Movies: ಈ ವಾರ ರಿಲೀಸ್ ಆಗಲಿದೆ ಪ್ಯಾನ್ ಇಂಡಿಯಾದಲ್ಲಿ ಸದ್ದು ಮಾಡಬಹುದಾದ ಸಿನಿಮಾಗಳು
Team Udayavani, Mar 26, 2024, 1:35 PM IST
ಬೆಂಗಳೂರು: ದೇಶದಲ್ಲಿ ಕ್ರಿಕೆಟ್ ಹಬ್ಬ ಐಪಿಎಲ್ ಶುರುವಾಗಿದೆ. ಸಾಮಾನ್ಯವಾಗಿ ಐಪಿಎಲ್ ಸಮಯದಲ್ಲಿ ಸಿನಿಮಾಗಳು ತೆರೆ ಕಾಣುವುದು ತುಸು ಕಡಿಮೆ. ಆದರೆ ಈ ಬಾರಿ ಹೆಚ್ಚಾಗಿಯೇ ಸಿನಿಮಾಗಳು ತೆರೆ ಕಾಣುತ್ತಿದೆ. ಅದು ಕೂಡ ಬಹು ನಿರೀಕ್ಷಿತ ಸಿನಿಮಾಗಳೇ ಎನ್ನುವುದು ವಿಶೇಷ.
ಹಾಗಾದರೆ ಯಾವೆಲ್ಲಾ ಸಿನಿಮಾಗಳು ಈ ವಾರ ತೆರೆ ಕಾಣಲಿದೆ ಎನ್ನುವುದನ್ನು ನೋಡಿಕೊಂಡು ಬರೋಣ..
ಆಡು ಜೀವಿತಂ: ಪೃಥ್ವಿರಾಜ್ ಸುಕುಮಾರನ್ ಅವರ ವೃತ್ತಿ ಬದುಕಿನಲ್ಲೇ ವಿಶೇಷ ಸಿನಿಮಾ ಇದು ಎಂದರೆ ತಪ್ಪಾಗದು. ಈ ಸಿನಿಮಾಕ್ಕಾಗಿ ತೂಕ ಇಳಿಸಿಕೊಂಡು, ಪಾತ್ರಕ್ಕಾಗಿ ಉಪವಾಸ ಹಿಡಿದು ಕೂತಿದ್ದ ಪೃಥ್ವಿರಾಜ್ ಕೊನೆಗೂ ಥಿಯೇಟರ್ ನಲ್ಲಿ ʼಆಡುಜೀವಿತಂʼ ನಲ್ಲಿ ನಜೀಬ್ ಅವರ ಜೀವನವನ್ನು ತೋರಿಸಲಿದ್ದಾರೆ.
ʼಆಡು ಜೀವಿತಂʼ ನಜೀಬ್ ಮೊಹಮ್ಮದ್ ಎನ್ನುವ ಕೇರಳದ ವ್ಯಕ್ತಿಯ ಕಥೆಯಾಗಿದೆ. ಈ ಪಾತ್ರವನ್ನು ಪೃಥ್ವಿರಾಜ್ ಮಾಡಿದ್ದಾರೆ. 90ರ ದಶಕದಲ್ಲಿ ಭವಿಷ್ಯ ಹುಡುಕಿಕೊಂಡು ಸೌದಿ ಅರೇಬಿಯಾಗೆ ಹೋಗುವ ನಜೀಬ್ ಪಾಸ್‌ಪೋರ್ಟ್ ಇಲ್ಲದೆ ಎದುರಿಸಿದ ಹಿಂಸೆ, ಮರುಭೂಮಿ ಬಿಸಿಲಿನಲ್ಲಿ ಅನುಭವಿಸಿದ ಕಷ್ಟಗಳನ್ನು ಸಿನಿಮಾದಲ್ಲಿ ಹೇಳಲಾಗಿದೆ.
ಬ್ಲೆಸ್ಸಿ ಥಾಮಸ್ ನಿರ್ದೇಶನದ ಈ ಸಿನಿಮಾ ಇದೇ ಮಾ.28 ರಂದು ರಿಲೀಸ್ ಆಗಲಿದೆ. ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಚಿತ್ರದ ಕರ್ನಾಟಕ ವಿತರಣೆ ಹಕ್ಕು ಖರೀದಿಸಿದೆ.
ಯುವ: ಇನ್ನು ಕನ್ನಡದಲ್ಲಿ ಈ ವಾರ ಸಾಕಷ್ಟು ನಿರೀಕ್ಷೆಯನ್ನು ಹುಟ್ಟಿಸಿರುವ ರಾಜ್ ಕುಮಾರ್ ಕುಡಿ, ಯುವರಾಜ್ ಕುಮಾರ್ ಅವರ ಚೊಚ್ಚಲ ಚಿತ್ರ ʼಯುವʼ ರಿಲೀಸ್ ಆಗಲಿದೆ. ಸಂತೋಷ್ ಆನಂದರಾಮ್ ನಿರ್ದೇಶನದ ʼಯುವʼ ಸಟ್ಟೇರಿದ ದಿನದಿಂದ ಸದ್ದು ಮಾಡಿದೆ. ಈಗಾಗಲೇ ರಿಲೀಸ್ ಆಗಿರುವ ಟ್ರೇಲರ್ ಹಾಗೂ ಹಾಡುಗಳನ್ನು ಕೇಳಿ ಸಿನಿಮಾದ ಬಗ್ಗೆ ಪಾಸಿಟಿವ್ ಮಾತುಗಳನ್ನಾಡುತ್ತಿದ್ದಾರೆ.
ಇದೇ ಮಾ.29 ರಂದು ಸಿನಿಮಾ ತೆರೆ ಕಾಣಲಿದೆ.
ಟಿಲ್ಲು ಸ್ಕೇರ್: 2022 ರಲ್ಲಿ ಬಂದಿದ್ದ ನಟ ಸಿದ್ದು ಜೊನ್ನಲಗಡ್ಡ – ನೇಹಾ ಶೆಟ್ಟಿ ಅಭಿನಯದ ʼಡಿಜೆ ಟಿಲ್ಲುʼ ಸಿನಿಮಾ ಸೀಕ್ವೆಲ್ ಈ ಟಿಲ್ಲು ಸ್ಕೇರ್. ಮೊದಲ ಭಾಗ ಹಿಟ್ ಆದ ನಂತರ ಎರಡನೇ ಭಾಗ ಬರುತ್ತಿರುವುದನ್ನು ನೋಡಲು ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ.
ಈ ಚಿತ್ರದಲ್ಲಿ ಅನುಪಮಾ ಪರಮೇಶ್ವರನ್ ಸಖತ್ ಹಾಟ್ ಆಗಿ,ಬೋಲ್ಡ್ ಲುಕ್ಸ್ ನಲ್ಲಿ ಕಾಣಿಸಿಕೊಂಡಿರುವುದು ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದೆ. ಮಾ.29 ರಂದು ಸಿನಿಮಾ ತೆರೆ ಕಾಣಲಿದೆ.
ಗಾಡ್ಜಿಲ್ಲಾ Vs ಕಾಂಗ್: ದಿ ನ್ಯೂ ಎಂಫೈರ್: ಇನ್ನು ಹಾಲಿವುಡ್ ನಲ್ಲಿ ಈ ಸಿನಿಮಾ ತೆರೆ ಕಾಣಲಿದ್ದು, ಗಾಡ್ಜಿಲ್ಲಾ Vs ಕಾಂಗ್: ದಿ ನ್ಯೂ ಎಂಫೈರ್ ಎನ್ನುವ ಸಿನಿಮಾ ಮಾ.29 ರಂದು ಬಿಡಗಡೆ ಆಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ
Mollywood: ಸೂಪರ್ ಸ್ಟಾರ್ ಮೋಹನ್ ಲಾಲ್‌ಗೆ ‘ಆವೇಶಮ್ʼ ನಿರ್ದೇಶಕ ಆ್ಯಕ್ಷನ್ ಕಟ್
Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.