Kollywood: ದಳಪತಿ ವಿಜಯ್ ʼGOATʼ ಸಿನಿಮಾದಲ್ಲಿ ಧೋನಿ, ರುತ್ ರಾಜ್ ನಟನೆ?
Team Udayavani, May 1, 2024, 6:33 PM IST
ಚೆನ್ನೈ: ದಳಪತಿ ವಿಜಯ್ ರಾಜಕೀಯ ರಂಗಕ್ಕೆ ಧುಮುಕಿದ್ದಾರೆ. ಸಿನಿಮಾರಂಗದಲ್ಲಿ ಹೈಪ್ ಹೆಚ್ಚಿರುವಾಗಲೇ ಅವರು ರಾಜಕೀಯ ಅಖಾಡಕ್ಕೆ ಎಂಟ್ರಿ ಆಗಿರುವುದು ಅವರ ಕೆಲ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.
ಕೊನೆಯ ಎರಡು ಸಿನಿಮಾಗಳನ್ನು ಮಾಡಿದ ಬಳಿಕ ಅವರು, 2026 ರ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಆ ಬಳಿಕ ಸಂಪೂರ್ಣವಾಗಿ ರಾಜಕೀಯ ರಂಗದಲ್ಲಿ ತೊಡಗಿಕೊಳ್ಳುವುದಾಗಿ ವಿಜಯ್ ಹೇಳಿದ್ದಾರೆ.
ಸದ್ಯ ವಿಜಯ್ ವೆಂಕಟ್ ಪ್ರಭು ನಿರ್ದೇಶನದ ʼ ಗೋಟ್ʼ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ಬಗ್ಗೆ ಹೈಪ್ ಹೆಚ್ಚಾಗಿದೆ. ಇತ್ತೀಚೆಗೆ ʼವಿಜಿಲ್ ಪೋಡ್ʼ ಎನ್ನುವ ಮೊದಲ ಸಿಂಗಲ್ ಹಾಡನ್ನು ರಿಲೀಸ್ ಮಾಡಲಾಗಿದೆ.
ಇದೀಗ ಸಿನಿಮಾದ ಬಗ್ಗೆ ಮತ್ತೊಂದು ಅಪ್ಡೇಟ್ ವೊಂದು ಕಾಲಿವುಡ್ ನಲ್ಲಿ ಹರಿದಾಡಿದೆ. ವಿಜಯ್ ಅವರ ʼಗೋಟ್ʼ ಸಿನಿಮಾದಲ್ಲಿ ನಟ ಅಜ್ಮಲ್ ಅವರು ಪಾತ್ರವೊಂದನ್ನು ಮಾಡಲಿದ್ದಾರೆ.
ಇತ್ತೀಚೆಗೆ ಅವರು ಯೂಟ್ಯೂಬ್ ಚಾನೆಲ್ ವೊಂದಕ್ಕೆ ಸಂದರ್ಶನದಲ್ಲಿ ಕುತೂಹಲಕಾಗಿ ವಿಚಾರವನ್ನು ಹೇಳಿದ್ದಾರೆ.
“ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರು ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆಯೇ?” ಎನ್ನುವ ಪ್ರಶ್ನೆಯೊಂದನ್ನು ಕೇಳಲಾಗಿದೆ. ಇದಕ್ಕೆ ಒಂದು ಕ್ಷಣ ತುಟಿ ಬಿಚ್ಚದ ಅವರು, ಆ ಬಳಿಕ ಇಂಥ ವಿಚಾರವನ್ನು ಪ್ರೂಡಕ್ಷನ್ ಹೌಸ್ ಅಧಿಕೃತವಾಗಿ ಹೇಳುತ್ತಾರೆ ಎಂದು ಹೇಳುವ ಮೂಲಕ ಕುತೂಹಲವನ್ನು ಹಾಗೆಯೇ ಬಿಟ್ಟಿದ್ದಾರೆ.
ಅಜ್ಮಲ್ ಈ ಪ್ರಶ್ನೆ ಇಲ್ಲವೆನ್ನುವ ಉತ್ತರವನ್ನು ಹೇಳದ ಕಾರಣ, ಸಿನಿಮಾದಲ್ಲಿ ಧೋನಿ ಹಾಗೂ ರುತ್ ರಾಜ್ ಗಾಯಕ್ವಾಡ್ ಅವರು ನಟಿಸುತ್ತಾರೆ ಎಂದು ಹರಿದಾಡುತ್ತಿದ್ದ ವದಂತಿ ಮತ್ತಷ್ಟು ಬಲಗೊಂಡಂತಾಗಿದೆ.
ಇತ್ತೀಚೆಗೆ ರುತ್ ರಾಜ್ ʼಲಿಯೋʼ ಸಿನಿಮಾವನ್ನು ಓಟಿಟಿಯಲ್ಲಿ ನೋಡಿ ಖುಷಿಪಟ್ಟಿದ್ದರು. ಧೋನಿ ಈಗಾಗಲೇ ನಿರ್ಮಾಪಕರಾಗಿ ಸಿನಿರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಹಾಗಾಗಿ ಈ ಇಬ್ಬರು ಸಿನಿಮಾದಲ್ಲಿ ಸಣ್ಣ ಪಾತ್ರ ಮಾಡಿದರೆ ಅಚ್ಚರಿಪಡಬೇಕಿಲ್ಲ.
ಇದೇ ವರ್ಷದ ಸೆ.5 ರಂದು ʼಗೋಟ್ʼ ಸಿನಿಮಾ ರಿಲೀಸ್ ಆಗಲಿದೆ. ಸಿನಿಮಾದಲ್ಲಿ ವಿಜಯ್ ಜೊತೆ ಮೀನಾಕ್ಷಿ ಚೌಧರಿ, ಯೋಗಿ ಬಾಬು, ಜಯರಾಮ್, ಪ್ರಭುದೇವ, ಲೈಲಾ ಮುಂತಾದವರು ಕಾಣಿಸಿಕೊಳ್ಳಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ
Kollywood: ಕಾರ್ತಿಕ್ ಸುಬ್ಬರಾಜ್ ಚಿತ್ರಕ್ಕೆ ʼರೆಟ್ರೋʼ ಆದ ಸೂರ್ಯ; ಮಸ್ತ್ ಆಗಿದೆ ಮಾಸ್
Tollywood: ಸಂಧ್ಯಾ ಥಿಯೇಟರ್ ಕಾಲ್ತುಳಿತ ಪ್ರಕರಣ; ಅಲ್ಲು ಅರ್ಜುನ್ ಬೌನ್ಸರ್ ಬಂಧನ
Sukumar: ಸಿನಿಮಾರಂಗಕ್ಕೆ ಸುಕುಮಾರ್ ಗುಡ್ ಬೈ?; ಸುಳಿವು ಕೊಟ್ಟ ʼಪುಷ್ಪʼ ಡೈರೆಕ್ಟರ್
Allu Arjun: ಕಾಲ್ತುಳಿತ ಪ್ರಕರಣ- ಹೈದರಾಬಾದ್ ಪೊಲೀಸರಿಂದ ನಟ ಅಲ್ಲು ಅರ್ಜುನ್ ವಿಚಾರಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.