Pushpa 2: ಅಲ್ಲು ಅರ್ಜುನ್ ʼಪುಷ್ಪ-2ʼನಿಂದ ಖ್ಯಾತ ನಟಿ ಔಟ್
Team Udayavani, Sep 25, 2024, 4:45 PM IST
ಹೈದರಾಬಾದ್: ಈ ವರ್ಷದ ಬಹುನಿರೀಕ್ಷಿತ ಹಾಗೂ ಬಿಗ್ ಬಜೆಟ್ ಸಿನಿಮಾಗಳಲ್ಲಿ ಒಂದಾಗಿರುವ ʼಪುಷ್ಪ-2ʼ(Pushpa 2) ಬಗ್ಗೆ ದಿನ ಕಳೆದಂತೆ ಒಂದೊಂದೇ ಸುದ್ದಿ ಹರಿದಾಡುತ್ತಿದೆ.
ಆಡಿಯೋ ರೈಟ್ಸ್, ಓಟಿಟಿ ರೈಟ್ಸ್ ಹೀಗೆ ರಿಲೀಸ್ ಮುನ್ನವೇ ಸಿನಿಮಾ ಭರ್ಜರಿ ಗಳಿಕೆಯತ್ತ ಸಾಗುತ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಎರಡು ಹಾಡುಗಳನ್ನು ರಿಲೀಸ್ ಮಾಡಿ ಈಗಾಗಲೇ ಸಖತ್ ಕ್ರೇಜ್ ಹುಟ್ಟಿಸಿರುವ ʼಪುಷ್ಪ-2ʼ ಬಿಡುಗಡೆಗೆ ಮುಂದೆ ನೋಡುತ್ತಿದೆ. ರಿಲೀಸ್ ಡೇಟ್ ಪೋಸ್ಟರ್ ಗಳನ್ನು ಒಂದೊಂದೇ ಆಗಿ ಚಿತ್ರತಂಡ ರಿವೀಲ್ ಮಾಡುತ್ತಿದೆ.
ಇತ್ತೀಚೆಗೆ ʼಪುಷ್ಪ-2ʼ ಓಟಿಟಿ ರೈಟ್ಸ್ (OTT Rights) 270 ಕೋಟಿ ರೂಪಾಯಿಗಳಿಗೆ ನೆಟ್ ಫ್ಲಿಕ್ಸ್ ಖರೀದಿಸಿದೆ ಎಂದು ವರದಿ ಆಗಿತ್ತು.
ʼಪುಷ್ಪ-1ʼನಲ್ಲಿ ಸೌತ್ ಬೆಡಗಿ ಸಮಂತಾ ʼಊ ಅಂಟವಾʼ ಎನ್ನುವ ಹಾಡಿಗೆ ಹಾಟ್ ಆಗಿ ಹೆಜ್ಜೆ ಹಾಕಿದ್ದರು. ಈ ಹಾಡು ಸಿನಿಮಾದಷ್ಟೇ ದೊಡ್ಡ ಹಿಟ್ ಆಗಿತ್ತು. ʼಪುಷ್ಪ-2ʼ ಸಿನಿಮಾದಲ್ಲೂ ಇಂಥದ್ದೇ ಒಂದು ಐಟಂ ಸಾಂಗ್ ಇರಲಿದೆ ಎನ್ನಲಾಗಿದೆ. ಇದಕ್ಕಾಗಿ ʼಅನಿಮಲ್ʼ ಬೆಡಗಿ ತೃಪ್ತಿ ದಿಮ್ರಿ (Triptii Dimri) ಅವರು ಹೆಜ್ಜೆ ಹಾಕಲಿದ್ದಾರೆ ಎಂದು ವರದಿಯಾಗಿತ್ತು.
ʼಪುಷ್ಪ-2ʼ ನಲ್ಲಿ ತೃಪ್ತಿ ಇರುವುದು ಬಹುತೇಕ ಖಚಿತವಾಗಿತ್ತು. ಐಟಂ ಹಾಡಿಗಾಗಿ ಅಡಿಷನ್ ಕೂಡ ನೀಡಿದ್ದರು. ಆದರೆ ಇದೀಗ ತೃಪ್ತಿ ಅವರನ್ನು ಕೈಬಿಡಲಾಗಿದೆ ಎಂದು ವರದಿಯಾಗಿದೆ. ಆದರೆ ಯಾವ ಕಾರಣಕ್ಕಾಗಿ ಚಿತ್ರತಂಡ ಈ ನಿರ್ಧಾರ ಕೈಗೊಂಡಿದೆ ಎನ್ನುವುದರ ಬಗ್ಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ.
ʼಅನಿಮಲ್ʼ ನಿಂದ ಸುದ್ದಿಯಾದ ತೃಪ್ತಿ ʼವಿಕ್ಕಿ ವಿದ್ಯಾ ಕಾ ವೋ ವಾಲಾ ವಿಡಿಯೋʼ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಕ್ಟೋಬರ್ 11 ರಂದು ಈ ಸಿನಿಮಾ ರಿಲೀಸ್ ಆಗಲಿದೆ. ವಿಕ್ಕಿ ಕೌಶಲ್ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ.
ʼಪುಷ್ಪ-2ʼ ಸಿನಿಮಾದಲ್ಲಿ ಅಲ್ಲು ಅರ್ಜುನ್ (Allu Arjun) ಮುಂದೆ ಫಾಹದ್ ಫಾಸಿಲ್ (Fahadh Faasil) ಅಬ್ಬರಿಸಲಿದ್ದಾರೆ. ಇನ್ನುಳಿದಂತೆ ರಶ್ಮಿಕಾ ಮಂದಣ್ಣ, ಧನಂಜಯ, ಜಗದೀಶ್ ಪ್ರತಾಪ್ ಬಂಡಾರಿ, ರಾವ್ ರಮೇಶ್, ಅಜಯ್, ಸುನಿಲ್, ಅನಸೂಯಾ ಭಾರದ್ವಾಜ್ ಮುಂತಾದವರು ಕಾಣಿಸಿಕೊಳ್ಳಲಿದ್ದಾರೆ.
ʼಪುಷ್ಪ-2ʼ ಈ ಆಗಸ್ಟ್ 15ರಂದು ರಿಲೀಸ್ ಆಗಬೇಕಿತ್ತು. ಆದರೆ ರಿಲೀಸ್ ಡೇಟ್ ಮುಂದೂಡಿಕೆ ಆಗಿ ಈಗ ಡಿಸೆಂಬರ್ 6 ರಂದು ಸಿನಿಮಾ ರಿಲೀಸ್ ಆಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tollywood: ‘ಪುಷ್ಪ-3ʼ ಟೈಟಲ್ ರಿವೀಲ್.. ವಿಲನ್ ಆಗಿ ಅಬ್ಬರಿಸಲಿದ್ದಾರೆ ಈ ಖ್ಯಾತ ನಟ
Silk Smitha – Queen of the South; ಬರುತ್ತಿದೆ ಸಿಲ್ಕ್ ಸ್ಮಿತಾ ಬಯೋಪಿಕ್
Suriya 45: ಮುಹೂರ್ತದಲ್ಲಿ ಸೂರ್ಯ 45
Producer: ಬಸ್ಸಿನಲ್ಲಿ ಪ್ರಯಾಣಿಸುತ್ತಿರುವಾಗಲೇ ಕುಸಿದು ಬಿದ್ದು ಖ್ಯಾತ ನಿರ್ಮಾಪಕ ಮೃ*ತ್ಯು
Tollywood: ಓಯೋ ರೂಮಲ್ಲಿ ಡ್ರಗ್ಸ್ ಪಾರ್ಟಿ; ಖ್ಯಾತ ನೃತ್ಯ ಸಂಯೋಜಕ ಸೇರಿ ನಾಲ್ವರ ಬಂಧನ
MUST WATCH
ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ
60 ಅಡಿ ಆಳದ ಬಾವಿಗೆ ಬಿದ್ದ 94 ವರ್ಷದ ಅಜ್ಜಿಯ ರಕ್ಷಣೆ
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಹೊಸ ಸೇರ್ಪಡೆ
Kaup: ಜೀರ್ಣೋದ್ಧಾರ ಅತ್ಯದ್ಭುತವಾಗಿ ಕಾಣುತ್ತಿವೆ: ಕಾಳಹಸ್ತೇಂದ್ರ ಶ್ರೀ
Udupi: ನ್ಯಾಯವಾದಿಗಳು ನ್ಯಾಯಾಂಗ ಸೈನಿಕರಂತೆ ಕಾರ್ಯನಿರ್ವಹಿಸಲಿ: ನ್ಯಾ| ಬಿ. ವೀರಪ್ಪ
Kadaba: ಬಿಳಿನೆಲೆ ಸಂದೀಪ್ ಕೊ*ಲೆ ಪ್ರಕರಣ; ಗ್ರಾ.ಪಂ. ಎದುರು ಶವವಿಟ್ಟು ಪ್ರತಿಭಟನೆ
Mangaluru: ಎ.ಬಿ.ಶೆಟ್ಟಿ ದಂತ ವೈದ್ಯಕೀಯ ಕಾಲೇಜು ಡೀನ್ ಡಾ.ಯು.ಎಸ್.ಕೃಷ್ಣ ನಾಯಕ್ ನಿಧನ
Padubidri: ನಾಪತ್ತೆಯಾಗಿದ್ದ ವ್ಯಕ್ತಿ ಹೊಸನಗರದಲ್ಲಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.