Actor: ಮಾಜಿ ಪತ್ನಿ ದೂರಿನಿಂದ ಅರೆಸ್ಟ್‌ ಆದ ಕೆಲ ದಿನಗಳಲ್ಲೇ 3ನೇ ಮದುವೆಯಾದ ಖ್ಯಾತ ನಟ


Team Udayavani, Oct 23, 2024, 5:36 PM IST

Actor: ಮಾಜಿ ಪತ್ನಿ ದೂರಿನಿಂದ ಅರೆಸ್ಟ್‌ ಆದ ಕೆಲ ದಿನಗಳಲ್ಲೇ 3ನೇ ಮದುವೆಯಾದ ಖ್ಯಾತ ನಟ

ತಿರುವನಂತಪುರಂ: ಮಾಜಿ ಪತ್ನಿ ನೀಡಿದ ದೂರಿನ ಮೇರೆಗೆ ಇತ್ತೀಚೆಗೆ ಬಂಧನವಾಗಿದ್ದ ಬಹುಭಾಷಾ ನಟ ಬಾಲ (Film actor Bala) ಮೂರನೇ ಮದುವೆ ಆಗಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ತಮಿಳು, ಮಲಯಾಳಂ ಮತ್ತು ತೆಲುಗು ಭಾಷೆಯ ಸಿನಿಮಾದಲ್ಲಿ ನಟಿಸಿರುವ ಬಾಲ ಬುಧವಾರ ಬೆಳಗ್ಗೆ(ಅ.23ರಂದು) ಎರ್ನಾಕುಲಂನ ಕಾಲೂರ್ ಪಾವಕುಲಂ ದೇವಸ್ಥಾನದಲ್ಲಿ ಆತ್ಮೀಯರ ಸಮ್ಮುಖದಲ್ಲಿ ಕೋಕಿಲ ಎನ್ನುವವರ ಜತೆ ಹಸೆಮಣೆ ಏರಿದ್ದಾರೆ.

2010ರಲ್ಲಿ ಬಾಲ ಗಾಯಕಿ ಅಮೃತ ಸುರೇಶ್‌ ಅವರನ್ನು ಪ್ರೀತಿಸಿ ಮದುವೆ ಆಗಿದ್ದರು. ಮನಸ್ತಾಪದಿಂದಾಗಿ 2019ರಲ್ಲಿ ಬಾಲ – ಅಮೃತಾ ವಿಚ್ಚೇದನ ಪಡೆದಿದ್ದರು. ಈ ದಂಪತಿಗೆ ಒಂದು ಹೆಣ್ಣು ಮಗುವಿದೆ. ಇದಾದ ಬಳಿಕ 2021ರಲ್ಲಿ ಬಾಲ ಎಲಿಜಬೆತ್ ಉದಯನ್ ಎಂಬಾಕೆಯೊಂದಿಗೆ ಎರಡನೇ ಮದುವೆ ಆಗಿದ್ದರು. ಆದರೆ ಬಾಲ ಅವರು ಪತ್ನಿ ಮೇಲೆ ದೈಹಿಕ ಹಲ್ಲೆ ನಡೆಸುತ್ತಿದ್ದರು ಎನ್ನುವ ಆರೋಪ ಕೇಳಿಬಂದಿತ್ತು. ಈ ಕಾರಣದಿಂದ ಇಬ್ಬರು ಪ್ರತ್ಯೇಕವಾಗಿ ವಾಸಿಸುತ್ತಿದ್ದರು ಎನ್ನಲಾಗಿದೆ. ಇದಲ್ಲದೆ ಅವರ ಮದುವೆ ನೋಂದಣಿ ಆಗಿರಲಿಲ್ಲ ಎಂದು ವರದಿಯಾಗಿದೆ.

“ನನ್ನ ಈ ದಾಂಪತ್ಯ ಜೀವನ ಚೆನ್ನಾಗಿ ಹೋಗುತ್ತದೆ ಎಂದು ನಾನು ನಂಬುತ್ತೇನೆ. ಅವಳು ನನ್ನ ಸಂಬಂಧಿಯಾಗಿರುವುದರಿಂದ ಈ ಬಗ್ಗೆ ನನಗೆ ವಿಶ್ವಾಸವಿದೆ” ಎಂದು ಬಾಲ ಹೇಳಿದ್ದಾರೆ.

ಇತ್ತೀಚೆಗಷ್ಟೇ ಲಿವರ್‌ ಕಸಿ ಚಿಕಿತ್ಸೆಗೆ ಒಳಗಾಗಿದ್ದ ಬಾಲ ತನ್ನ ಜತೆಯಾಗಿರಲು ಸಂಗಾತಿಯೊಬ್ಬಳ ಅಗತ್ಯವಿದೆ ಹೇಳಿದ್ದರು.

ಮಾಜಿ ಪತ್ನಿಯಿಂದ ದೂರು ಬಂಧನವಾಗಿದ್ದ ಬಾಲ:  ಇತ್ತೀಚೆಗಷ್ಟೇ ಬಾಲ ವಿರುದ್ಧ ಮಾಜಿ ಪತ್ನಿ ಅಮೃತಾ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಬಾಲ ಅವರು ಸಾಮಾಜಿಕ ಜಾಲತಾಣದ ಮೂಲಕ ತನ್ನನ್ನು ಹಾಗೂ ತನ್ನ ಮಗಳನ್ನು ನಿಂದಿಸಿ ಪೋಸ್ಟ್‌ ಮಾಡಿದ್ದಾರೆ. ಇದಲ್ಲದೆ ಬಾಲ ವಿಚ್ಛೇದನದ ಒಪ್ಪಂದವನ್ನು ಉಲ್ಲಂಘಿಸಿದ್ದಾರೆ. ನನ್ನನ್ನು ಹಾಗೂ ನನ್ನ 12 ವರ್ಷದ ಮಗಳನ್ನು ಕೆಲ ಸಂದರ್ಶನದಲ್ಲಿ ಬೇಕಂತಲೇ ನಿಂದಿಸಿ ಮಾತನಾಡಿದ್ದಾರೆ. ಇದರಿಂದ ತಾವು ಮಾನಸಿಕವಾಗಿ ನೊಂದಿದ್ದೇವೆ ಎಂದು ಅವರ ಮಾಜಿ ಪತ್ನಿ ಅಮೃತಾ ಸುರೇಶ್ (Amrutha Suresh) ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದರು.

ಈ ಸಂಬಂಧ ಎರ್ನಾಕುಲಂನಲ್ಲಿ ಕಡವಂತರಾ ಪೊಲೀಸರು ಬಾಲ ಅವರನ್ನು ಬಂಧಿಸಿದ್ದರು.  ಆ ಬಳಿಕ ಎರ್ನಾಕುಲಂ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಕಟ್ಟುನಿಟ್ಟಿನ ಷರತ್ತುಗಳೊಂದಿಗೆ ಅವರಿಗೆ ಜಾಮೀನು ಮಂಜೂರು ಮಾಡಿತ್ತು.

ಟಾಪ್ ನ್ಯೂಸ್

Girish-Dhw

Dharawada: ಮನೆ ಎದುರೇ ವ್ಯಕ್ತಿಗೆ ಚಾಕುವಿನಿಂದ ಇರಿದು ಕೊಲೆಗೈದ ದುಷ್ಕರ್ಮಿಗಳು!

Thiruvannamali

Cyclone Fengal: ತಿರುವಣ್ಣಾಮಲೈಯಲ್ಲಿ ಭೂ ಕುಸಿತ: 7 ಮಂದಿ ಪೈಕಿ ನಾಲ್ವರ ಮೃತದೇಹ ಪತ್ತೆ

Ullal: ಕೊರಗಜ್ಜ ಆದಿ ಕ್ಷೇತ್ರಕ್ಕೆ ಭೇಟಿ ನೀಡಿದ ರಿಯಲ್ ಸ್ಟಾರ್ ಉಪೇಂದ್ರ

Ullal: ಕೊರಗಜ್ಜ ಆದಿ ಕ್ಷೇತ್ರಕ್ಕೆ ಭೇಟಿ ನೀಡಿದ ರಿಯಲ್ ಸ್ಟಾರ್ ಉಪೇಂದ್ರ

Mangaluru: ಅಡಿಕೆ ಬೆಳೆಗಾರರ ರಕ್ಷಣೆಗೆ ಮುಂದಾದ ಕೇಂದ್ರ ಸರಕಾರ

Mangaluru: ಅಡಿಕೆ ಬೆಳೆಗಾರರ ರಕ್ಷಣೆಗೆ ಮುಂದಾದ ಕೇಂದ್ರ ಸರಕಾರ

Nithin-gadkari

Nagpura: ರಾಜಕೀಯ ಎಂದರೆ ಅತೃಪ್ತ ಆತ್ಮಗಳ ಸಮುದ್ರ: ಕೇಂದ್ರ ಸಚಿವ ನಿತಿನ್‌ ಗಡ್ಕರಿ

Bandipur-Wayanad ರಸ್ತೆಯಲ್ಲಿ ವಾಹನ ಸವಾರರಿಂದ ಆನೆ ಮರಿಗೆ ಕೀಟಲೆ- ವಿಡಿಯೋ ವೈರಲ್ 

Bandipur-Wayanad ರಸ್ತೆಯಲ್ಲಿ ವಾಹನ ಸವಾರರಿಂದ ಆನೆ ಮರಿಗೆ ಕೀಟಲೆ- ವಿಡಿಯೋ ವೈರಲ್ 

Karkala: ನಂದಿಕೂರು-ಕೇರಳ ಹೈಟೆನ್ಷನ್ ವಿದ್ಯುತ್ ತಂತಿ ಯೋಜನೆ ಕಾಮಗಾರಿಗೆ ತಡೆ

Karkala: ನಂದಿಕೂರು-ಕೇರಳ ಹೈಟೆನ್ಷನ್ ವಿದ್ಯುತ್ ತಂತಿ ಯೋಜನೆ ಕಾಮಗಾರಿಗೆ ತಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tollywood: ‘ಪುಷ್ಪ-3ʼ ಟೈಟಲ್‌ ರಿವೀಲ್..‌ ವಿಲನ್‌ ಆಗಿ ಅಬ್ಬರಿಸಲಿದ್ದಾರೆ ಈ ಖ್ಯಾತ ನಟ

Tollywood: ‘ಪುಷ್ಪ-3ʼ ಟೈಟಲ್‌ ರಿವೀಲ್..‌ ವಿಲನ್‌ ಆಗಿ ಅಬ್ಬರಿಸಲಿದ್ದಾರೆ ಈ ಖ್ಯಾತ ನಟ

Silk Smitha – Queen of the South; ಬರುತ್ತಿದೆ ಸಿಲ್ಕ್‌ ಸ್ಮಿತಾ ಬಯೋಪಿಕ್

Silk Smitha – Queen of the South; ಬರುತ್ತಿದೆ ಸಿಲ್ಕ್‌ ಸ್ಮಿತಾ ಬಯೋಪಿಕ್

Auto Draft

Suriya 45: ಮುಹೂರ್ತದಲ್ಲಿ ಸೂರ್ಯ 45

suhan-news

Producer: ಬಸ್ಸಿನಲ್ಲಿ ಪ್ರಯಾಣಿಸುತ್ತಿರುವಾಗಲೇ ಕುಸಿದು ಬಿದ್ದು ಖ್ಯಾತ ನಿರ್ಮಾಪಕ ಮೃ*ತ್ಯು

Tollywood: ಓಯೋ ರೂಮಲ್ಲಿ ಡ್ರಗ್ಸ್‌ ಪಾರ್ಟಿ; ಖ್ಯಾತ ನೃತ್ಯ ಸಂಯೋಜಕ ಸೇರಿ ನಾಲ್ವರ ಬಂಧನ

Tollywood: ಓಯೋ ರೂಮಲ್ಲಿ ಡ್ರಗ್ಸ್‌ ಪಾರ್ಟಿ; ಖ್ಯಾತ ನೃತ್ಯ ಸಂಯೋಜಕ ಸೇರಿ ನಾಲ್ವರ ಬಂಧನ

MUST WATCH

udayavani youtube

ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ

udayavani youtube

60 ಅಡಿ ಆಳದ ಬಾವಿಗೆ ಬಿದ್ದ 94 ವರ್ಷದ ಅಜ್ಜಿಯ ರಕ್ಷಣೆ

udayavani youtube

ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

ಹೊಸ ಸೇರ್ಪಡೆ

14

Punjalkatte: ಮಳೆಗೆ ಮನೆಯ ಗೋಡೆ ಕುಸಿತ

Girish-Dhw

Dharawada: ಮನೆ ಎದುರೇ ವ್ಯಕ್ತಿಗೆ ಚಾಕುವಿನಿಂದ ಇರಿದು ಕೊಲೆಗೈದ ದುಷ್ಕರ್ಮಿಗಳು!

courts

Puttur: ರಸ್ತೆ ಬದಿಯಲ್ಲಿ ಶವ ಇರಿಸಿದ ಪ್ರಕರಣ; ಮೂವರಿಗೆ ಜಾಮೀನು

de

Karkala: ಕೌಟುಂಬಿಕ ಹಿಂಸೆ ಆರೋಪ; ವಿಷ ಸೇವಿಸಿದ್ದ ವಿವಾಹಿತ ಮಹಿಳೆ ಸಾವು

5

Karkala: ಅಪರಿಚಿತ ಬೈಕ್‌ ಸವಾರನಿಂದ ಚಿನ್ನದ ಸರ ಸುಲಿಗೆ; ಪ್ರಕರಣ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.