ʼLeoʼ ಸೀಕ್ವೆಲ್ ಮಾಡಲು ಸಿದ್ದವಾಗಿದ್ದೇನೆ ಆದರೆ.. ಗುಟ್ಟು ರಿವೀಲ್ ಮಾಡಿದ ಕನಕರಾಜ್
Team Udayavani, Dec 28, 2023, 5:32 PM IST
ಚೆನ್ನೈ: ʼಲಿಯೋʼ ಹಿಟ್ ಬಳಿಕ ನಿರ್ದೇಶಕ ಲೋಕೇಶ್ ಕನಕರಾಜ್ ಸೂಪರ್ ಸ್ಟಾರ್ ರಜಿನಿಕಾಂತ್ ಅವರೊಂದಿಗೆ ಸಿನಿಮಾ ಮಾಡಲಿದ್ದು, ʼತಲೈವರ್171ʼ ಹೈಪ್ ಕುತೂಹಲ ಹೆಚ್ಚಿಸಿದೆ.
ಸೌತ್ ಸಿನಿರಂಗದ ಸೂಪರ್ ಹಿಟ್ ನಿರ್ದೇಶಕರಲ್ಲಿ ಒಬ್ಬರಾಗಿರುವ ಲೋಕೇಶ್ ಕನಕರಾಜ್ ʼಲಿಯೋʼ ಬಳಿಕ ಜನಪ್ರಿಯತೆ ಹಾಗೂ ಬೇಡಿಕೆಯನ್ನು ಹೆಚ್ಚಿಸಿಕೊಂಡಿದ್ದಾರೆ. ವಿಜಯ್ ಅವರೊಂದಿಗಿನ ʼಲಿಯೋʼ ಬಾಕ್ಸ್ ಆಫೀಸ್ ನಲ್ಲಿ 600 ಕೋಟಿಗೂ ಅಧಿಕ ಕಮಾಯಿ ಮಾಡುವುರ ಮೂಲಕ ಕಾಲಿವುಡ್ ನ ಹಿಟ್ ಲಿಸ್ಟ್ ಗೆ ಸೇರಿದೆ.
ʼತಲೈವರ್ 171ʼ ಸಿನಿಮಾದ ತಯಾರಿಯಲ್ಲಿ ಕನಕರಾಜ್ ಬ್ಯುಸಿಯಾಗಿದ್ದಾರೆ. ಸ್ಕ್ರಿಪ್ಟ್ ಹಾಗೂ ಇತರ ಕೆಲಸದಲ್ಲಿ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಅವರು ಸೋಶಿಯಲ್ ಮೀಡಿಯಾದಿಂದಲೂ ದೂರವಾಗಿದ್ದಾರೆ. ಆದರೆ ಇತ್ತೀಚೆಗೆ ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ಭಾಗಿಯಾದ ಅವರು ವಿಜಯ್ ಅವರ ʼಲಿಯೋʼ ಸಿನಿಮಾದ ಸೀಕ್ವೆಲ್ ಗುಟ್ಟನ್ನು ರಿವೀಲ್ ಮಾಡಿದ್ದಾರೆ.
ಕಾಲೇಜಿನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿರುವ ಅವರು, “ವಿಜಯ್ ಜೊತೆ ಕೆಲಸ ಮಾಡುವುದು ನಿರ್ದೇಶಕರಿಗೆ ಖುಷಿ ಕೊಡುತ್ತದೆ. ವಿಜಯ್ ಅವರೊಂದಿಗೆ ʼಲಿಯೋ-2ʼ ಗಾಗಿ ಕೈಜೋಡಿಸಲು ರೆಡಿಯಾಗಿದ್ದೇನೆ. ಆದರೆ ʼಲಿಯೋ-2ʼ ಸ್ಕ್ರಿಪ್ಟ್ ಇನ್ನು ಶುರು ಮಾಡಿಲ್ಲ. ʼತಲೈವರ್ 171ʼ ಹಾಗೂ ʼಖೈತಿ-2ʼ ಬಳಿಕವಷ್ಟೇ ಅದರ (ಲಿಯೋ-2) ಕೆಲಸ ಶುರು ಮಾಡಲಿದ್ದೇನೆ” ಎಂದಿದ್ದಾರೆ.
ಈ ವಿಚಾರವನ್ನು ಕೇಳಿ ದಳಪತಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಇಂಟರ್ ನೆಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Malayalam actor: ಹಾಲಿವುಡ್‌ನಲ್ಲೂ ಮಿಂಚಿದ್ದ ಮಾಲಿವುಡ್‌ನ ಹಿರಿಯ ನಟ ಥಾಮಸ್ ನಿಧನ
‘Pushpa 2: 10 ದಿನಗಳಲ್ಲಿ ಹೊಸ ದಾಖಲೆಯ ಕಲೆಕ್ಷನ್ ಕಂಡು ಮುನ್ನುಗ್ಗುತ್ತಿರುವ ಪುಷ್ಪ 2
Tulu cinema; ಕೋಸ್ಟಲ್‌ನಲ್ಲೀಗ ಸಿನೆಮಾ ಹಂಗಾಮಾ!
SSMB29: ರಾಜಮೌಳಿ – ಮಹೇಶ್ ಬಾಬು ಸಿನಿಮಾದ ಲೀಡ್ ರೋಲ್‌ನಲ್ಲಿ ಪ್ರಿಯಾಂಕಾ ಚೋಪ್ರಾ?
Video: ಜೈಲಿನಿಂದ ಅಲ್ಲು ಅರ್ಜುನ್ ಬಿಡುಗಡೆಗೆ ಆಗ್ರಹ; ಆತ್ಮಹತ್ಯೆ ಯತ್ನಿಸಿದ ಅಭಿಮಾನಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.