![Hun-PDO-GP](https://www.udayavani.com/wp-content/uploads/2025/02/Hun-PDO-GP-415x249.jpg)
![Hun-PDO-GP](https://www.udayavani.com/wp-content/uploads/2025/02/Hun-PDO-GP-415x249.jpg)
Team Udayavani, Jan 29, 2025, 7:06 PM IST
ಚೆನ್ನೈ: ಕಾಲಿವುಡ್ ನಟ ಶಿವಕಾರ್ತಿಕೇಯನ್ (Sivakarthikeyan) ʼಅಮರನ್ʼ ಬಳಿಕ ಮತ್ತೊಂದು ಬಹು ನಿರೀಕ್ಷೆಯ ಸಿನಿಮಾದೊಂದಿಗೆ ಬರಲಿದ್ದಾರೆ.
ಶಿವಕಾರ್ತಿಕೇಯನ್ ʼಸೂರರೈ ಪೊಟ್ರುʼ ಖ್ಯಾತಿಯ ಸುಧಾ ಕೊಂಗರ (Sudha Kongara) ಅವರೊಂದಿಗೆ ಸಿನಿಮಾ ಮಾಡುತ್ತಿರುವ ವಿಚಾರ ಗೊತ್ತೇ ಇದೆ. ಈ ಸಿನಿಮಾಕ್ಕೆ ತಾತ್ಕಾಲಿಕವಾಗಿ ʼSK25ʼ ಎಂದು ಟೈಟಲ್ ಇಡಲಾಗಿತ್ತು. ಇದೀಗ ಚಿತ್ರಕ್ಕೆ ಅಧಿಕೃತವಾಗಿ ಟೈಟಲ್ ಫಿಕ್ಸ್ ಆಗಿದೆ.
ಟೀಸರ್ ಜತೆ ಚಿತ್ರದ ಟೈಟಲ್ ರಿವೀಲ್ ಮಾಡಲಾಗಿದೆ. ಶಿವಕಾರ್ತಿಕೇಯನ್ ಇಲ್ಲಿ ಕಾಲೇಜಿನ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಕಾಲೇಜಿನಲ್ಲಿ ತಮ್ಮದೇ ಛಾಪನ್ನು ಮೂಡಿಸಿ ಒಂದು ದೊಡ್ಡ ಗುಂಪು ಕಟ್ಟಿಕೊಂಡು ಲೀಡರ್ ಆಗಿ ಕಾಣಿಸಿಕೊಂಡಿದ್ದಾರೆ.
ಕಾಲೇಜು ಜೀವನ ಮತ್ತು ಕಾಲೇಜಿನ ರಾಜಕೀಯದ ಸುತ್ತ ಚಿತ್ರದ ಕಥೆ ಸಾಗಲಿದೆ ಎನ್ನುವುದನ್ನು ಟೀಸರ್‌ನಲ್ಲಿ ತೋರಿಸಲಾಗಿದೆ. ಚಿತ್ರಕ್ಕೆ ʼಪರಾಶಕ್ತಿʼ ಎಂದು ಟೈಟಲ್ ಇಡಲಾಗಿದೆ.
ನಟ ರವಿ ಮೋಹನ್ ನೆಗಟಿವ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದು, ನಟ ಅಥರ್ವ ಪೋಷಕ ಪಾತ್ರವನ್ನು ನಿರ್ವಹಿಸಿದರೆ, ಶ್ರೀಲೀಲಾ ವಿದ್ಯಾರ್ಥಿನಿ ಆಗಿ ಕಾಣಿಸಿಕೊಂಡಿದ್ದಾರೆ. ಶ್ರೀಲೀಲಾ ಈ ಸಿನಿಮಾದ ಮೂಲಕ ಕಾಲಿವುಡ್‌ಗೆ ಎಂಟ್ರಿ ಕೊಡಲಿದ್ದಾರೆ.
ʼಪರಾಶಕ್ತಿʼ ಚಿತ್ರಕ್ಕೆ ಜಿವಿ ಪ್ರಕಾಶ್ ಕುಮಾರ್ ಸಂಗೀತ ಸಂಯೋಜಿಸಿದ್ದು, ರವಿ ಕೆ ಚಂದ್ರನ್ ಅವರ ಛಾಯಾಗ್ರಹಣವಿದೆ. ಚಿತ್ರದ ರಿಲೀಸ್ ಬಗ್ಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿ ಬರಲಿದೆ.
Rashmika Mandanna: ರಶ್ಮಿಕಾ ಮುಟ್ಟಿದ್ದೆಲ್ಲ ಚಿನ್ನ; ಹ್ಯಾಟ್ರಿಕ್ ಹಿಟ್ ಕಂಡ ಶ್ರೀವಲ್ಲಿ
Kollywood: ಬರ್ತ್ ಡೇಗೆ ʼಮದರಾಸಿʼಯಾಗಿ ಮಾಸ್ ಅವತಾರದಲ್ಲಿ ಮಿಂಚಿದ ಶಿವಕಾರ್ತಿಕೇಯನ್
Remark Sparks: ನಾನು ಹೈದರಾಬಾದಿನವಳು ಎಂದ ರಶ್ಮಿಕಾಗೆ ನೆಟ್ಟಿಗರ ಕ್ಲಾಸ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ
You seem to have an Ad Blocker on.
To continue reading, please turn it off or whitelist Udayavani.