Kanguva: ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಆನ್‌ಲೈನ್‌ನಲ್ಲಿ ʼಕಂಗುವʼ ಫುಲ್ ಮೂವಿ ಲೀಕ್
Team Udayavani, Nov 14, 2024, 5:28 PM IST
ಚೆನ್ನೈ: ಕಾಲಿವುಡ್ ಸ್ಟಾರ್ ಸೂರ್ಯ (Suriya) ಅಭಿನಯದ ʼಕಂಗುವʼ (Kanguva) ಗುರುವಾರ (ನ.14 ರಂದು) ವರ್ಲ್ಡ್ ವೈಡ್ ರಿಲೀಸ್ ಆಗಿದೆ. ಸೂರ್ಯ – ಬಾಬಿಯ ʼಕಂಗುವʼ ಸಾಮ್ರಾಜ್ಯ ನೋಡಲು ಪ್ರೇಕ್ಷಕರು ಥಿಯೇಟರ್ ನತ್ತ ಬರುತ್ತಿದ್ದಾರೆ.
ʼಕಂಗುವʼದಲ್ಲಿನ ಸೂರ್ಯ ಅವರ ಅಭಿನಯಕ್ಕೆ ಪ್ರೇಕ್ಷಕರು ಬಹುಪರಾಕ್ ಹಾಕಿದ್ದಾರೆ. ಇನ್ನುಳಿದಂತೆ ಸಿನಿಮಾ ನೋಡಿದವರು ಮಿಶ್ರ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಥಿಯೇಟರ್ ಗೆ ಬಂದು ಕೆಲ ಗಂಟೆಗಳಷ್ಟೇ ಕಳೆದಿದೆ. ಆದಾಗಲೇ ಸಿನಿಮಾ ಆನ್‌ಲೈನ್‌ನಲ್ಲಿ ಸೋರಿಕೆ ಆಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: Kasturi Shankar: ನಟಿ ಕಸ್ತೂರಿ ಶಂಕರ್ ಜಾಮೀನು ಅರ್ಜಿ ವಜಾ; ಶೀಘ್ರ ಬಂಧನ ಸಾಧ್ಯತೆ
ʼಕಂಗುವʼ ರಿಲೀಸ್ ಆದ ಕೆಲವೇ ಗಂಟೆಯಲ್ಲಿ ಸಿನಿಮಾದ ಸಂಪೂರ್ಣ ಹೆಚ್ ಡಿ ಕ್ವಾಲಿಟಿ ಟೆಲಿಗ್ರಾಮ್, ಫಿಲ್ಮಿಜಿಲ್ಲಾ, ಮೂವಿ ರೂಜ್ಸ್, ತಮಿಳುರಾಕರ್ಜ್‌ನಂತಹ ವೆಬ್‌ಸೈಟ್‌ಗಳಲ್ಲಿ ಲೀಕ್ ಆಗಿದೆ. ಇದಲ್ಲದೆ ಪೈರೇಟೆಡ್ ಸೈಟ್‌ಗಳಾದ ತಮಿಳುಯೋಗಿ, ಮೂವೀಸ್ಡಾ, ಬೊಲ್ಲಿ 4ಯು, ತಮಿಳ್ಬ್ಲಾಸ್ಟರ್ಸ್ ಮುಂತಾದ ಕಡೆಯೂ ಸಿನಿಮಾದ ಕಾಪಿ ಲೀಕ್ ಆಗಿದೆ ಎಂದು ʼಟೈಮ್ಸ್ ನೌʼ ವರದಿ ಮಾಡಿದೆ.
ಕೆಲ ಕಡೆ ಈ ಸೈಟ್‌ಗಳಿಂದ ಪೂರ್ಣ HD, 1080p, 720p, 360p ಮತ್ತು ಹಲವಾರು ಇತರ ಆವೃತ್ತಿಗಳಲ್ಲಿ ಚಲನಚಿತ್ರವನ್ನು ಸುಲಭವಾಗಿ ವೀಕ್ಷಿಸಬಹುದು ಮತ್ತು ಡೌನ್‌ಲೋಡ್ ಮಾಡುವ ಆಯ್ಕೆಯನ್ನು ನೀಡಲಾಗಿದೆ.
ರಿಲೀಸ್‌ಗೂ ಚಿತ್ರತಂಡ ಸಿನಿಮಾದ ಯಾವುದೇ ದೃಶ್ಯಗಳನ್ನು ಲೀಕ್ ಮಾಡಬೇಡಿ. ಹೀಗೆ ಮಾಡಿದರೆ ನಿಮ್ಮ ಖಾತೆ ಅಮಾನತು ಆಗಬಹುದು ಎಂದು ಎಚ್ಚರಿಕೆ ನೀಡುವ ಪೋಸ್ಟ್‌ವೊಂದನ್ನು ಹಂಚಿಕೊಂಡಿತ್ತು ಇದರ ಹೊರತಾಗಿಯೂ ಸಿನಿಮಾದ ಕಾಪಿ ಲೀಕ್ ಆಗಿದೆ.
ಈ ಹಿಂದೆ ಬಂದಿದ್ದ ʼಅಮರನ್ʼ ಸಿನಿಮಾ ಕೂಡ ಇದೇ ರೀತಿ ಆನ್‌ಲೈನ್‌ನಲ್ಲಿ ಲೀಕ್ ಆಗಿತ್ತು. ಸದ್ಯ ʼಕಂಗುವʼ ದ ಮೇಲೆ ಇದರ ಪರಿಣಾಮ ಹೇಗೆ ಬೀಳಲಿದೆ ಎನ್ನುವುದನ್ನು ಕಾದುನೋಡಬೇಕಿದೆ.
ಶಿವ ನಿರ್ದೇಶನದ, ಕಂಗುವದಲ್ಲಿ ದಿಶಾ ಪಟಾನಿ, ಯೋಗಿ ಬಾಬು, ರೆಡಿನ್ ಕಿಂಗ್ಸ್ಲಿ, ನಟರಾಜನ್ ಸುಬ್ರಮಣ್ಯಂ ಮತ್ತು ಹಲವಾರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. 350 ಕೋಟಿ ರೂಪಾಯಿಗಳ ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kasturi Shankar: ನಟಿ ಕಸ್ತೂರಿ ಶಂಕರ್ ಜಾಮೀನು ಅರ್ಜಿ ವಜಾ; ಶೀಘ್ರ ಬಂಧನ ಸಾಧ್ಯತೆ
Kanguva Movie: ಪ್ರೇಕ್ಷಕರ ಮನದಲ್ಲಿ ಕಂಗೊಳಿಸಿದ ʼಕಂಗುವʼ..ಸಿನಿಮಾ ನೋಡಿದವರು ಹೇಳಿದ್ದೇನು?
Tollywood: ʼಪುಷ್ಪ-2ʼ ಡಬ್ಬಿಂಗ್‌ನಲ್ಲಿ ʼಶ್ರೀವಲ್ಲಿʼ; ಮೊದಲ ರಿವ್ಯೂ ಕೊಟ್ಟ ರಶ್ಮಿಕಾ
Kanguva: ಪ್ಯಾನ್ ಇಂಡಿಯಾ ʼಕಂಗುವʼದಲ್ಲಿ ನಟಿಸಿರುವ ಕಲಾವಿದರ ಸಂಭಾವನೆ ಎಷ್ಟು?
Thalapathy69: ಕಾಲಿವುಡ್ ಸ್ಟಾರ್ ದಳಪತಿ ವಿಜಯ್ ಸಿನಿಮಾದಲ್ಲಿ ಶಿವರಾಜ್ ಕುಮಾರ್ ನಟನೆ
MUST WATCH
ಹೊಸ ಸೇರ್ಪಡೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.