Mollywood: ನಟ ರಿಯಾಜ್ ಫೋನ್ ಮಾಡಿ ಲೈಂಗಿಕ ಆಸಕ್ತಿ ಬಗ್ಗೆ ಮಾತನಾಡಿದ್ದರು.. ನಟಿಯ ಆರೋಪ
"ನನ್ನ ಜತೆ ಮಲಗು ಎಂದ.." ಖ್ಯಾತ ನಟನ ವಿರುದ್ಧ ನಟಿ ಆರೋಪ
Team Udayavani, Aug 26, 2024, 10:49 AM IST
ಕೊಚ್ಚಿ: ಮಾಲಿವುಡ್(Mollywood) ಸಿನಿಮಾರಂಗದದಲ್ಲಿ ಕಳೆದ ಕೆಲ ದಿನಗಳಿಂದ ಲೈಂಗಿಕ ಕಿರುಕುಳದ ಆರೋಪಗಳು ಕೇಳಿಬರುತ್ತಿದೆ. ಇದೀಗ ಮತ್ತೊಬ್ಬ ನಟನ ವಿರುದ್ಧವೂ ಅಸಭ್ಯವಾಗಿ ವರ್ತಿಸಿದ ಆರೋಪ ಕೇಳಿ ಬಂದಿದೆ.
ಮಾಲಿವುಡ್ ನಿರ್ದೇಶಕ ರಂಜಿತ್ ಹಾಗೂ ನಟ ಸಿದ್ದೀಕ್ ವಿರುದ್ಧ ನಟಿಯರು ಅಸಭ್ಯ ವರ್ತನೆ ಹಾಗೂ ಲೈಂಗಿಕ ಕಿರುಕುಳದ ಆರೋಪವನ್ನು ಮಾಡಿರುವ ಸುದ್ದಿ ಚರ್ಚೆಯಲ್ಲಿರುವಾಗಲೇ ಇದೀಗ ಕಾಲಿವುಡ್ – ಮಾಲಿವುಡ್ ನಟ ರಿಯಾಜ್ ಖಾನ್ (Actor Riyaz Khan) ವಿರುದ್ಧ ಇದೇ ರೀತಿಯ ಆರೋಪ ಕೇಳಿಬಂದಿದೆ.
ಮಲಯಾಳಂ ನಟಿಯೊಬ್ಬರು ಪ್ರಾದೇಶಿಕ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ನಟ ರಿಯಾಜ್ ಫೋನ್ ಸಂಭಾಷಣೆಯಲ್ಲಿ ಅಸಭ್ಯವಾಗಿ ಮಾತನಾಡಿದ ಬಗ್ಗೆ ಹೇಳಿದ್ದಾರೆ.
“ಮಧ್ಯರಾತ್ರಿ ನಟನಿಂದ (ರಿಯಾಜ್ ಖಾನ್) ಫೋನ್ ಕರೆ ಬಂದಿತ್ತು. ಛಾಯಾಗ್ರಾಹಕರೊಬ್ಬರು ನನ್ನ ಒಪ್ಪಿಗೆಯಿಲ್ಲದೆ ನನ್ನ ಫೋನ್ ಸಂಖ್ಯೆಯನ್ನು ಅವರೊಂದಿಗೆ ಹಂಚಿಕೊಂಡಿದ್ದರು. ಅವರು ನನ್ನ ಸ್ಟಿಲ್ಸ್ ನೋಡಿ, ನನ್ನ ನಂಬರ್ ತೆಗೆದುಕೊಂಡು ನನಗೆ ಕರೆ ಮಾಡಿದರು. ಆ ವ್ಯಕ್ತಿ ಲೈಂಗಿಕತೆ ಮತ್ತು ಅವರ ಲೈಂಗಿಕ ಆಸಕ್ತಿಗಳ ಬಗ್ಗೆ ಮಾತನಾಡಲು ಪ್ರಾರಂಭಿಸಿದರು. ನನಗೆ ಅವನೊಂದಿಗೆ ಮಲಗಲು ಆಸಕ್ತಿ ಇದೆಯೇ ಎಂದು ಕೇಳಿದರು. ನನಗೆ ಯಾವ ಭಂಗಿಯಲ್ಲಿ ಲೈಂಗಿಕ ಕ್ರಿಯೆ ನಡೆಸುವುದು ಇಷ್ಟವೆಂದು ಕೇಳಿದರು. ಆಗ ನನಗೆ 20 ವರ್ಷ. ಫೋನ್ ಮಾಡಿದ ನಂತರ ನಾನು ತುಂಬಾ ಆಘಾತಕ್ಕೊಳಗಾಗಿದ್ದೆ. ಕರೆಯ ಸಮಯದಲ್ಲಿ ನನಗೆ ಒಂದು ಮಾತನ್ನೂ ಮಾತನಾಡಲು ಸಾಧ್ಯವಾಗಲಿಲ್ಲ” ಎಂದು ಘಟನೆ ಬಗ್ಗೆ ಹೇಳಿದರು.
“ನನಗೆ ಯಾವುದೇ ಆಸಕ್ತಿಯಿಲ್ಲ ಎಂದು ಅರ್ಥಮಾಡಿಕೊಂಡ ನಂತರ, ಆ ವ್ಯಕ್ತಿ ಮುಂದಿನ ಒಂಬತ್ತು ದಿನಗಳವರೆಗೆ ಕೊಚ್ಚಿಯಲ್ಲಿ ಇರುವುದಾಗಿ ಹೇಳಿ, ನಾನು ಅವರಿಗೆ ಕೆಲವು ಹುಡುಗಿಯರನ್ನು ವ್ಯವಸ್ಥೆ ಮಾಡಬಹುದೇ ಎಂದು ಕೇಳಿದರು. ಇದನ್ನು ಕೇಳಿ ನನಗೆ ಆಘಾತಕ್ಕೆ ಒಳಗಾಗಿದ್ದೆ” ಎಂದು ನಟಿ ಹೇಳಿದ್ದಾರೆ.
ನಟಿಯ ಜೊತೆ ಅಸಭ್ಯವಾಗಿ ವರ್ತಿಸಿದ ಆರೋಪ ಕೇಳಿಬಂದ ಹಿನ್ನೆಲೆ ಮಲಯಾಳಂ ನಿರ್ದೇಶಕ ರಂಜಿತ್ (Malayalam director Ranjith) ರಾಜ್ಯ ಸರ್ಕಾರ ನಡೆಸುವ ಕೇರಳ ಚಲಚಿತ್ರ (Kerala Chalachitra Academy) ಅಕಾಡೆಮಿಯ ಅಧ್ಯಕ್ಷ ಸ್ಥಾನಕ್ಕೆ ಭಾನುವಾರ (ಆ.25ರಂದು) ರಾಜೀನಾಮೆ ಸಲ್ಲಿಸಿದ್ದಾರೆ.
ಇತ್ತ ಮತ್ತೊಂದು ಲೈಂಗಿಕ ಕಿರುಕುಳ ಆರೋಪವನ್ನು ಎದುರಿಸುತ್ತಿರುವ ಹಿರಿಯ ನಟ ಸಿದ್ದೀಕ್ (Actor Siddique) ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ (Malayalam Movie Artistes) ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ತನಿಖೆಗೆ ಎಸ್‌ಐಟಿ ರಚನೆ: ಸಿಎಂ ಪಿಣರಾಯಿ ಚಿತ್ರ ನಟಿಯರು ತಮ್ಮ ವಿರುದ್ಧ ನಡೆದಿದ್ದ ಲೈಂಗಿಕ ದೌರ್ಜನ್ಯದ ವಿವರಗಳನ್ನು ಬಹಿರಂಗಪಡಿಸುತ್ತಲೇ ಅದರ ಬಗ್ಗೆ ತನಿಖೆ ನಡೆಸಲು ಕೇರಳ ಸರಕಾರ ಎಸ್‌ಐಟಿ ರಚಿಸಿದೆ.
ಸಿಎಂ ಪಿಣರಾಯಿ ವಿಜಯನ್ ನೇತೃತ್ವದಲ್ಲಿ ರವಿವಾರ ನಡೆದ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಹಿರಿಯ ಐಪಿಎಸ್ ಅಧಿಕಾರಿ ಸ್ಪರ್ಜನ್ ಕುಮಾರ್ ಅವರು ಸಮಿತಿಯ ನೇತೃತ್ವ ವಹಿಸಲಿದ್ದಾರೆ. ಒಟ್ಟು 7 ಮಂದಿಯ ಈ ಸಮಿತಿಯಲ್ಲಿ ಮಹಿಳಾ ಪೊಲೀಸ್ ಅಧಿಕಾರಿಗಳೂ ಇರಲಿದ್ದಾರೆ ಎಂದು ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
ಮಲಯಾಳಂ ಸಿನಿಮಾ ಉದ್ಯಮದಲ್ಲಿ ಮಹಿಳೆಯರ ವಿರುದ್ಧ ಅಪರಾಧಗಳನ್ನು ತಡೆಯುವ ಹೇಮಾ ಸಮಿತಿ ವರದಿ ಬಿಡುಗಡೆ ಬೆನ್ನಲ್ಲೇ ಈ ಆರೋಪ ಕೇಳಿಬಂದಿದ್ದು, ರಾಜ್ಯ ಸರ್ಕಾರವನ್ನು ಮುಜಗರಕ್ಕೀಡು ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ
Mollywood: ಸೂಪರ್ ಸ್ಟಾರ್ ಮೋಹನ್ ಲಾಲ್‌ಗೆ ‘ಆವೇಶಮ್ʼ ನಿರ್ದೇಶಕ ಆ್ಯಕ್ಷನ್ ಕಟ್
Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ
Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.