ದುಬೈ ಮೂಲದ ಖ್ಯಾತ ಯೂಟ್ಯೂಬರ್‌ ಜೊತೆ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡ್ರಾ ನಟಿ ಸುನೈನಾ?

Team Udayavani, Jul 2, 2024, 4:23 PM IST

19

ಚೆನ್ನೈ: ಬಹುಭಾಷಾ ನಟಿ, ಕಾಲಿವುಡ್‌ ಬೆಡಗಿ ನಟಿ ಸುನೈನಾ (Actress Sunaina) ಅವರ ನಿಶ್ಚಿತಾರ್ಥ ವಿಚಾರ ಸೋಶಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

ದುಬೈ ಮೂಲದ ಖ್ಯಾತ ಯೂಟ್ಯೂಬರ್‌ ಒಬ್ಬರ ಜೊತೆ ನಟಿ ಸುನೈನಾ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನುವ ಸುದ್ದಿಗಳು ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡಿದೆ.

ಹೈದರಾಬಾದ್‌ ಮೂಲದ ಸುನೈನಾ ಕನ್ನಡದ ಕನ್ನಡದ ‘ಗಂಗೆ ಬಾರೆ ತುಂಗೆ ಬಾರೆʼ ಸೇರಿದಂತೆ ಕಾಲಿವುಡ್‌, ಮಾಲಿವುಡ್‌ ನ ಕೆಲ ಸಿನಿಮಾದಲ್ಲಿ ನಟಿಸಿದ್ದಾರೆ. 35ರ ಹರೆಯದೆ ಸುನೈನಾ 40 ಹರೆಯದ ದುಬೈ ಮೂಲದ‌ ಖಲೀದ್ ಅಲ್ ಅಮೇರಿ (Khalid Al Khalid) ಎನ್ನುವ ಯೂಟ್ಯೂಬರ್‌ ಜೊತೆ ಎಂಗೇಜ್‌ ಮೆಂಟ್‌ ಮಾಡಿಕೊಂಡಿದ್ದಾರೆ ಎನ್ನುವ ವಿಚಾರ ಸಿನಿವಲಯದಲ್ಲಿ ಹರಿದಾಡಿದೆ.

ಇತ್ತೀಚೆಗೆ ನಟಿ ಸುನೈನಾ ಅವರು ಇನ್ಸ್ಟಾಗ್ರಾಮ್‌ ನಲ್ಲಿ ಕೈಗೆ ರಿಂಗ್‌ ಹಾಕಿರುವ ಫೋಟೋವೊಂದನ್ನು ಹಾಕಿ ʼLocked’ ಎನ್ನುವ ಸಂದೇಶ ಸಾರುವ ಇಮೋಜಿಯನ್ನು ಹಾಕಿರುವ ಫೋಟೋವನ್ನು ಹಾಕಿದ್ದರು. ಆ ಮೂಲಕ ನಿಶ್ವಿತಾರ್ಥ ಮಾಡಿಕೊಂಡಿದ್ದಾರೆ ಎನ್ನುವುದು ಅನೌನ್ಸ್‌ ಮಾಡಿದ್ದರು.

ಸುನೈನಾ ಅವರನ್ನು ವಿವಾಹವಾಗುವ ಹುಡುಗ ಯಾರು ಎನ್ನುವ ವಿಚಾರ ಚರ್ಚೆಯಲ್ಲಿರುವಾಗಲೇ, ದುಬೈ ಮೂಲದ ಖ್ಯಾತ ಯೂಟ್ಯೂಬರ್‌, ಕಂಟೆಂಟ್ ಕ್ರಿಯೇಟರ್ ಖಲೀದ್ ಅಲ್ ಅಮೇರಿ ಅವರು ಎಂಗೇಜ್‌ ಮೆಂಟ್‌ ಆಗಿರುವ ರೀತಿಯ ಫೋಟೋವನ್ನು ಹಂಚಿಕೊಂಡಿದ್ದಾರೆ.

ಸುನೈನಾ ಹಾಕಿರುವ ಫೋಟೋಗೆ ಖಲೀದ್ ಅಲ್ ಅಮೇರಿ ಅವರು ರಿಯಾಕ್ಟ್‌ ಮಾಡಿದ್ದು, ಸುನೈನಾ ಹಾಗೂ ಖಲೀದ್ ಅಲ್ ಅಮೇರಿ ಇಬ್ಬರು ಗುಟ್ಟಾಗಿ ನಿಶ್ಚಿತಾರ್ಥ ಆಗಿದ್ದಾರೆ ಎನ್ನುವ ಮಾತುಗಳು ಹರಿದಾಡಿದೆ.

ಖಲೀದ್ ಅಲ್ ಅಮೇರಿ ಅವರ ಮೊದಲ ಪತ್ನಿ ಸಲ್ಮಾ ಅವರು ಇತ್ತೀಚೆಗೆ ಖಲೀದ್‌ ಹಾಗೂ ತಮ್ಮ ನಡುವೆ ವಿಚ್ಚೇದನವಾಗಿದೆ ಎಂದು ಯೂಟ್ಯೂಬ್‌ ಸಂದರ್ಶನವೊಂದರಲ್ಲಿ ಬಹಿರಂಗವಾಗಿ ಹೇಳಿದ್ದರು.

ಖಲೀದ್ ಅಲ್ ಅಮೇರಿ ಆಗಾಗ ಭಾರತಕ್ಕೆ ಬರುತ್ತಿರುತ್ತಾರೆ. ಇತ್ತೀಚೆಗೆ ಅವರು ನಟ ಮಮ್ಮುಟ್ಟಿ ಅವರೊಂದಿಗೆ ವಿಡಿಯೋವೊಂದರಲ್ಲಿ ಕಾಣಿಸಿಕೊಂಡಿದ್ದರು.

ಸದ್ಯ ಸುನೈನಾ – ಖಲೀದ್‌ ನಿಶ್ಚಿತಾರ್ಥದ ಬಗ್ಗೆ ಅಧಿಕೃತವಾಗಿ ಇನ್ನಷ್ಟೇ ಮಾಹಿತಿ ಹೊರಬೀಳಬೇಕಿದೆ.

2005ರಲ್ಲಿ ಟಾಲಿವುಡ್‌ನ ರೊಮ್ಯಾಂಟಿಕ್ ಕಾಮಿಡಿ ‘ಕುಮಾರ್ Vs ಕುಮಾರಿ’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಸುನೈನಾ 2008 ರಲ್ಲಿ ಬಂದ ‘ಕಾದಲಿಲ್ ವಿಝುಂತೇನ್’ ಸಿನಿಮಾದ ಮೂಲಕ ಮಿಂಚಿದರು.

‘ಮಾಸಿಲಾಮಣಿ’, ‘ಸಮರ್’, ‘ರೆಜಿನಾ’ ಮೊದಲಾದ ಸಿನಿಮಾದಲ್ಲಿ ಅವರು ನಟಿಸಿ ಗಮನ ಸೆಳೆದಿದ್ದಾರೆ.  2008ರಲ್ಲಿ ಬಂದ ಪ್ರಜ್ವಲ್‌ ದೇವರಾಜ್‌ ಅವರ ʼ ಗಂಗೆ ಬಾರೆ ತುಂಗೆ ಬಾರೆʼ ಸಿನಿಮಾದಲ್ಲಿ ನಟಿಸುವ ಮೂಲಕ ಕನ್ನಡದಲ್ಲೂ ಮಿಂಚಿದ್ದರು.

ಟಾಪ್ ನ್ಯೂಸ್

Kollur: ಸೊಸೈಟಿ ಗುಡ್ಡೆ ಬಳಿ ಧರೆ ಕುಸಿದು ಮಣ್ಣಿನಡಿ ಸಿಲುಕಿ ಮಹಿಳೆ ಸಾವು

Kollur: ಸೊಸೈಟಿ ಗುಡ್ಡೆ ಬಳಿ ಧರೆ ಕುಸಿದು ಮಣ್ಣಿನಡಿ ಸಿಲುಕಿ ಮಹಿಳೆ ಸಾವು

Dengue-nagendra

Hunasuru: ಡೆಂಗ್ಯೂಗೆ ಆರೋಗ್ಯಾಧಿಕಾರಿಯೇ ಮೃತ್ಯು!

1983ರ ಕಥೆ! ಅಂದು ಅವಮಾನದಿಂದ ಬಿಸಿಸಿಐಯನ್ನು ಕಾಪಾಡಿದ್ದು ಲತಾ ಮಂಗೇಶ್ಕರ್

1983ರ ಕಥೆ! ಅಂದು ಅವಮಾನದಿಂದ ಬಿಸಿಸಿಐಯನ್ನು ಕಾಪಾಡಿದ್ದು ಲತಾ ಮಂಗೇಶ್ಕರ್

Sagara ಹಣ ಬಿಡುಗಡೆ ಮಾಡಿಸದೆ ಅವಧಿ ಪೂರೈಸಿದ ಹಾಲಪ್ಪ; ಬೇಳೂರು ವ್ಯಂಗ್ಯ

Sagara ಹಣ ಬಿಡುಗಡೆ ಮಾಡಿಸದೆ ಅವಧಿ ಪೂರೈಸಿದ ಹಾಲಪ್ಪ; ಬೇಳೂರು ವ್ಯಂಗ್ಯ

Hosanagar; ವಿಪರೀತ ಮಳೆ: ಸಂಕ ದಾಟುವ ವೇಳೆ ಕೊಚ್ಚಿ ಹೋದ ಮಹಿಳೆ ಸಾವು

Hosanagar; ವಿಪರೀತ ಮಳೆ: ಸಂಕ ದಾಟುವ ವೇಳೆ ಕೊಚ್ಚಿ ಹೋದ ಮಹಿಳೆ ಸಾವು

1-dsdsadsa

Victory parade; ಮುಂಬೈ ನಲ್ಲಿ T20 ಚಾಂಪಿಯನ್ನರಿಗೆ ಸಂಭ್ರಮೋಲ್ಲಾಸದ ಸ್ವಾಗತ

ಶೀಘ್ರದಲ್ಲೇ ಕಿಚ್ಚ ಸುದೀಪ್‌ ʼಹುಚ್ಚʼ, ಶಿವರಾಜ್‌ ಕುಮಾರ್‌ ʼಜೋಗಿʼ ಸಿನಿಮಾ ರೀ-ರಿಲೀಸ್‌

ಶೀಘ್ರದಲ್ಲೇ ಕಿಚ್ಚ ಸುದೀಪ್‌ ʼಹುಚ್ಚʼ, ಶಿವರಾಜ್‌ ಕುಮಾರ್‌ ʼಜೋಗಿʼ ಸಿನಿಮಾ ರೀ-ರಿಲೀಸ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮುಂದಿನ ವರ್ಷವೇ ʼಕಲ್ಕಿ 2898 ಎಡಿʼ ಸೀಕ್ವೆಲ್ ರಿಲೀಸ್; ನಿರ್ಮಾಪಕರೇ ಕೊಟ್ರು ಸುಳಿವು

ಮುಂದಿನ ವರ್ಷವೇ ʼಕಲ್ಕಿ 2898 ಎಡಿʼ ಸೀಕ್ವೆಲ್ ರಿಲೀಸ್; ನಿರ್ಮಾಪಕರೇ ಕೊಟ್ರು ಸುಳಿವು

ಕಂಗನಾಗೆ ಕಪಾಳಮೋಕ್ಷ ಮಾಡಿದ್ದ CISF ಮಹಿಳಾ ಕಾನ್ಸ್‌ ಸ್ಟೇಬಲ್‌ ಬೆಂಗಳೂರಿಗೆ ವರ್ಗಾವಣೆ?

ಕಂಗನಾಗೆ ಕಪಾಳಮೋಕ್ಷ ಮಾಡಿದ್ದ CISF ಮಹಿಳಾ ಕಾನ್ಸ್‌ ಸ್ಟೇಬಲ್‌ ಬೆಂಗಳೂರಿಗೆ ವರ್ಗಾವಣೆ?

Salaar 2: ಪ್ರಶಾಂತ್‌ ನೀಲ್‌ – ಪ್ರಭಾಸ್‌ ʼಸಲಾರ್-2‌ʼ ಸೆಟ್ಟೇರಲು ಡೇಟ್‌ ಫಿಕ್ಸ್

Salaar 2: ಪ್ರಶಾಂತ್‌ ನೀಲ್‌ – ಪ್ರಭಾಸ್‌ ʼಸಲಾರ್-2‌ʼ ಸೆಟ್ಟೇರಲು ಡೇಟ್‌ ಫಿಕ್ಸ್

SSMB29:‌ ರಾಜಮೌಳಿ – ಮಹೇಶ್‌ ಬಾಬು ಚಿತ್ರದಲ್ಲಿ ವಿಲನ್ ಆಗಲಿದ್ದಾರೆ ಪೃಥ್ವಿರಾಜ್

SSMB29:‌ ರಾಜಮೌಳಿ – ಮಹೇಶ್‌ ಬಾಬು ಚಿತ್ರದಲ್ಲಿ ವಿಲನ್ ಆಗಲಿದ್ದಾರೆ ಪೃಥ್ವಿರಾಜ್

7

‘The Indian House’ Movie: ರಾಮ್‌ಚರಣ್‌ ನಿರ್ಮಾಣದಲ್ಲಿ ʼದಿ ಇಂಡಿಯನ್‌ ಹೌಸ್‌ʼ

MUST WATCH

udayavani youtube

ಹತ್ರಾಸ್‌ನಲ್ಲಿ ಸತ್ಸಂಗದ ವೇಳೆ ಕಾಲ್ತುಳಿತ ಸಾವಿನ ಸಂಖ್ಯೆ 121 ಕ್ಕೆ ಏರಿಕೆ

udayavani youtube

ಕರ್ನಾಟಕ ಪ್ರವಾಸೋದ್ಯಮದ ಕುರಿತು ರಾಜ್ಯಸಭೆಯಲ್ಲಿ ಸುಧಾಮೂರ್ತಿ ಹೇಳಿದ್ದೇನು

udayavani youtube

ಹದಗೆಟ್ಟ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುವ ವಾಹನ ಸವಾರರು!|

udayavani youtube

ಎಕ್ರೆಗಟ್ಟಲೆ ಹಡಿಲು ಭೂಮಿಗೆ ಜೀವ ತುಂಬಿದ ರೈತ

udayavani youtube

ಶ್ರೀ ಕ್ಷೇ.ಧ.ಗ್ರಾ.ಯೋಜನೆ | ಅರಣ್ಯ ಸಚಿವರಿಂದ ದಶಲಕ್ಷ ಗಿಡಗಳ ನಾಟಿಗೆ ಚಾಲನೆ

ಹೊಸ ಸೇರ್ಪಡೆ

1-sa-dsadsa

Mangaluru; ಮಣ್ಣುಕುಸಿತದಿಂದ ಸಾವನ್ನಪ್ಪಿದ ಕಾರ್ಮಿಕನ ಕುಟುಂಬಕ್ಕೆ 4 ಲಕ್ಷ ರೂ. ಪರಿಹಾರ

Kollur: ಸೊಸೈಟಿ ಗುಡ್ಡೆ ಬಳಿ ಧರೆ ಕುಸಿದು ಮಣ್ಣಿನಡಿ ಸಿಲುಕಿ ಮಹಿಳೆ ಸಾವು

Kollur: ಸೊಸೈಟಿ ಗುಡ್ಡೆ ಬಳಿ ಧರೆ ಕುಸಿದು ಮಣ್ಣಿನಡಿ ಸಿಲುಕಿ ಮಹಿಳೆ ಸಾವು

Dengue-nagendra

Hunasuru: ಡೆಂಗ್ಯೂಗೆ ಆರೋಗ್ಯಾಧಿಕಾರಿಯೇ ಮೃತ್ಯು!

1983ರ ಕಥೆ! ಅಂದು ಅವಮಾನದಿಂದ ಬಿಸಿಸಿಐಯನ್ನು ಕಾಪಾಡಿದ್ದು ಲತಾ ಮಂಗೇಶ್ಕರ್

1983ರ ಕಥೆ! ಅಂದು ಅವಮಾನದಿಂದ ಬಿಸಿಸಿಐಯನ್ನು ಕಾಪಾಡಿದ್ದು ಲತಾ ಮಂಗೇಶ್ಕರ್

1-asdsad

Police ಭ್ರಷ್ಟಾಚಾರದಿಂದ ಬೇಸತ್ತಿದ್ದೇನೆ: ಶಾಸಕ ಕಂದಕೂರ ರಾಜೀನಾಮೆ ಎಚ್ಚರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.