Mollywood: ಕಿರುಕುಳ ಆರೋಪ; ತಮ್ಮ ಸ್ಥಾನಕ್ಕೆ ನಿರ್ದೇಶಕ ರಂಜಿತ್, ನಟ ಸಿದ್ದೀಕ್ ರಾಜೀನಾಮೆ
Team Udayavani, Aug 25, 2024, 2:55 PM IST
ತಿರುವನಂತಪುರಂ: ನಟಿಯ ಜೊತೆ ಅಸಭ್ಯವಾಗಿ ವರ್ತಿಸಿದ ಆರೋಪ ಕೇಳಿಬಂದ ಹಿನ್ನೆಲೆ ಮಲಯಾಳಂ ನಿರ್ದೇಶಕ ರಂಜಿತ್ (Malayalam director Ranjith) ರಾಜ್ಯ ಸರ್ಕಾರ ನಡೆಸುವ ಕೇರಳ ಚಲಚಿತ್ರ (Kerala Chalachitra Academy) ಅಕಾಡೆಮಿಯ ಅಧ್ಯಕ್ಷ ಸ್ಥಾನಕ್ಕೆ ಭಾನುವಾರ (ಆ.25ರಂದು) ರಾಜೀನಾಮೆ ಸಲ್ಲಿಸಿದ್ದಾರೆ.
ಏನಿದು ಘಟನೆ ಆರೋಪ?: ಬಂಗಾಳಿ ನಟಿ ಶ್ರೀಲೇಖಾ (Bengali actor Sreelekha Mitra) “2009ರಲ್ಲಿ ‘ಪಾಲೇರಿ ಮಾಣಿಕ್ಯಂ: ಒರು ಪತಿರ್ಕೋಲಪತ್ಕತಿಂತೆ ಕಥಾ” ಸಿನಿಮಾದ ಆಡಿಷನ್‌ಗೆ ಹೋದ ಸಮಯದಲ್ಲಿ ರಂಜಿತ್ ಅನುಚಿತವಾಗಿ ವರ್ತಿಸಿದ್ದಾರೆ. ನನ್ನನ್ನು ಕತ್ತಲಿನ ಕೋಣೆಯೊಳಗೆ ಕರೆದುಕೊಂಡು ಹೋಗಿದ್ದರು. ನಾನು ಫೋನ್ನಲ್ಲಿ ಮಾತನಾಡುತ್ತಿದ್ದೆ. ಆ ವೇಳೆ ಮೊದಲಿಗೆ ಅವರು ನನ್ನ ಬಳೆಗಳನ್ನು ಮುಟ್ಟಲು ಆರಂಭಿಸಿದರು. ನನಗೆ ಆಗ ಏನು ಎಂದು ಗೊತ್ತಾಗಲಿಲ್ಲ. ನಂತರ ರಂಜಿತ್ ನನ್ನ ಕತ್ತು, ಕೆನ್ನೆ ಮುಟ್ಟಲು ಶುರು ಮಾಡಿದರು. ಭಯದಿಂದ ಹೊರಗೆ ಹೋದೆ. ಆ ಬಳಿಕ ನನ್ನ ಅವರ ಉದ್ದೇಶ ಏನೆಂದು ನನಗೆ ಗೊತ್ತಾಯಿತು. ಹೀಗಾಗಿ ಆ ಸಿನಿಮಾದಲ್ಲಿ ನಟಿಸಲು ಹೋಗಿಲ್ಲ” ಎಂದು ನಿರ್ದೇಶಕನ ವಿರುದ್ಧ ಆರೋಪವನ್ನು ಮಾಡಿದ್ದಾರೆ.
ಈ ಆರೋಪ ಕೇಳಿಬಂದ ಬಳಿಕ ಮಾಲಿವುಡ್ ನಿರ್ದೇಶಕನ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ರಾಜಕೀಯ ಮುಖಂಡರು ಕೂಡ ಅವರ ವಿರುದ್ಧ ಹರಿಹಾಯ್ದಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ನಡೆಸುವ ಕೇರಳ ಚಲಚಿತ್ರ(ಚಲನಚಿತ್ರ) ಅಕಾಡೆಮಿಯ ಅಧ್ಯಕ್ಷ ಸ್ಥಾನಕ್ಕೆ ಅವರು ರಾಜೀನಾಮೆ ಸಲ್ಲಿಸಿದ್ದಾರೆ.
ರಂಜಿತ್ ಅವರು ತಮ್ಮ ನಿರ್ಧಾರವನ್ನು ಸಾಂಸ್ಕೃತಿಕ ವ್ಯವಹಾರಗಳ ಸಚಿವ ಸಾಜಿ ಚೆರಿಯನ್ ಅವರಿಗೆ ತಿಳಿಸಿದ್ದು, ತಮ್ಮ ವಿರುದ್ಧದ ಆರೋಪಗಳ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಲು ಇಷ್ಟವಿಲ್ಲ ಎಂದು ತಿಳಿಸಿರುವುದಾಗಿ ವರದಿ ಆಗಿದೆ.
ನಟ ಕೊಟ್ಟ ಸ್ಪಷ್ಟನೆ ಏನು?:
“ಬಂಗಾಲಿ ನಟಿ ಶ್ರೀಲೇಖಾ ಮಿತ್ರ ಅವರು ನನ್ನ ವಿರುದ್ಧ ಗಂಭೀರವಾದ ವೈಯಕ್ತಿಕ ಆರೋಪಗಳನ್ನು ಮಾಡಿದ್ದಾರೆ. ಇದು ಕೆಲವು ಸಮಯದಿಂದ ನಡೆಯುತ್ತಿದೆ. ನಿಖರವಾಗಿ ಹೇಳಬೇಕೆಂದರೆ, ನಾನು ಕೇರಳ ಚಲಚಿತ್ರ ಅಕಾಡೆಮಿಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಸಮಯದಿಂದ ಕೆಲ ಜನರ ಗುಂಪು ಈ ರೀತಿ ಮಾಡಲು ಪ್ರಯತ್ನಿಸುತ್ತಿದೆ. ಇದು ನನ್ನ ಗೌರವಕ್ಕೆ ಧಕ್ಕೆ ತಂದಿದೆ. ಈ ಆರೋಪಗಳನ್ನು ತಪ್ಪಾಗಿ ಸಾಬೀತುಪಡಿಸಬೇಕು. ಇದಕ್ಕಾಗಿ ನಾನು ಇದರ ವಿರುದ್ಧ ಕಾನೂನಾತ್ಮಕವಾಗಿ ಹೋರಾಟ ಮಾಡಲು ನಿರ್ಧರಿಸಿದ್ದೇನೆ. ಇದರ ಹಿಂದಿನ ಸತ್ಯವನ್ನು ನಾನು ತಿಳಿದುಕೊಳ್ಳಬೇಕೆಂದು” ಆರೋಪಕ್ಕೆ ರಂಜಿತ್ ಪ್ರತಿಕ್ರಿಯೆ ನೀಡಿದ್ದಾರೆ.
ಲೈಂಗಿಕ ಕಿರುಕುಳ ಆರೋಪ: ʼAMMAʼ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ನಟ ಸಿದ್ದೀಕ್ ರಾಜೀನಾಮೆ:
ಇತ್ತ ಮತ್ತೊಂದು ಲೈಂಗಿಕ ಕಿರುಕುಳ ಆರೋಪವನ್ನು ಎದುರಿಸುತ್ತಿರುವ ಹಿರಿಯ ನಟ ಸಿದ್ದೀಕ್ (Actor Siddique) ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ (Malayalam Movie Artistes) ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ನಟಿ ರೇವತಿ ಸಂಪತ್ (Revathy Sampath) ಸಿದ್ದೀಕ್ ವಿರುದ್ಧ ಲೈಂಗಿಕ ಕಿರುಕುಳ ಆರೋಪವನ್ನು ಮಾಡಿದ್ದರು. ತಮಿಳು ಸಿನಿಮಾದಲ್ಲಿ ಅವಕಾಶ ನೀಡುತ್ತೇನೆ ಎಂದು ಕರೆದು ಹೊಟೇಲ್ ರೂಮ್ ವೊಂದರಲ್ಲಿ ಲೈಂಗಿಕ ಕಿರುಕುಳ ನೀಡಿದ್ದರು ಆರೋಪವನ್ನು ಮಾಡಿದ್ದರು.
ಈ ಹಿನ್ನೆಲೆಯಲ್ಲಿ ಸಿದ್ದೀಕ್ ʼಅಮ್ಮʼ ಅಧ್ಯಕ್ಷರಾದ ನಟ ಮೋಹನ್ ಲಾಲ್ ಅವರಿಗೆ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ.
ಮಲಯಾಳಂ ಸಿನಿಮಾ ಉದ್ಯಮದಲ್ಲಿ ಮಹಿಳೆಯರ ವಿರುದ್ಧ ಅಪರಾಧಗಳನ್ನು ತಡೆಯುವ ಹೇಮಾ ಸಮಿತಿ ವರದಿ ಬಿಡುಗಡೆ ಬೆನ್ನಲ್ಲೇ ಈ ಆರೋಪ ಕೇಳಿಬಂದಿದ್ದು, ರಾಜ್ಯ ಸರ್ಕಾರವನ್ನು ಮುಜಗರಕ್ಕೀಡು ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !
Kollywood: ʼಅಮರನ್ʼ ಚಿತ್ರತಂಡದಿಂದ 1 ಕೋಟಿ ರೂ. ಪರಿಹಾರ ಕೇಳಿದ ವಿದ್ಯಾರ್ಥಿ; ಕಾರಣವೇನು?
Kollywood: ಧನುಷ್ – ಐಶ್ವರ್ಯಾ ವಿಚ್ಚೇದನ ಪ್ರಕರಣ; ನ.27ಕ್ಕೆ ಅಂತಿಮ ತೀರ್ಪು
Tollywood: ನಾನು ಸಿಂಗಲ್ ಅಲ್ಲ.. ರಶ್ಮಿಕಾ ಜತೆಗಿನ ಸಂಬಂಧ ದೃಢಪಡಿಸಿದ್ರಾ ದೇವರಕೊಂಡ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.