Kamal Haasan: ಇನ್ಮುಂದೆ ನನ್ನನ್ನುʼಉಳಗನಾಯಗನ್ʼ ಎಂದು ಕರೆಯಬೇಡಿ.. ಕಮಲ್‌ ವಿಶೇಷ ಮನವಿ


Team Udayavani, Nov 11, 2024, 2:42 PM IST

Kamal Haasan: ಇನ್ಮುಂದೆ ನನ್ನನ್ನುʼಉಳಗನಾಯಗನ್ʼ ಎಂದು ಕರೆಯಬೇಡಿ.. ಕಮಲ್‌ ವಿಶೇಷ ಮನವಿ

ಚೆನ್ನೈ: ಕಾಲಿವುಡ್‌ ನಟ ಕಮಲ್ ಹಾಸನ್ (Kamal Haasan) ಭಾರತೀಯ ಸಿನಿಮಾರಂಗದ ದಿಗ್ಗಜ ನಟರಲ್ಲಿ ಒಬ್ಬರು. ತಮ್ಮ ಸಿನಿಮಾಗಳಿಂದ ಅಪಾರ ಅಭಿಮಾನಿಗಳ ಪ್ರೀತಿ – ಪ್ರೋತ್ಸಾಹವನ್ನು ʼಇಂಡಿಯನ್‌ʼ ನಟ ಪಡೆದುಕೊಂಡಿದ್ದಾರೆ.

ಕಮಲ್‌ ಹಾಸನ್‌ ಅವರ ಅಭಿನಯದ ಬಗ್ಗೆ ಎರಡು ಮಾತಿಲ್ಲ. ಅಭಿಮಾನಿಗಳು ನಟನ ಮೇಲಿನ ಪ್ರೀತಿಯಿಂದ ಕಮಲ್‌ ಹಾಸನ್‌ ಅವರಿಗೆ ಅನೇಕ ಬಿರುದುಗಳನ್ನು ನೀಡಿದ್ದಾರೆ. ಇದನ್ನು ಪ್ರೀತಿಯಿಂದಲೇ ಕಮಲ್‌ ಹಾಸನ್‌ ಸೀಕ್ವರಿಸಿದ್ದಾರೆ. \

ಇದನ್ನೂ ಓದಿ: Kantara1: ಪೇಮೆಂಟ್‌ ನೀಡದ ಆರೋಪ; ಹೊಂಬಾಳೆ ವಿರುದ್ಧ ಬೀದಿಗಿಳಿದ ಜೂನಿಯರ್‌ ಅರ್ಟಿಸ್ಟ್‌ಗಳು

ಅಭಿಮಾನಿಗಳಿಗೆ ಕಮಲ್‌ ಹಾಸನ್‌ ತಮಗೆ ನೀಡಿರುವ ಬಿರುದುಗಳ ಬಗ್ಗೆ ವಿಶೇಷ ಮನವಿ ಮಾಡಿದ್ದಾರೆ.

“ನನಗೆ ʼಉಳಗನಾಯಗನ್ʼ ಸೇರಿದಂತೆ ಅನೇಕ ಬಿರುದುಗಳನ್ನು ನೀಡಿದ್ದೀರಿ. ಇದಕ್ಕಾಗಿ ನಾನು ಕೃತಜ್ಞನಾಗಿದ್ದೇನೆ. ಅಭಿಮಾನಿಗಳಿಂದ ನೀಡಲ್ಪಟ್ಟ ಈ ಗೌರವ ಹಾಗೂ ಮೆಚ್ಚುಗೆ ವಿನ್ರಮವಾಗಿದೆ. ಇದರಿಂದ ನಾನು ಪ್ರೇರಿತನಾಗಿದ್ದೇನೆ. ನಾನು ಸಿನಿಮಾವೆಂಬ ಕ್ರಾಫ್ಟ್‌ ನ ವಿದ್ಯಾರ್ಥಿ ಆಗಿದ್ದೇನೆ. ಇದರಲ್ಲಿ ಸದಾ ಕಲಿಯಲು ಮತ್ತು ಬೆಳೆಯಬೇಕೆಂದು ನಾನು ಭಾವಿಸುತ್ತೇನೆ. ಯಾವುದೇ ರೀತಿಯ ಸೃಜನಶೀಲ ಅಭಿವ್ಯಕ್ತಿಯಂತೆ ಸಿನಿಮಾ ಎಲ್ಲರಿಗೂ ಸೇರಿದ್ದು. ಇದು ಅಸಂಖ್ಯಾತ ಕಲಾವಿದರು, ತಂತ್ರಜ್ಞರು ಮತ್ತು ಪ್ರೇಕ್ಷಕರ ಸಹಯೋಗದಿಂದ ಇರುವಂಥದ್ದು” ಎಂದು ಕಮಲ್‌ ಹೇಳಿದ್ದಾರೆ.

“ಕಲೆಗಿಂತ ಕಲಾವಿದ ಮೇಲೇರಬಾರದು ಎಂಬುದು ನನ್ನ ನಂಬಿಕೆ. ನನ್ನ ಅಪೂರ್ಣತೆಗಳು ಮತ್ತು ಸುಧಾರಿಸಬೇಕಾದ ನನ್ನ ಕರ್ತವ್ಯಕ್ಕೆ ನಾನು ಆಧಾರವಾಗಿರಲು ಬಯಸುತ್ತೇನೆ. ಆದ್ದರಿಂದ ನನ್ನ ಎಲ್ಲಾ ಅಭಿಮಾನಿಗಳು, ಮಾಧ್ಯಮಗಳು, ಚಲನಚಿತ್ರ ಬಂಧುಗಳು, ಪಕ್ಷದ ಕಾರ್ಯಕರ್ತರು ಇನ್ಮುಂದೆ ನನ್ನನ್ನು ಕಮಲ್ ಹಾಸನ್ ಅಥವಾ ಕಮಲ್ ಅಥವಾ ಕೆಹೆಚ್ ಎಂದು ಸಂಬೋಧಿಸಬೇಕೆಂದು ನಾನು ವಿನಮ್ರವಾಗಿ ವಿನಂತಿಸುತ್ತೇನೆ” ಎಂದು ಅವರು ಬರೆದುಕೊಂಡಿದ್ದಾರೆ.

ಈ ಹಿಂದೆ ನಟ ಅಜಿತ್‌ ಕುಮಾರ್‌ ಕೂಡ ತಮ್ಮನ್ನು ʼಥಲಾʼವೆಂದು ಕರೆಯಬೇಡಿ ಎಂದಿದ್ದರು. ಇದೀಗ ಕಾಲಿವುಡ್‌ನ ಮತ್ತೊಬ್ಬ ನಟ ತಮ್ಮ ಬಿರುದನ್ನು ತಿರಸ್ಕರಿಸಿದ್ದಾರೆ.

ಸದ್ಯ ಕಮಲ್‌ ಹಾಸನ್‌ ಮಣಿರತ್ನಂ ಅವರ ʼಥಗ್‌ ಲೈಫ್‌ʼ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

ಟಾಪ್ ನ್ಯೂಸ್

Mulki-kambala

Kambala Kalarava: ರಾಜ ಮನೆತನದ ಐತಿಹ್ಯವಿರುವ ಮೂಲ್ಕಿ ಸೀಮೆಯ ʼಅರಸು ಕಂಬಳʼ

IND-W vs WI: ವನಿತೆಯರ ಏಕದಿನ ಮುಖಾಮುಖಿ

IND-W vs WI: ವನಿತೆಯರ ಏಕದಿನ ಮುಖಾಮುಖಿ

GST

Old cars ಬಿಕರಿಗೆ ಶೇ.18 ಜಿಎಸ್‌ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್‌ಟಿ ಸಭೆ ತೀರ್ಮಾನ

fadnavis

Maharashtra; ಫ‌ಡ್ನವೀಸ್‌ ಬಳಿ ಗೃಹ, ಶಿಂಧೆಗೆ ನಗರಾಭಿವೃದ್ಧಿ ಸೇರಿ 3 ಪ್ರಮುಖ ಖಾತೆ!

BJP 2

BJP; ಬಣ ರಾಜಕೀಯ ತಪ್ಪಿಸಲು ತೃತೀಯ ಬಣ ಸಭೆ?

1-srrrr

English ತರಬೇತಿ ಮಾಧ್ಯಮವಷ್ಟೇ ಆಗಲಿ: ಗೊ.ರು.ಚನ್ನಬಸಪ್ಪ

Sheik Hasina

Sheikh Hasina ಅವಧಿಯಲ್ಲಾದ ಅಪಹರಣಗಳಿಗೆ ಭಾರತ ಕುಮ್ಮಕ್ಕು: ಬಾಂಗ್ಲಾ ವರದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ

Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ

Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ

Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ

Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ

Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ

Malayalam actor: ಹಾಲಿವುಡ್‌ನಲ್ಲೂ ಮಿಂಚಿದ್ದ ಮಾಲಿವುಡ್‌ನ ಹಿರಿಯ ನಟ ಥಾಮಸ್ ನಿಧನ

Malayalam actor: ಹಾಲಿವುಡ್‌ನಲ್ಲೂ ಮಿಂಚಿದ್ದ ಮಾಲಿವುಡ್‌ನ ಹಿರಿಯ ನಟ ಥಾಮಸ್ ನಿಧನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

2

Kasaragod: ಮರಳಿ ಬಂದ ಯುವಕ – ಯುವತಿ ಮತ್ತೆ ನಾಪತ್ತೆ

Mulki-kambala

Kambala Kalarava: ರಾಜ ಮನೆತನದ ಐತಿಹ್ಯವಿರುವ ಮೂಲ್ಕಿ ಸೀಮೆಯ ʼಅರಸು ಕಂಬಳʼ

IND-W vs WI: ವನಿತೆಯರ ಏಕದಿನ ಮುಖಾಮುಖಿ

IND-W vs WI: ವನಿತೆಯರ ಏಕದಿನ ಮುಖಾಮುಖಿ

11

Puttur: ಎರಡು ಕಡೆ ಚಿನ್ನಾಭರಣ ಕಳವು; ಮೂವರ ಸೆರೆ

Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ

Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.