ್ ಅವರ ʼವೆಟ್ಟೈಯನ್ʼ, ʼಕೂಲಿʼ ಸಿನಿಮಾ ತೆರೆ ಕಾಣಲು ಕಾಯುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ
Mollywood: ಸೂಪರ್ ಸ್ಟಾರ್ ಮೋಹನ್ ಲಾಲ್‌ಗೆ ‘ಆವೇಶಮ್ʼ ನಿರ್ದೇಶಕ ಆ್ಯಕ್ಷನ್ ಕಟ್
Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.