![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
Team Udayavani, Sep 17, 2024, 3:41 PM IST
ಚೆನ್ನೈ: ʼಮಹಾನಟಿʼ ಕೀರ್ತಿ ಸುರೇಶ್ (Keerthy Suresh) ಅಭಿನಯದ ʼರಘು ತಾತʼ(Raghu Thatha) ಓಟಿಟಿಯಲ್ಲಿ ರಿಲೀಸ್ ಆದ 24 ಗಂಟೆಯಲ್ಲಿ ಹೊಸ ದಾಖಲೆ ಬರೆದಿದೆ.
ಸುಮಾನ್ ಕುಮಾರ್(Suman Kumar) ನಿರ್ದೇಶನದ ಮಹಿಳಾ ಪ್ರಧಾನ ʼರಘು ತಾತʼ ಸಿನಿಮಾಕ್ಕೆ ಖ್ಯಾತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್(Hombale Films) ಬಂಡವಾಳ ಹಾಕಿದೆ.
ಆಗಸ್ಟ್ 15 ರಂದು ಸಿನಿಮಾ ಥಿಯೇಟರ್ ನಲ್ಲಿ ರಿಲೀಸ್ ಆಗಿತ್ತು. ಸಿನಿಮಾದಲ್ಲಿನ ಕೀರ್ತಿ ಸುರೇಶ್ ಅವರ ಅಭಿನಯಕ್ಕೆ ಪ್ರೇಕ್ಷಕರಿಂದ ಪಾಸಿಟಿವ್ ಮಾತು ಕೇಳಿಬಂದಿತ್ತು. ಸೆ.13ರಿಂದ ಸಿನಿಮಾ ಜೀ5 ಓಟಿಟಿಯಲ್ಲಿ ಸ್ಟ್ರೀಮ್ ಆಗುತ್ತಿದೆ.
ಓಟಿಟಿಯಲ್ಲಿ ರಿಲೀಸ್ ಆದ ಬಳಿಕ ಸಿನಿಮಾಕ್ಕೆ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ಬಿಡುಗಡೆಯಾದ 24 ಗಂಟೆಗಳಲ್ಲಿ 50 ಮಿಲಿಯನ್ ಸ್ಟ್ರೀಮ್‌ಗಳನ್ನು ಪಡೆದುಕೊಳ್ಳುವ ಸಿನಿಮಾ ದಾಖಲೆ ಬರೆದಿದೆ.
ತಮಿಳಿನ ಮತ್ತೊಂದು ದೊಡ್ಡ ಸಿನಿಮಾ ʼತಂಗಲಾನ್ʼಗೆ ʼರಘು ತಾತʼ ಪೈಪೋಟಿ ನೀಡಿತ್ತು. ಪ್ಯಾನ್ ಇಂಡಿಯಾ ಭಾಷೆಯಲ್ಲಿ ಸಿನಿಮಾ ರಿಲೀಸ್‌ಗೆ ಮೊದಲು ಹೊಂಬಾಳೆ ಪ್ಲ್ಯಾನ್ ಹಾಕಿಕೊಂಡಿತ್ತು. ಆದರೆ ಆ ಬಳಿಕ ತಮಿಳಿನಲ್ಲಿ ಮಾತ್ರ ಸಿನಿಮಾವನ್ನು ರಿಲೀಸ್ ಮಾಡಲಾಗಿತ್ತು.
50M minutes of laughter & love in just 24 hrs! 😱 #RaghuThatha soaring high becoming the #GOAT in OTT! 🎉
Watch ‘RaghuThatha’ streaming now on ZEE5!@KeerthyOfficial @ZEE5Tamil @hombalefilms @vkiragandur @sumank @vjsub @yaminiyag @RSeanRoldan @rhea_kongara @editorsuresh… pic.twitter.com/gVPMud1Rvi
— ZEE5 Tamil (@ZEE5Tamil) September 14, 2024
ಕೀರ್ತಿ ಸುರೇಶ್ ಮುಂದೆ ʼಬೇಬಿ ಜಾನ್ʼ, ʼರಿವಾಲ್ವರ್ ರೀಟಾʼ, ʼಕನ್ನಿವೇದಿʼ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಯಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
You seem to have an Ad Blocker on.
To continue reading, please turn it off or whitelist Udayavani.