Tollywood: ಚಳಿಗಾಲದಲ್ಲಿ ಈ ದಿನ ನೆರವೇರಲಿದೆ ನಾಗಚೈತನ್ಯ – ಶೋಭಿತಾ ವಿವಾಹ
Team Udayavani, Oct 30, 2024, 5:22 PM IST
ಹೈದರಾಬಾದ್: ಟಾಲಿವುಡ್ ನಟ ನಾಗಚೈತನ್ಯ (Naga Chaitanya) – ಶೋಭಿತಾ ಧೂಳಿಪಾಲ (Sobhita Dhulipala) ಮದುವೆಯ ಸಿದ್ಧತೆಯಲ್ಲಿದ್ದಾರೆ.
8 ವರ್ಷಗಳಿಂದ ಡೇಟಿಂಗ್ ನಲ್ಲಿದ್ದ ನಾಗಚೈತನ್ಯ ಮತ್ತು ಶೋಭಿತಾ ಧೂಳಿಪಾಲ ಆ.8ರಂದು ಹೈದರಾಬಾದ್‌ನಲ್ಲಿರುವ ನಾಗಚೈತನ್ಯ ಅವರ ನಿವಾಸದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೀಗ ಇಬ್ಬರು ಹಸೆಮಣೆ ಏರಲು ಸಿದ್ಧರಾಗಿದ್ದಾರೆ.
ನಾಗಾರ್ಜುನ್ ಕುಟುಂಬದಲ್ಲಿ ಮದುವೆಯ ಸಂಭ್ರಮ ನಡೆಯಲಿದೆ. ಈಗಾಗಲೇ ಪ್ರೀ ವೆಡ್ಡಿಂಗ್ ಸಂಭ್ರಮಗಳು ಜೋರಾಗಿ ನಡೆಯುತ್ತಿದೆ. ಇದೇ ವರ್ಷದ ಡಿಸೆಂಬರ್ 4 ರಂದು ಅಂದರೆ ಚಳಿಗಾಲದ ಸೀಸನ್‌ನಲ್ಲಿ ನಾಗಚೈತನ್ಯ – ಶೋಭಿತಾ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ವರದಿಯಾಗಿದೆ.
ಇಬ್ಬರ ಕುಟುಂಬಸ್ಥರು ಹಾಗೂ ಆಪ್ತ ವಲಯದ ಸಮ್ಮುಖದಲ್ಲಿಅದ್ಧೂರಿಯಾಗಿ ವಿವಾಹ ಸಮಾರಂಭ ನೆರವೇರಲಿದೆ ಎಂದು ವರದಿಯಾಗಿದೆ.
ನಿಶ್ಚಿತಾರ್ಥದ ಬಳಿಕ ಶೋಭಿತಾ ಥೇಟು ಸಾಂಪ್ರದಾಯಿಕ ಸೌತ್ ಬೆಡಗಿಯಾಗಿ ಮಿಂಚಿದ್ದಾರೆ. ಸಾಂಪ್ರದಾಯಿಕ ಉಡುಗೆಯಲ್ಲಿ ಶೋಭಿತಾ ಹಲವು ಸಮಾರಂಭದಲ್ಲಿ ಭಾಗಿಯಾಗಿದ್ದಾರೆ. ಇತ್ತೀಚೆಗೆ ನಡೆದ ಎಎನ್‌ಆರ್ (ಅಕ್ಕಿನೇನಿ ನಾಗೇಶ್ವರ ರಾವ್) ಪ್ರಶಸ್ತಿ ಸಮಾರಂಭದಲ್ಲಿ ನಾಗಾರ್ಜುನ್ ಶೋಭಿತಾ ಅವರನ್ನು ಹಿರಿಯ ನಟ ಚಿರಂಜೀವಿ ಅವರಿಗೆ ಸೊಸೆ ಎಂದು ಪರಿಚಯಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jai Hanuman: ತೆಲುಗು ನಿರ್ದೇಶಕನ ಸಿನಿಮಾದಲ್ಲಿ ʼಹನುಮಾನ್ʼ ಆದ ಕನ್ನಡದ ರಿಷಬ್ ಶೆಟ್ಟಿ
Nishad Yusuf; ಕಂಗುವ ಖ್ಯಾತಿಯ ಸಂಕಲನಕಾರ 43 ರ ಹರೆಯದಲ್ಲೇ ವಿಧಿವಶ
SSMB 29: ಮಹೇಶ್ ಬಾಬು- ರಾಜಮೌಳಿ ಸಿನಿಮಾಕ್ಕೆ 1000 ಕೋಟಿ ಬಜೆಟ್? ಶೂಟಿಂಗ್ ಯಾವಾಗ ಶುರು?
Bellary: ಕನ್ನಡಿಗರಿಗೆ, ಯಶ್ ಅಭಿಮಾನಿಗಳಿಗೆ ಅವಮಾನ ಮಾಡಿಲ್ಲ: ಪುಷ್ಪ 2 ವಿತರಕ
Nayanthara: ಮುಖಕ್ಕೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡ್ರಾ ಲೇಡಿ ಸೂಪರ್ ಸ್ಟಾರ್?
MUST WATCH
ಹೊಸ ಸೇರ್ಪಡೆ
Movies: ದೀಪಾವಳಿ ಹಬ್ಬಕ್ಕೆ ರಿಲೀಸ್ ಆಗಿ ಕೈ ಸುಟ್ಟುಕೊಂಡ ಸ್ಟಾರ್ ಸಿನಿಮಾಗಳು
Waqf Property:ಜಂಟಿ ಸಂಸದೀಯ ಸಮಿತಿ ಕರ್ನಾಟಕದ ರೈತರ ಸಮಸ್ಯೆಗಳ ಆಲಿಸಲಿ: ತೇಜಸ್ವಿ ಸೂರ್ಯ
Online Shopping Effect: ದೇಶದಲ್ಲಿ 2 ಲಕ್ಷ ಕಿರಾಣಿ ಅಂಗಡಿಗಳು ಬಂದ್
Jai Hanuman: ತೆಲುಗು ನಿರ್ದೇಶಕನ ಸಿನಿಮಾದಲ್ಲಿ ʼಹನುಮಾನ್ʼ ಆದ ಕನ್ನಡದ ರಿಷಬ್ ಶೆಟ್ಟಿ
Gadaga: ಐತಿಹಾಸಿಕ ವೀರನಾರಾಯಣ ದೇವಸ್ಥಾನ ಪುನರುತ್ಥಾನ ಕಾರ್ಯಕ್ಕೆ ಚಾಲನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.