NayantharaVsDhanush: ಕರ್ಮ ಬಡ್ಡಿ ಸಮೇತ ಬರುತ್ತೆ..: ಧನುಷ್ ಗೆ ಟಾಂಗ್ ಕೊಟ್ಟ ನಯನತಾರಾ
Team Udayavani, Dec 1, 2024, 11:49 AM IST
ನಟಿ ನಯನತಾರಾ ಹಾಗೂ ನಟ, ನಿರ್ಮಾಪಕ ಧನುಶ್ ಅವರ ನಡುವಿನ ಮನಸ್ತಾಪ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ದಿನೇ ಕಳೆದಂತೆ ಅದು ಹೊಸ ರೂಪ ಪಡೆಯುತ್ತಿದೆ. ನೆಟ್ ಫ್ಲಿಕ್ಸ್ ಒಟಿಟಿಯಲ್ಲಿ ನಯನತಾರಾ ಅವರ ಸಾಕ್ಷ್ಯಚಿತ್ರವೊಂದು ಮೂಡಿಬರುತ್ತಿದ್ದು, ಅದಕ್ಕಾಗಿ ಧನುಶ್ ನಿರ್ಮಾಣದ “ನಾನುಂ ರೌಡಿ ದಾನ್’ ಸಿನಿಮಾದ ಕೆಲ ದೃಶ್ಯಗಳನ್ನು ಬಳಸಲಾಗಿತ್ತು. ಇದು ಕಾಪಿರೈಟ್ ಎಂದು ಧನುಶ್, ನಯನತಾರಾ ಅವರಿಗೆ ಕಾನೂನು ನೋಟೀಸ್ ನೀಡಿ, 10 ಕೋಟಿ ರೂ. ಪರಿಹಾರ ಕೇಳಿದ್ದರು.
ಇದಕ್ಕೆ ನಯನತಾರಾ ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸಿದ್ದರು. ಸದ್ಯ ಧನುಷ್ ಅವರ ವೈಯಕ್ತಿಕ ಜೀವನ ಸರಿಯಿಲ್ಲ, ಅವರಿಗೆ ವಿಚ್ಛೇದನವಾಗಿದೆ. ಹೀಗಿರುವಾಗಲೇ “ಕರ್ಮ ಬಡ್ಡಿ ಸಮೇತ ಬರುತ್ತದೆ’ ಎಂದು ಬರೆದುಕೊಳ್ಳುವ ಮೂಲಕ ನಯನತಾರಾ, ಧನುಶ್‌ಗೆ ಟಾಂಗ್ ಕೊಟ್ಟಿದ್ದಾರೆ.
“ಕರ್ಮ ಹೇಳುತ್ತದೆ, ಸುಳ್ಳುಗಳಿಂದ ನೀವು ಯಾರದ್ದಾದರೂ ಜೀವನವನ್ನು ನಾಶ ಮಾಡಿದರೆ, ಅದನ್ನು ಸಾಲದ ರೀತಿ ಸ್ವೀಕರಿಸು. ನಂತರ, ಬಡ್ಡಿ ಸಮೇತ ಅದು ನಿನಗೆ ಬರುತ್ತದೆ’ ಎಂದು ನಯನತಾರಾ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.
ಇತ್ತೀಚೆಗೆ ಧನುಷ್ ಹಾಗೂ ಅವರ ಪತ್ನಿ ಐಶ್ವರ್ಯ ರಜನಿಕಾಂತ್ ಅವರು ವಿಚ್ಛೇದನ ಕೋರಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಕೋರ್ಟ್ ಸಹ ಅವರ ಅರ್ಜಿಗೆ ಸಮ್ಮತಿಸಿ, ವಿಚ್ಛೇದನ ನೀಡಿದೆ. ಈ ಹಿನ್ನೆಲೆಯಲ್ಲಿ ನಯನತಾರಾ ಅವರು ಈ ರೀತಿ ಪೋಸ್ಟ್ ಮಾಡಿರುವುದು ಹಲವು ಚರ್ಚೆಗೆ ಕಾರಣವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pushpa-2: 12 ಸಾವಿರ ಸ್ಕ್ರೀನ್‌ಗಳಲ್ಲಿ ಪುಷ್ಪ-2 ರಿಲೀಸ್
”Pushpa 2′′ ಭಾಷೆಯ ತಡೆಯನ್ನು ಮುರಿಯುತ್ತಿದೆ, ತೆಲುಗು ಜನರಿಗೆ ಹೆಮ್ಮೆ: ಅಲ್ಲು ಅರ್ಜುನ್
Tollywood: ಒಂದೇ ದಿನ ವಿವಾಹವಾಗಲಿದ್ದಾರಾ ಅಕ್ಕಿನೇನಿ ಸಹೋದರರು? ನಾಗಾರ್ಜುನ್ ಹೇಳಿದ್ದೇನು?
Rashmika Mandanna; ಪುಷ್ಟ-3 ಸುಳಿವು ನೀಡಿದ ನಟಿ ರಶ್ಮಿಕಾ ಮಂದಣ್ಣ
Chennai: ಐಶ್ವರ್ಯ ರಜನಿಕಾಂತ್, ಧನುಷ್‌ಗೆ ವಿಚ್ಛೇದನ ನೀಡಿದ ಕೋರ್ಟ್
MUST WATCH
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಹೊಸ ಸೇರ್ಪಡೆ
Manipal: ಉದಯವಾಣಿಯ ಸಹಾಯಕ ಸುದ್ದಿ ಸಂಪಾದಕರಾಗಿದ್ದ ದಾಮೋದರ ಕಕ್ರಣ್ಣಾಯ ನಿಧನ
Rajasthan: ಕುಸಿದು ಬಿದ್ದ ನಿರ್ಮಾಣ ಹಂತದ ಸುರಂಗದ ಭಾಗ.. ಓರ್ವ ಕಾರ್ಮಿಕ ಮೃತ್ಯು
Bangla; ಭಾರತೀಯ ಬಸ್ ಮೇಲೆ ಬಾಂಗ್ಲಾದಲ್ಲಿ ದಾಳಿ; ಭಾರತ ವಿರೋಧಿ ಘೋಷಣೆ ಕೂಗಿದ ಸ್ಥಳೀಯರು
Udupi: 125ನೇ ಮನೆ ಪ್ರವೇಶಿಸಿದ ಗ್ರಂಥಾಲಯ ಅಭಿಯಾನ
Udupi: ಎಂಜಿಎಂ ಅಮೃತ ಮಹೋತ್ಸವ ಬೃಹತ್ ಶೋಭಾಯಾತ್ರೆ; 2,000ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.