Tollywood: ತನ್ನ ಸಿನಿಮಾವನ್ನು ಹೊಗಳಿ ವಂಗಾ,ಮೌಳಿ,ನೀಲ್ ಗೆ ಟಾಂಗ್‌ ಕೊಟ್ರಾ ನಾಗ್‌ಅಶ್ವಿನ್?

ರಕ್ತಪಾತ, ಅಶ್ಲೀಲತೆಯಿಲ್ಲದೆ ನಾವಿದ್ದನ್ನು ಸಾಧಿಸಿದ್ದೇವೆ..

Team Udayavani, Jul 14, 2024, 6:53 PM IST

Tollywood: ತನ್ನ ಸಿನಿಮಾವನ್ನು ಹೊಗಳಿ ವಂಗಾ,ಮೌಳಿ,ನೀಲ್ ಗೆ ಟಾಂಗ್‌ ಕೊಟ್ರಾ ನಾಗ್‌ಅಶ್ವಿನ್?

ಹೈದರಾಬಾದ್:‌ ಪ್ರಭಾಸ್‌ ಅಭಿನಯದ ‘ಕಲ್ಕಿ 2898 AD’ (Kalki 2898 AD) ಬಾಕ್ಸ್‌ ಆಫೀಸ್‌ ನಲ್ಲಿ ಧೂಳ್ ಎಬ್ಬಿಸುತ್ತಿದೆ. ರಿಲೀಸ್‌ ಆದ ಕೆಲವೇ ದಿನಗಳಲ್ಲಿ ವರ್ಲ್ಡ್‌ ವೈಡ್‌ ಚಿತ್ರ 1000 ಕೋಟಿ ರೂ. ಗಳಿಕೆ ಕಂಡಿದೆ ಎಂದು ಚಿತ್ರತಂಡವೇ ಹೇಳಿದೆ.

ನಿರ್ದೇಶಕ ನಾಗ್‌ ಅಶ್ವಿನ್‌ (Nag Ashwin)  ಸಾಕಷ್ಟು ಪರಿಶ್ರಮವಹಿಸಿ ʼಕಲ್ಕಿʼ ಲೋಕವನ್ನು ಸೃಷ್ಟಿಸಿ ಅದರಲ್ಲಿ ಸೈನ್ಸ್‌ ಫೀಕ್ಷನ್‌ ಹಾಗೂ ಪೌರಾಣಿಕ ಜಗತ್ತನ್ನು ತೋರಿಸಿದ್ದಾರೆ. ನಾಗ್‌ ಅಶ್ವಿನ್‌ ಅವರ ಅಮೋಘ ದೃಶ್ಯ ಕಾವ್ಯವನ್ನು ನೋಡಿ ಪ್ರೇಕ್ಷಕರು ಫಿದಾ ಆಗಿದ್ದಾರೆ.

ಪ್ರಭಾಸ್‌ (Prabhas), ಅಮಿತಾಭ್‌(Amitabh Bachchan), ಕಮಲ್‌ ಹಾಸನ್‌(Kamal Haasan), ದೀಪಿಕಾ(Deepika Padukone).. ಹೀಗೆ ಬಹುದೊಡ್ಡ ಕಲಾವಿದರ ದಂಡೇ ಇರುವ ʼ ಕಲ್ಕಿ 2898 ಎಡಿʼ  ಚಿತ್ರದಲ್ಲಿದೆ.

ಆದರೆ ಕೆಲವರಿಗೆ ಸಿನಿಮಾ ಇಷ್ಟವಾಗಿಲ್ಲ. ಕಡೆಯ 30 ನಿಮಿಷ ಮಾತ್ರ ಚೆನ್ನಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ನಡುವೆ ನಿರ್ದೇಶಕ ನಾಗ್‌ ಅಶ್ವಿನ್‌ ಅವರು ಪೋಸ್ಟ್‌ ವೊಂದು ಚರ್ಚೆಗೆ ಗ್ರಾಸವಾಗಿದೆ.

ʼʼಈ ಮೈಲುಗಲ್ಲು, ಈ ಸಂಖ್ಯೆ (1000 ಕೋಟಿ ರೂ.) ನಮ್ಮಂತಹ ಯುವ ತಂಡಕ್ಕೆ  ಖಂಡಿತವಾಗಿಯೂ ದೊಡ್ಡದೇ. ಆದರೆ ನಾವು ಈ ಸಂಖ್ಯೆಯನ್ನು ಯಾವುದೇ ರಕ್ತಪಾತ, ಅಶ್ಲೀಲತೆ, ಪ್ರಚೋದನಕಾರಿ ಅಥವಾ ಶೋಷಣೆಯ ಕಂಟೆಂಟ್‌ ಗಳಿಲ್ಲದೆ ಸಾಧಿಸಿದ್ದೇವೆ ಎನ್ನುವುದು ವಿಶೇಷ. ನಮ್ಮ ಬೆನ್ನುಲುಬಾಗಿ ನಿಂತ ಪ್ರೇಕ್ಷಕರಿಗೆ ಹಾಗೂ ಕಲಾವಿದರಿಗೆ ಧನ್ಯವಾದಗಳು” ಎಂದು ಇನ್ಸ್ಟಾಗ್ರಾಮ್‌ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.

ʼಕೆಜಿಎಫ್‌ʼ, ʼಬಾಹುಬಲಿʼ, ಅನಿಮಲ್‌ ಹಾಗೂ ʼಸಲಾರ್‌ʼ ಸಿನಿಮಾಗಳಲ್ಲಿ ಹಿಂಸಾತ್ಮಕ ದೃಶ್ಯ ಹಾಗೂ ಹಸಿಬಿಸಿ ದೃಶ್ಯಗಳು ಹೆಚ್ಚಾಗಿತ್ತು. ʼಕಲ್ಕಿʼಯಲ್ಲಿ ಇದ್ಯಾವ ದೃಶ್ಯಗಳಿಲ್ಲ, ಹೀಗಾಗಿ ಇದನ್ನೆಲ್ಲ ಉದ್ದೇಶಿಸಿ ನಾಗ್‌ ಅಶ್ವಿನ್‌ ಹೇಳಿದ್ದಾರೆ ಎನ್ನಲಾಗಿದೆ.

ಈ ಸ್ಟೋರಿ ಹಾಕಿದ ಬೆನ್ನಲ್ಲೇ ನೆಟ್ಟಿಗರು ನಾಗ್‌ ಅಶ್ವಿನ್‌ ಅವರ ಮೇಲೆ ಮುಗಿಬಿದ್ದಿದ್ದಾರೆ.  ಸಂದೀಪ್‌ ರೆಡ್ಡಿ ವಂಗಾ(Sandeep Reddy Vanga) ಅವರಿಗೆ ಟಾಂಗ್‌ ಕೊಡಲೆಂದೇ ನಾಗ್‌ ಅಶ್ವಿನ್‌ ಈ ರೀತಿ ಸ್ಟೋರಿ ಹಾಕಿದ್ದಾರೆ  ಎನ್ನಲಾಗುತ್ತಿದೆ.  ಏಕೆಂದರೆ ʼಅನಿಮಲ್‌ʼ ನಲ್ಲಿ ಸಿಕ್ಕಾಪಟ್ಟೆ ವೈಲೆನ್ಸ್‌ ಹಾಗೂ ಬೋಲ್ಡ್‌ ದೃಶ್ಯಗಳಿದ್ದವು.

ʼಕಲ್ಕಿʼ 1000 ಕೋಟಿ ಗಳಿಸಿದೆ ಎನ್ನುತ್ತಿದ್ದಾರೆ. ಆದರೆ ಸಿನಿಮಾವನ್ನು ಹಾಲಿವುಡ್‌ ನಿಂದ ಕಾಪಿ ಮಾಡಿ ಕಟ್ಟಿಕೊಡಲಾಗಿದೆ ಎಂದು ಕೆಲವರು ಕಮೆಂಟ್‌ ಮಾಡಿದ್ದರೆ, ಇನ್ನು ಕೆಲವರು ನಾಗ್‌ ಅಶ್ವಿನ್‌ ಸತ್ಯಾಂಶವನ್ನೇ ಹೇಳಿದ್ದಾರೆ ಎಂದು ಅವರ ಪರವಾಗಿ ಕಮೆಂಟ್‌ ಮಾಡಿದ್ದಾರೆ.

ಸದ್ಯ ನಾಗ್‌ ಅಶ್ವಿನ್‌ ಅವರ ಪೋಸ್ಟ್‌ ಟಾಲಿವುಡ್‌ ನಲ್ಲಿ ಚರ್ಚೆ ಹುಟ್ಟುಹಾಕಿದೆ.

ಚಿತ್ರದಲ್ಲಿ ಪ್ರಭಾಸ್‌, ಅಮಿತಾಭ್‌ ಬಚ್ಚನ್‌, ದೀಪಿಕಾ ಪಡುಕೋಣೆ, ಕಮಲ್‌ ಹಾಸನ್‌, ದಿಶಾ ಪಟಾನಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ದುಲ್ಕರ್ ಸಲ್ಮಾನ್, ವಿಜಯ್ ದೇವರಕೊಂಡ ಮತ್ತು ಮೃಣಾಲ್ ಠಾಕೂರ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಟಾಪ್ ನ್ಯೂಸ್

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam actor: ಹಾಲಿವುಡ್‌ನಲ್ಲೂ ಮಿಂಚಿದ್ದ ಮಾಲಿವುಡ್‌ನ ಹಿರಿಯ ನಟ ಥಾಮಸ್ ನಿಧನ

Malayalam actor: ಹಾಲಿವುಡ್‌ನಲ್ಲೂ ಮಿಂಚಿದ್ದ ಮಾಲಿವುಡ್‌ನ ಹಿರಿಯ ನಟ ಥಾಮಸ್ ನಿಧನ

1-reeee

‘Pushpa 2: 10 ದಿನಗಳಲ್ಲಿ ಹೊಸ ದಾಖಲೆಯ ಕಲೆಕ್ಷನ್ ಕಂಡು ಮುನ್ನುಗ್ಗುತ್ತಿರುವ ಪುಷ್ಪ 2

1-pettist

Tulu cinema; ಕೋಸ್ಟಲ್‌ನಲ್ಲೀಗ ಸಿನೆಮಾ ಹಂಗಾಮಾ!

SSMB29: ರಾಜಮೌಳಿ – ಮಹೇಶ್‌ ಬಾಬು ಸಿನಿಮಾದ ಲೀಡ್‌ ರೋಲ್‌ನಲ್ಲಿ ಪ್ರಿಯಾಂಕಾ ಚೋಪ್ರಾ?

SSMB29: ರಾಜಮೌಳಿ – ಮಹೇಶ್‌ ಬಾಬು ಸಿನಿಮಾದ ಲೀಡ್‌ ರೋಲ್‌ನಲ್ಲಿ ಪ್ರಿಯಾಂಕಾ ಚೋಪ್ರಾ?

Video: ಜೈಲಿನಿಂದ ಅಲ್ಲು ಅರ್ಜುನ್‌ ಬಿಡುಗಡೆಗೆ ಆಗ್ರಹ; ಆತ್ಮಹತ್ಯೆ ಯತ್ನಿಸಿದ ಅಭಿಮಾನಿ

Video: ಜೈಲಿನಿಂದ ಅಲ್ಲು ಅರ್ಜುನ್‌ ಬಿಡುಗಡೆಗೆ ಆಗ್ರಹ; ಆತ್ಮಹತ್ಯೆ ಯತ್ನಿಸಿದ ಅಭಿಮಾನಿ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.