10 ಕೋಟಿ ಬಜೆಟ್‌ 100 ಕೋಟಿ ಗಳಿಕೆ: 3 ವಾರ ಕಳೆದರೂ ಕಡಿಮೆ ಆಗಿಲ್ಲʼManjummel Boysʼ ಕ್ರೇಜ್


Team Udayavani, Mar 11, 2024, 12:03 PM IST

7

ಕೊಚ್ಚಿ: ಮಾಲಿವುಡ್‌ ಸಿನಿರಂಗ ಈ ವರ್ಷ ಡ್ರೀಮ್‌ ಸ್ಟಾರ್ಟ್‌ ಪಡೆದುಕೊಂಡಿದೆ. ಇತ್ತೀಚೆಗೆ ತೆರೆಕಂಡಿರುವ ಮಾಲಿವುಡ್‌ ಸಿನಿಮಾಗಳು ಸತತ ಹಿಟ್‌ ಆಗುವುದರ ಜೊತೆಗೆ ಬಾಕ್ಸ್‌ ಆಫೀಸ್‌ ನಲ್ಲಿ ಭರ್ಜರಿ ಕಮಾಯಿ ಮಾಡಿದೆ.

ʼಬ್ರಹ್ಮಯುಗಂʼ ‘ಅನ್ವೇಷಿಪ್ಪಿನ್ ಕಂಡೆತುಂ’ ʼಪ್ರೇಮಲುʼ ಸಿನಿಮಾಗಳು ಈ ವರ್ಷವೇ ತೆರಕಂಡಿದೆ. ಈ ಮೂರು ಸಿನಿಮಾಗಳು ಮಾಲಿವುಡ್‌ ಮಾತ್ರವಲ್ಲದೆ ಇತರೆ ಸಿನಿವಲಯದ ಪ್ರೇಕ್ಷಕರನ್ನು ಸೆಳದಿದೆ. ಇದರೊಂದಿಗೆ ಬಂದಿರುವ ನೈಜಕಥೆ ಆಧಾರಿತ  ‘ಮಂಜುಮ್ಮೆಲ್‌ ಬಾಯ್ಸ್’. ಈ ಮೇಲಿನ ಮೂರು ಸಿನಿಮಾಗಳನ್ನು ದಾಟಿ ಥಿಯೇಟರ್‌ ನಲ್ಲಿ ಸಖತ್‌ ಮಾಡಿದೆ.

‘ಮಂಜುಮ್ಮೆಲ್‌ ಬಾಯ್ಸ್’ 2006 ರಲ್ಲಿ ಕೊಡೈಕೆನಾಲ್‌ನಲ್ಲಿ ನಡೆದ ನೈಜ ಕಥೆಯನ್ನು ಆಧರಿಸಿ ತಯಾರಾದ ಸಿನಿಮಾ. ಗೆಳೆಯರು ಸೇರಿಕೊಂಡು ‘ಗುಣಾ ಕೇವ್ಸ್’ ಗೆ ಹೋಗುತ್ತಾರೆ. ಇವರಲ್ಲಿ ಒಬ್ಬ ಆಳದ ಪ್ರಪಾತಕ್ಕೆ ಬೀಳುತ್ತಾನೆ. ಆ ಬಳಿಕ ಏನೆಲ್ಲಾ ನಡೆಯತ್ತದೆ. ಹೇಗೆ ಆ ಯುವಕನ ರಕ್ಷಣೆ ಆಗುತ್ತದೆ ಎನ್ನುವುದನ್ನು ರೋಚಕವಾಗಿ ಸಿನಿಮಾದಲ್ಲಿ ತೋರಿಸಲಾಗಿದೆ. ಛಾಯಗ್ರಹಣ,ಹಿನ್ನೆಲೆ ಸಂಗೀತ ಹಾಗೂ ನಟರ ಅಭಿನಯದಿಂದ ಸಿನಿಮಾ ಪ್ರೇಕ್ಷಕರಿಗೆ ಸಂಪೂರ್ಣ ಮನರಂಜನೆ ನೀಡುತ್ತದೆ.

ಈ ಸಿನಿಮಾ 10 ಕೋಟಿ ರೂ.ಬಜೆಟ್‌ ನಲ್ಲಿ ತಯಾರಾಗಿದೆ ಎನ್ನಲಾಗಿದೆ. ಆದರೆ ಬಾಕ್ಸ್‌ ಆಫೀಸ್‌ ನಲ್ಲಿ 100 ಕೋಟಿಗೂ ಅಧಿಕ ಕಲೆಕ್ಷನ್‌ ಮಾಡಿದೆ. ಆ ಮೂಲಕ ʼ2018ʼ ಸಿನಿಮಾದ ಬಳಿಕ 100 ಕೋಟಿ ದಾಟಿದ ಎರಡನೇ ಸಿನಿಮಾವಾಗಿ ‘ಮಂಜುಮ್ಮೆಲ್‌ ಬಾಯ್ಸ್’ ಹೊರಹೊಮ್ಮಿದೆ.

ಕೇರಳಕ್ಕಿಂತ ಈ ಸಿನಿಮಾ ತಮಿಳುನಾಡಿನಲ್ಲಿ ಅತೀ ಹೆಚ್ಚು ಗಳಿಕೆ ಕಂಡಿದೆ. ಇತ್ತ ಕರ್ನಾಟಕದಲ್ಲಿ ಕಲೆಕ್ಷನ್‌ ವಿಚಾರದಲ್ಲಿ ‘ಮಂಜುಮ್ಮೆಲ್‌ ಬಾಯ್ಸ್’ ಹಿಂದೆ ಬಿದ್ದಿಲ್ಲ.

ಇಂಡಿಯನ್‌ ಬಾಕ್ಸ್‌ ಆಫೀಸ್‌ ಗಳಿಕೆ:

ಮೊದಲ ವಾರ: 32 ಕೋಟಿ ರೂ.

ಎರಡನೇ ವಾರ: 45.25 ಕೋಟಿ ರೂ.

3ನೇ ಶುಕ್ರವಾರ: 6.75 ಕೋಟಿ ರೂ.

3ನೇ ಶನಿವಾರ: ರೂ. 10 ಕೋಟಿ ರೂ.

3ನೇ ಭಾನುವಾರ: 10.50 ಕೋಟಿ ರೂ.

ಒಟ್ಟು: 104.50 ಕೋಟಿ ಒಟ್ಟು ರೂ.  

ಯಾವ ರಾಜ್ಯದಲ್ಲಿಎಷ್ಟು ಗಳಿಕೆ?: 

 ಕೇರಳ: 52.75 ಕೋಟಿ ರೂ.

ಕರ್ನಾಟಕ:  9.25 ಕೋಟಿ ರೂ.

ತಮಿಳುನಾಡು: 39.75 ಕೋಟಿ ರೂ.

ಭಾರತದ ಉಳಿದ ಭಾಗದಲ್ಲಿ: 2.75 ಕೋಟಿ ರೂ.

ಒಟ್ಟು: 104.50 ಕೋಟಿ ಒಟ್ಟು ರೂ.  

ತಮಿಳುನಾಡಿನಲ್ಲಿ ʼಪೊನ್ನಿಯಿನ್ ಸೆಲ್ವನ್ʼ, ʼವಿಕ್ರಮ್ʼ, ʼಬಾಹುಬಲಿ 2ʼ ಬಳಿಕ ಹೆಚ್ಚು ಗಳಿಕೆ ಕಂಡ ಸಿನಿಮಾವಾಗಿ ‘ಮಂಜುಮ್ಮೆಲ್‌ ಬಾಯ್ಸ್’ ಹೊರಹೊಮ್ಮಿದೆ.

ಸೌಬಿನ್ ಶಾಹಿರ್‌, ಶ್ರೀನಾಥ್ ಭಾಸಿ, ಬಾಲು, ಲಾಲ್​ಜಿ, ದೀಪಕ್ ಅಭಿರಾಮ್ ,ಬಾಲು ವರ್ಗೀಸ್, ಗಣಪತಿ ಜೀನ್ ಪಾಲ್ ಲಾಲ್ ಮುಂತಾದವರು ನಟಿಸಿದ್ದಾರೆ.

 

ಟಾಪ್ ನ್ಯೂಸ್

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ

Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Thief

Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು

Accident-logo

Putturu: ಬೈಕ್‌-ಪಿಕಪ್‌ ಢಿಕ್ಕಿ: ಇಬ್ಬರು ಸವಾರರಿಗೆ ಗಂಭೀರ ಗಾಯ

Arrest

Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.