![1-jha](https://www.udayavani.com/wp-content/uploads/2024/07/1-jha-415x231.jpg)
Jr NTR – ಪ್ರಶಾಂತ್ ನೀಲ್ ಚಿತ್ರದಲ್ಲಿ ಬಾಬಿ ಡಿಯೋಲ್ ವಿಲನ್? ನಾಯಕಿಯಾಗಿ ಈ ನಟಿ?
Team Udayavani, Jun 22, 2024, 6:02 PM IST
![9](https://www.udayavani.com/wp-content/uploads/2024/06/9-16-620x372.jpg)
ಹೈದರಾಬಾದ್: ʼಸಲಾರ್ʼ ಸರಣಿ ಬಳಿಕ ನಿರ್ದೇಶಕ ಪ್ರಶಾಂತ್ ನೀಲ್ ಜೂ.ಎನ್ ಟಿಆರ್ ಜೊತೆ ಸಿನಿಮಾ ಮಾಡಲಿದ್ದಾರೆ. ಈಗಾಗಲೇ ಅನೌನ್ಸ್ ಆಗಿರುವ ಈ ಸಿನಿಮಾದ ಬಗ್ಗೆ ಪ್ಯಾನ್ ಇಂಡಿಯಾದಲ್ಲಿ ಕುತೂಹಲ ಹೆಚ್ಚಾಗಿದೆ.
‘ಆರ್ ಆರ್ ಆರ್ʼ ಜೂ.ಎನ್ಟಿಆರ್ ʼದೇವರʼ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾಕ್ಕಾಗಿ ಸಾಕಷ್ಟು ತಯಾರಿ ನಡೆಸಿಕೊಂಡಿರುವ ಜೂ.ಎನ್ಟಿಆರ್ ಇದಾದ ಬಳಿಕ ಪ್ರಶಾಂತ್ ನೀಲ್ ಅವರೊಂದಿಗೆ ಸಿನಿಮಾವನ್ನು ಮಾಡಲಿದ್ದಾರೆ.
ʼಎನ್ ಟಿಆರ್ 31ʼ ಎನ್ನುವ ಟೈಟಲ್ ತಾತ್ಕಾಲಿಕವಾಗಿ ಇಡಲಾಗಿದೆ. ಈ ಸಿನಿಮಾಕ್ಕೆ ʼಡ್ರ್ಯಾಗನ್ʼ ಎನ್ನುವ ಪವರ್ ಫುಲ್ ಟೈಟಲ್ ಇಡಲಾಗಿದೆ ಎನ್ನಲಾಗಿದೆ. ಆದರೆ ಇದು ಅಧಿಕೃತವಾಗಿ ಅನೌನ್ಸ್ ಆಗಿಲ್ಲ.
ಇದೀಗ ಸಿನಿಮಾದ ಬಗ್ಗೆ ಟಾಲಿವುಡ್ ನಲ್ಲಿ ಲೇಟೆಸ್ಟ್ ಅಪ್ಡೇಟ್ಸ್ ಹರಿದಾಡುತ್ತಿದೆ. ಈಗಾಗಲೇ ʼಅನಿಮಲ್ʼ ನಲ್ಲಿ ನೆಗೆಟಿವ್ ಶೇಡ್ ನಲ್ಲಿ ಮಿಂಚಿ, ʼಕಂಗುವʼ ಸೇರಿದಂತೆ ದಕ್ಷಿಣದ ಕೆಲ ಸಿನಿಮಾಗಳಲ್ಲಿ ಖಡಕ್ ರೋಲ್ ನಲ್ಲಿ ಕಾಣಿಸಿಕೊಳ್ಳಲು ರೆಡಿಯಾಗಿರುವ ಬಾಬಿ ಡಿಯೋಲ್ ಜೂ.ಎನ್ ಟಿಆರ್ – ಪ್ರಶಾಂತ್ ನೀಲ್ ಸಿನಿಮಾದಲ್ಲಿ ವಿಲನ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ನಾಯಕಿಯಾಗಿ ರಶ್ಮಿಕಾ ಮಂದಣ್ಣ ಅವರು ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡಿದೆ.
ಮುಂದಿನ ದಿನಗಳಲ್ಲಿ ಚಿತ್ರತಂಡ ಈ ಬಗ್ಗೆ ಅಧಿಕೃತವಾಗಿ ಮಾಹಿತಿಯನ್ನು ಹಂಚಿಕೊಳ್ಳುವ ಸಾಧ್ಯತೆಯಿದೆ.
ಸದ್ಯ ಪ್ರಶಾಂತ್ ನೀಲ್ ʼಸಲಾರ್-2ʼ ಕೆಲಸದಲ್ಲಿ ಬ್ಯುಸಿಯಾಗಲಿದ್ದು,ಜೂ.ಎನ್ ಟಿಆರ್ ʼದೇವರ-1ʼ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.
ಟಾಪ್ ನ್ಯೂಸ್
![1-jha](https://www.udayavani.com/wp-content/uploads/2024/07/1-jha-415x231.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![ಈ ವಿಚಾರದಲ್ಲಿ ಶಾರುಖ್ ಖಾನ್ ʼಜವಾನ್ʼ ಚಿತ್ರವನ್ನೇ ಮೀರಿಸಿದ ʼKalki 2898 ADʼ](https://www.udayavani.com/wp-content/uploads/2024/06/5-19-150x90.jpg)
ಈ ವಿಚಾರದಲ್ಲಿ ಶಾರುಖ್ ಖಾನ್ ʼಜವಾನ್ʼ ಚಿತ್ರವನ್ನೇ ಮೀರಿಸಿದ ʼKalki 2898 ADʼ
![Box office: ʼಕಲ್ಕಿ 2898 ಎಡಿʼಯ 2ನೇ ದಿನದ ಗಳಿಕೆಯಲ್ಲಿ ಭಾರೀ ಕುಸಿತ; ಗಳಿಸಿದ್ದೆಷ್ಟು?](https://www.udayavani.com/wp-content/uploads/2024/06/2-19-150x90.jpg)
Box office: ʼಕಲ್ಕಿ 2898 ಎಡಿʼಯ 2ನೇ ದಿನದ ಗಳಿಕೆಯಲ್ಲಿ ಭಾರೀ ಕುಸಿತ; ಗಳಿಸಿದ್ದೆಷ್ಟು?
![How much did ‘Kalki 2898 AD’ earn at the box office on the first day?](https://www.udayavani.com/wp-content/uploads/2024/06/kalki-2-150x83.jpg)
ಬಾಕ್ಸಾಫೀಸ್ ಗೆ ಕಿಚ್ಚು ಹತ್ತಿಸಿದ ‘Kalki 2898 AD’ ಮೊದಲ ದಿನ ಗಳಿಸಿದ್ದೆಷ್ಟು?
![Kochi: ಉಸಿರಾಟ ಸಮಸ್ಯೆ; 37ನೇ ವಯಸ್ಸಿನಲ್ಲಿ ಖ್ಯಾತ ನಟನ ಮಗ ನಿಧನ](https://www.udayavani.com/wp-content/uploads/2024/06/2-18-150x90.jpg)
Kochi: ಉಸಿರಾಟ ಸಮಸ್ಯೆ; 37ನೇ ವಯಸ್ಸಿನಲ್ಲಿ ಖ್ಯಾತ ನಟನ ಮಗ ನಿಧನ
![500 ಕೋಟಿಯ ಸಿನಿಮಾ ಮಾಡುವಾಗಲೂ ಕಿತ್ತೋದ ಚಪ್ಪಲಿ ಹಾಕಿಕೊಂಡಿದ್ದ ʼಕಲ್ಕಿ 2898 ADʼ ನಿರ್ದೇಶಕ](https://www.udayavani.com/wp-content/uploads/2024/06/1-17-150x90.jpg)
500 ಕೋಟಿಯ ಸಿನಿಮಾ ಮಾಡುವಾಗಲೂ ಕಿತ್ತೋದ ಚಪ್ಪಲಿ ಹಾಕಿಕೊಂಡಿದ್ದ ʼಕಲ್ಕಿ 2898 ADʼ ನಿರ್ದೇಶಕ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.