Tollywood: ಸಮಂತಾ – ನಾಗ ಚೈತನ್ಯ ಬಗ್ಗೆ ಸಚಿವೆ ಸುರೇಖಾ ಹೇಳಿಕೆಗೆ ಇಡೀ ಟಾಲಿವುಡ್ ಆಕ್ರೋಶ
Team Udayavani, Oct 3, 2024, 2:48 PM IST
ಹೈದರಾಬಾದ್: ತೆಲುಗು ನಟ ಅಕ್ಕಿನೇನಿ ನಾಗ ಚೈತನ್ಯ (Naga Chaitanya) ಮತ್ತು ನಟಿ ಸಮಂತಾ ರುತ್ ಪ್ರಭು(Samantha Ruth Prabhu) ಅವರ ವಿಚ್ಛೇದನಕ್ಕೆ ಬಿಆರ್ಎಸ್ ಕಾರ್ಯಾಧ್ಯಕ್ಷ ಕೆ.ಟಿ.ರಾಮರಾವ್ (KTR) ಅವರೇ ಕಾರಣವೆಂದು ಸಚಿವೆ ಕೊಂಡಾ ಸುರೇಖಾ (Konda Surekha) ಹೇಳಿಕೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಇಡೀ ಟಾಲಿವುಡ್ ಈ ಹೇಳಿಕೆಯನ್ನು ಕಟುವಾಗಿ ಟೀಕಿಸಿದೆ.
ಸಚಿವೆ ಕೊಂಡಾ ಸುರೇಖಾ ಅವರು ನೀಡಿದ್ದ ಹೇಳಿಕೆಯನ್ನು ಟಾಲಿವುಡ್‌ನ ಖ್ಯಾತ ಕಲಾವಿದರು ಖಂಡಿಸಿ ಆಕ್ರೋಶ ಹೊರಹಾಕಿದ್ದಾರೆ. ಅಲ್ಲು ಅರ್ಜುನ್ (Allu Arjun), ಚಿರಂಜೀವಿ (Megastar Chiranjeevi) ಜೂ.ಎನ್ ಟಿಆರ್ (Jr NTR) ಸೇರಿದಂತೆ ಅನೇಕರು ಹೇಳಿಕೆಯನ್ನು ಖಂಡಿಸಿ ನಾಗಾರ್ಜುನ್ ಕುಟುಂಬದ ಬೆನ್ನಿಗೆ ನಿಂತಿದ್ದಾರೆ.
ಅಲ್ಲು ಅರ್ಜುನ್ ಹೇಳಿದ್ದೇನು?: ಸಚಿವೆ ಕೊಂಡಾ ಸುರೇಖಾ ಅವರ ಹೆಸರನ್ನು ಉಲ್ಲೇಖ ಮಾಡದೆ ಪರೋಕ್ಷವಾಗಿ ಅವರ ಹೇಳಿಕೆ ಬಗ್ಗೆ ಅಲ್ಲು ಅರ್ಜುನ್ ಬರೆದುಕೊಂಡಿದ್ದಾರೆ.
“ಸಿನಿಮಾ ವ್ಯಕ್ತಿಗಳು ಮತ್ತು ಚಲನಚಿತ್ರ ಕುಟುಂಬಗಳ ಬಗ್ಗೆ ಆಧಾರರಹಿತ ಅವಹೇಳನಕಾರಿಯಾಗಿ ನೀಡಿರುವ ಕಾಮೆಂಟ್‌ಗಳನ್ನು ನಾನು ಬಲವಾಗಿ ಖಂಡಿಸುತ್ತೇನೆ. ಈ ನಡವಳಿಕೆಯು ಅಗೌರವ ಮತ್ತು ನಮ್ಮ ತೆಲುಗು ಸಂಸ್ಕೃತಿಯ ಮೌಲ್ಯಗಳಿಗೆ ವಿರುದ್ಧವಾಗಿದೆ. ಇಂತಹ ಬೇಜವಾಬ್ದಾರಿ ಹೇಳಿಕೆಗಳನ್ನು ಸಾಮಾನ್ಯವೆಂದು ಪರಿಗಣಿಸಬಾರದು. ವೈಯಕ್ತಿಕ ಗೌಪ್ಯತೆಯನ್ನು ಗೌರವಿಸಿ, ವಿಶೇಷವಾಗಿ ಮಹಿಳೆಯರ ಕಡೆಗೆ ನಾವು ಸಮಾಜದಲ್ಲಿ ಗೌರವ ಮತ್ತು ಘನತೆಯನ್ನು ಉತ್ತೇಜಿಸಬೇಕು”ಎಂದು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಜೂ.ಎನ್ ಟಿಆರ್: “ಕೊಂಡಾ ಸುರೇಖಾ ಅವರೇ, ರಾಜಕೀಯಕ್ಕೆ ವೈಯಕ್ತಿಕ ಬದುಕನ್ನು ಎಳೆದು ತರುತ್ತಿರುವುದು ಸರಿಯಲ್ಲ. ಸಾರ್ವಜನಿಕ ವ್ಯಕ್ತಿಗಳು, ವಿಶೇಷವಾಗಿ ನಿಮ್ಮಂತಹ ಜವಾಬ್ದಾರಿಯುತ ಸ್ಥಾನದಲ್ಲಿರುವವರು, ಗೌಪ್ಯತೆ, ಘನತೆ ಮತ್ತು ಗೌರವವನ್ನು ಕಾಪಾಡಿಕೊಳ್ಳಬೇಕು.
Konda Surekha garu, dragging personal lives into politics is a new low. Public figures, especially those in responsible positions like you, must maintain dignity and respect for privacy. It’s disheartening to see baseless statements thrown around carelessly, especially about the…
— Jr NTR (@tarak9999) October 2, 2024
ಚಿತ್ರರಂಗದ ಬಗ್ಗೆ ಆಧಾರರಹಿತ ಹೇಳಿಕೆಗಳನ್ನು ನೀಡಿರುವುದು ಬೇಸರ ತಂದಿದೆ. ಇತರರು ನಮ್ಮ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡುವಾಗ ನಾವು ಸುಮ್ಮನಿರುವುದಿಲ್ಲ. ನಾವು ಇದಕ್ಕಿಂತ ಮೇಲೇರಬೇಕು ಮತ್ತು ಪರಸ್ಪರರ ಗೌರವವನ್ನು ಕಾಪಾಡಿಕೊಳ್ಳಬೇಕು. ಚಿತ್ರೋದ್ಯಮ ಇದನ್ನು ಸಹಿಸುವುದಿಲ್ಲ” ಎಂದು ಅವರು ಬರೆದುಕೊಂಡಿದ್ದಾರೆ.
ಮೆಗಾಸ್ಟಾರ್ ಚಿರಂಜೀವಿ: ಗೌರವಾನ್ವಿತ ಮಹಿಳಾ ಸಚಿವೆಯೊಬ್ಬರು ಮಾಡಿರುವ ಅವಹೇಳನಕಾರಿ ಹೇಳಿಕೆಗಳನ್ನು ನೋಡಿ ನನಗೆ ತುಂಬಾ ನೋವಾಗಿದೆ. ಖ್ಯಾತನಾಮರು ಮತ್ತು ಚಿತ್ರರಂಗದ ಸದಸ್ಯರು ಈ ರೀತಿಯ ಹೇಳಿಕೆಗಳಿಂದ ಸಾಫ್ಟ್ ಟಾರ್ಗೆಟ್ ಆಗುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ.
I am extremely pained to see the disgraceful remarks made by an honourable woman minister.
It is a shame that celebs and members of film fraternity become soft targets as they provide instant reach and attention. We as Film Industry stand united in opposing such vicious verbal…
— Chiranjeevi Konidela (@KChiruTweets) October 3, 2024
ನಾವು ಚಲನಚಿತ್ರೋದ್ಯಮದ ಸದಸ್ಯರ ಮೇಲಿನ ಇಂತಹ ಕೆಟ್ಟ ಮೌಖಿಕ ಹಲ್ಲೆಗಳನ್ನು ವಿರೋಧಿಸಲು ಒಗ್ಗಟ್ಟಾಗಿ ನಿಲ್ಲುತ್ತೇವೆ. ರಾಜಕೀಯ ಲಾಭಕ್ಕಾಗಿ ಸಂಪರ್ಕವೇ ಇಲ್ಲದ ಜನರನ್ನು ಗುರಿಯಾಗಿಸಿಕೊಂಡು ಈ ರೀತಿ ಹೇಳಿಕೆ ನೀಡಿ ಆರೋಪಿಸುವುದು ಅಸಹ್ಯಕರವಾಗಿದೆ ಎಂದು ಅವರು ʼಎಕ್ಸ್ʼ ನಲ್ಲಿ ಬರೆದುಕೊಂಡಿದ್ದಾರೆ.
ನಟ ನಾನಿ: ರಾಜಕಾರಣಿಗಳು ಯಾವುದೇ ರೀತಿಯ ಅಸಂಬದ್ಧ ಮಾತನಾಡಿ ತಪ್ಪಿಸಿಕೊಳ್ಳಬಹುದು ಎಂದು ಯೋಚಿಸುವುದು ಅಸಹ್ಯಕರವಾಗಿದೆ. ನಿಮ್ಮ ಮಾತುಗಳು ತುಂಬಾ ಬೇಜವಾಬ್ದಾರಿಯಾಗಿರುವಾಗ, ನಿಮ್ಮ ಜನರ ಬಗ್ಗೆ ನಿಮಗೆ ಯಾವುದೇ ಜವಾಬ್ದಾರಿ ಇರುತ್ತದೆ ಎಂದು ನಿರೀಕ್ಷಿಸುವುದು ಮೂರ್ಖತನ.
ಇದು ಕೇವಲ ನಟರು ಅಥವಾ ಸಿನಿಮಾದ ಬಗ್ಗೆ ಅಲ್ಲ. ಇದು ಯಾವುದೇ ರಾಜಕೀಯ ಪಕ್ಷಕ್ಕೆ ಸಂಬಂಧಿಸಿದ್ದಲ್ಲ. ಗೌರವಾನ್ವಿತ ಸ್ಥಾನದಲ್ಲಿರುವವರು ಮಾಧ್ಯಮಗಳ ಮುಂದೆ ಆಧಾರರಹಿತವಾಗಿ ಮಾತನಾಡುವುದು ಮತ್ತು ಅದು ಸರಿ ಎಂದು ಭಾವಿಸುವುದು ಸರಿಯಲ್ಲ. ನಮ್ಮ ಸಮಾಜದ ಮೇಲೆ ಕೆಟ್ಟದಾಗಿ ಪ್ರತಿಬಿಂಬಿಸುವ ಇಂತಹ ಆಚರಣೆಯನ್ನು ನಾವೆಲ್ಲರೂ ಖಂಡಿಸಬೇಕು ಎಂದು ನಾನಿ ಹೇಳಿದ್ದಾರೆ.
ನಟಿ ಖುಷ್ಬೂ ಸುಂದರ್:
2 ನಿಮಿಷದ ಪ್ರಸಿದ್ಧಿ ಮತ್ತು ಯೆಲ್ಲೋ ಜರ್ನಲಿಸಂನಲ್ಲಿ ಮುಳುಗಿರುವವರು ಮಾತ್ರ ಈ ಭಾಷೆಯನ್ನು ಮಾತನಾಡುತ್ತಾರೆ ಎಂದು ನಾನು ಭಾವಿಸಿದ್ದೆ. ಆದರೆ ಇಲ್ಲಿ, ನಾನು ಹೆಣ್ತನಕ್ಕೆ ಸಂಪೂರ್ಣ ಅವಮಾನವನ್ನು ನೋಡುತ್ತೇನೆ. ಕೊಂಡಾ ಸುರೇಖಾ ಅವರೇ, ನಿಮ್ಮಲ್ಲಿ ಕೆಲವು ಮೌಲ್ಯಗಳು ತುಂಬಿವೆ ಎಂದು ನನಗೆ ಗೊತ್ತಿದೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿಯು ನನ್ನ ಉದ್ಯಮ, ನನ್ನ ಪೂಜಾ ಸ್ಥಳದ ಬಗ್ಗೆ ಆಧಾರರಹಿತ, ಭಯಾನಕ ಮತ್ತು ಅವಹೇಳನಕಾರಿ ಹೇಳಿಕೆಗಳನ್ನು ನೀಡಲು ಸಾಧ್ಯವಿಲ್ಲ. ಇನ್ನು ಮುಂದೆ ಇಂತಹ ನಿಂದನೆಗೆ ಸಿನಿಮಾ ಇಂಡಸ್ಟ್ರಿ ಮೂಕ ಪ್ರೇಕ್ಷಕರಾಗುವುದಿಲ್ಲ. ಸಾಕು ಸಾಕು. ಇಂತಹ ಆಧಾರರಹಿತ ಮತ್ತು ಸುಳ್ಳು ಆರೋಪಗಳಿಗಾಗಿ ನೀವು ಇನ್ನೊಬ್ಬ ಮಹಿಳೆಗೆ ಮಹಿಳೆಯಾಗಿ ಇಡೀ ಚಿತ್ರರಂಗದ ಕ್ಷಮೆಯಾಚಿಸಬೇಕು ಎಂದು ಖುಷ್ಬೂ ಸುಂದರ್ ಬರೆದುಕೊಂಡಿದ್ದಾರೆ.
I thought it was only those who need 2 minute fame and indulge in yellow journalism speak this language. But here, I see an absolute disgrace to womanhood. Konda Surekha garu, I am sure some values were instilled in you. Where have they flown out of the window? A person in a…
— KhushbuSundar (@khushsundar) October 2, 2024
ಇವರಷ್ಟೇ ಅಲ್ಲದೇ ನಿರ್ದೇಶಕ ಶ್ರೀಕಾಂತ್ ಒಡೆಲಾ, ನಟಿ -ನಿರ್ಮಾಪಕಿ ಲಕ್ಷ್ಮಿ ಮಂಚು, ನಿರ್ಮಾಪಕ ಕೋನ ವೆಂಕಟ್ ಸೇರಿದಂತೆ ಅನೇಕರು ಸುರೇಖಾ ಅವೆ ಹೇಳಿಕೆಯನ್ನು ಖಂಡಿಸಿದ್ದಾರೆ.
ಕ್ಷಮೆಯಾಚಿಸಿ ಹೇಳಿಕೆ ಹಿಂಪಡೆದ ಸಚಿವೆ: ತಮ್ಮ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾದ ಬೆನ್ನಲ್ಲೇ ಸಚಿವೆ ಸುರೇಖಾ ಅವರು ಸಮಂತಾ ಅವರ ಬಳಿ ಕ್ಷಮೆ ಕೇಳಿ ಹೇಳಿಕೆಯನ್ನು ಹಿಂಪಡೆದಿದ್ದಾರೆ.
ನನ್ನ ಹೇಳಿಕೆಯಿಂದ ನಟಿ ಸಮಂತಾ ಅವರಿಗೆ ನೋವಾಗಿದ್ದರೆ ಈ ಕೂಡಲೇ ನನ್ನ ಹೇಳಿಕೆಯನ್ನು ಹಿಂಪಡೆಯುತ್ತೇನೆ, ಅಲ್ಲದೆ ನನ್ನ ಉದ್ದೇಶ ಯಾರ ಮನಸ್ಸನ್ನು ನೋಯಿಸುವುದು ಆಗಿರಲಿಲ್ಲ ಬದಲಾಗಿ ಒಬ್ಬ ನಾಯಕ ಓರ್ವ ಮಹಿಯನ್ನು ಯಾವ ಮಟ್ಟದಲ್ಲಿ ನೋಡುತ್ತಿದ್ದಾನೆ ಎಂಬುದನ್ನು ಗೊತ್ತುಪಡಿಸುವುದು ಆಗಿತ್ತು ಹೊರತು ನಿಮ್ಮ ಭಾವನೆಗೆ ಧಕ್ಕೆ ತರುವುದು ಆಗಿರಲಿಲ್ಲ ಅಲ್ಲದೆ ನೀವು ಸ್ವಾವಲಂಬಿಯಾಗಿ ಬೆಳೆದು ಬಂದ ರೀತಿಯ ಬಗ್ಗೆ ನನಗೆ ಅಭಿಮಾನ ಮಾತ್ರವಲ್ಲ ಅದು ಆದರ್ಶವೂ ಆಗಿದೆ ಎಂದು ʼಎಕ್ಸ್ʼನಲ್ಲಿ ಸಚಿವೆ ಬರೆದುಕೊಂಡಿದ್ದಾರೆ.
ಸಚಿವೆ ಮಾಡಿದ್ದ ಆರೋಪವೇನು?:
ಬುಧವಾರ(ಅ.2ರಂದು) ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾಧ್ಯಮದವರ ಜೊತೆ ಮಾತನಾಡಿ, ಸಚಿವೆ ಕೊಂಡಾ ಸುರೇಖಾ, ನಾಗ ಚೈತನ್ಯ ಮತ್ತು ನಟಿ ಸಮಂತಾ ಜೀವನದಲ್ಲಿ ಹುಳಿ ಹಿಂಡಿದ್ದೆ ಕೆಟಿಆರ್ ಅಷ್ಟು ಮಾತ್ರವಲ್ಲದೆ ಸಮಂತಾ, ನಾಗಚೈತನ್ಯ ಮಾತ್ರವಲ್ಲದೆ ಟಾಲಿವುಡ್ ನ ಹಲವು ನಟಿಯರ ಫೋನ್ ಟ್ರ್ಯಾಪ್ ಮಾಡಿ ಅವರನ್ನು ಡ್ರಗ್ಸ್ ದಂಧೆಗೆ ಬಳಸಿ ಅವರ ಬಾಳನ್ನು ಹಾಳು ಮಾಡಿದ್ದಾನೆ ಎಂದು ಸಚಿವೆ ಆರೋಪಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mollywood: ಸೂಪರ್ ಸ್ಟಾರ್ ಮೋಹನ್ ಲಾಲ್‌ಗೆ ‘ಆವೇಶಮ್ʼ ನಿರ್ದೇಶಕ ಆ್ಯಕ್ಷನ್ ಕಟ್
Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ
Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ
Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ
Malayalam actor: ಹಾಲಿವುಡ್‌ನಲ್ಲೂ ಮಿಂಚಿದ್ದ ಮಾಲಿವುಡ್‌ನ ಹಿರಿಯ ನಟ ಥಾಮಸ್ ನಿಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Pro Kabaddi: ಪಾಟ್ನಾ-ಗುಜರಾತ್ ಟೈ
BBK11: ನಿಮ್ಮ ಉಸ್ತುವಾರಿ ನೋಡಿ ಹೇಸಿಗೆ ಆಯಿತು.. ಚೈತ್ರಾ ಬಾಯಿ ಮುಚ್ಚಿಸಿದ ಕಿಚ್ಚ
C.T.Ravi issue: ಕೋರ್ಟ್‌ನಲ್ಲಿರುವ ವಿಚಾರದ ಬಗ್ಗೆ ಚರ್ಚಿಸುವುದು ಸರಿಯಲ್ಲ: ಜಿ.ಪರಮೇಶ್ವರ್
Padubidri: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ; ಸಹ ಸವಾರ ಸಾವು
Kundapura: ತ್ರಾಸಿ ಕಡಲ ಕಿನಾರೆಯಲ್ಲಿ ಮಗುಚಿದ ಜೆಟ್ ಸ್ಕೀ ಬೋಟ್; ರೈಡರ್ ನಾಪತ್ತೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.