ಜೀವನ ಪರ್ಯಂತ ವೀಲ್ ಚೇರ್ನಲ್ಲೇ ಇರುವ ಪುತ್ರನಿಗೆ ಅದ್ಧೂರಿಯಾಗಿ ಮದುವೆ ಮಾಡಿಸಿದ ಖ್ಯಾತ ನಟ
Team Udayavani, Nov 7, 2024, 5:57 PM IST
ಚೆನ್ನೈ: ಕಾಲಿವುಡ್ ಚಿತ್ರರಂಗದ ಜನಪ್ರಿಯ ನಟ ಕಂ ರಾಜಕೀಯ ಮುಖಂಡ ನೆಪೋಲಿಯನ್ (Napoleon) ತಮ್ಮ ಕಿರಿಯ ಪುತ್ರನ ಮದುವೆಯನ್ನು ಅದ್ಧೂರಿಯಾಗಿಯೇ ನೆರವೇರಿಸಿದ್ದಾರೆ.
ನಟ ನೆಪೋಲಿಯನ್ ಅವರ ಕಿರಿಯ ಪುತ್ರ ಧನೂಷ್ ಅವರಿಗೆ ಬಾಲ್ಯದಿಂದಲೇ ಸ್ನಾಯು ಕ್ಷಯ (Muscular Dystrophy) ಕಾಯಿಲೆ ಇದೆ. ಇದೊಂದು ಅಪರೂಪದ ಕಾಯಿಲೆ ಆಗಿದ್ದು, ದಿನನಿತ್ಯದ ಚಟುವಟಿಕೆಗಳಿಗೆ ಇತರರನ್ನು ಅವಲಂಬಿಸಬೇಕಾಗುವ ಸ್ಥಿತಿ ರೋಗಿಗೆ ಇರುತ್ತದೆ.
ಹೀಗಾಗಿ ನೆಪೋಲಿಯನ್ ಅವರ ಪುತ್ರ ಧನೂಷ್ ವೀಲ್ ಚೇರ್ನಲ್ಲೇ ಇದ್ದಾರೆ. ಮಗನ ಈ ಸ್ಥಿತಿಯಿಂದ ನೆಪೋಲಿಯನ್ ದಂಪತಿ ಅಮೆರಿಕದಲ್ಲಿ ನೆಲೆಸಿದ್ದರು. 25 ವರ್ಷದ ಧನೂಷ್ ಅವರಿಗೆ ಮದುವೆ ಮಾಡಿಸಿಕೊಡಬೇಕೆನ್ನುವ ಕನಸು ನೆಪೋಲಿಯನ್ ಅವರಿಗಿತ್ತು. ಆದರೆ ಮಗನ ಆರೋಗ್ಯ ಸ್ಥಿತಿ ಅದಕ್ಕೆ ಅಡ್ಡಿ ಆಗುತ್ತಿತ್ತು.
ಅಂತೂ ಚೆನ್ನೈ ಮೂಲದ ಅಕ್ಷಯ ಎಂಬಾಕೆ ವಿವಾಹವಾಗಲು ಮುಂದೆ ಬಂದಿದ್ದಳು. ನಿಶ್ಚಿತಾರ್ಥಕ್ಕೂ ಧನೂಷ್ ಬರಲು ಆಗದ ಕಾರಣ ವಿಡಿಯೋ ಕಾಲ್ನಲ್ಲಿ ನಿಶ್ಚಿತಾರ್ಥ ನೆರವೇರಿತ್ತು.
ಸೋಶಿಯಲ್ ಮೀಡಿಯಾದಲ್ಲಿ ಈ ನಿಶ್ಚಿತಾರ್ಥದ ಬಗ್ಗೆ ಚರ್ಚೆ ನಡೆದಿತ್ತು. ಯುವತಿ ಧನೂಷ್ ಅವರನ್ನು ದುಡ್ಡಿಗೋಸ್ಕರ ವಿವಾಹವಾಗಲು ಒಪ್ಪಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿತ್ತು.
ಮದುವೆಯೂ ಮುನ್ನ ಭಾವಿ ಪತ್ನಿ ಜತೆ ಧನೂಷ್ ಫೋಟೋ ಶೂಟ್ ಮಾಡಿಸಿಕೊಂಡಿದ್ದರು. ಗುರುವಾರ (ನ.7ರಂದು) ಹಿಂದೂ ಸಂಪ್ರದಾಯದಂತೆ ಜಪಾನಿನಲ್ಲಿ ಧನೂಷ್- ಅಕ್ಷಯ ವಿವಾಹ ನೆರವೇರಿದೆ.
ಪತ್ನಿಯ ಕತ್ತಿಗೆ ತಾಳಿ ಹಾಕಲು ಕೂಡ ಸರಿಯಾಗಿ ಆಗದೆ ಇದ್ದಾಗ, ಧನೂಷ್ ತಾಯಿ ಮಗನ ಕೈಹಿಡಿದು ತಾಳಿಯನ್ನು ಹಾಕಿಸಿದ್ದಾರೆ. ಮಗನ ಆರೋಗ್ಯ ಸ್ಥಿತಿಯಿಂದ ಆತನಿಗೆ ಮದುವೆಯೇ ಆಗಲ್ಲ ಎಂದುಕೊಂಡಿದ್ದ ನೆಪೋಲಿಯನ್ ಪುತ್ರನ ಮದುವೆ ಸಂಭ್ರಮವನ್ನು ನೋಡಿ ಕಣ್ಣೀರಿಟ್ಟಿದ್ದಾರೆ.
ಈ ವಿವಾಹ ಸಮಾರಂಭಕ್ಕೆ ಕಾಲಿವುಡ್ ಕಲಾವಿದರ ದಂಡೇ ಹರಿದು ಬಂದಿದೆ. ಕಾರ್ತಿ, ಶರತ್ಕುಮಾರ್, ರಾಧಿಕಾ, ಮೀನಾ, ಖುಷ್ಬು, ಸುಹಾಸಿನಿ, ಕಲಾ ಮಾಸ್ಟರ್ ಮುಂತಾದವರು ಬಂದು ನವ ಜೋಡಿಗೆ ಶುಭಕೋರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ʼಅಮರನ್’ ಫೋನ್ ನಂಬರ್ ಸೀನ್; ಸಾಯಿಪಲ್ಲವಿ ನಂಬರ್ ಎಂದು ವಿದ್ಯಾರ್ಥಿಗೆ ನೂರಾರು ಕಾಲ್ಸ್
Kamal Haasan: ʼಥಗ್ ಲೈಫ್ʼ ರಿಲೀಸ್ ಡೇಟ್ ಅನೌನ್ಸ್; ಬರ್ತ್ ಡೇಗೆ ಟೀಸರ್ ಗಿಫ್ಟ್
Nivin Pauly: ಲೈಂಗಿಕ ದೌರ್ಜನ್ಯ ಪ್ರಕರಣ; ʼಪ್ರೇಮಂʼ ನಟ ನಿವಿನ್ ಪೌಲಿಗೆ ಕ್ಲೀನ್ ಚಿಟ್
BʼTown: ʼಪುಷ್ಪ-2ʼಗೆ ದಾರಿ ಬಿಟ್ಟ ವಿಕ್ಕಿ ಕೌಶಲ್ ʼಛಾವಾʼ; ರಿಲೀಸ್ ಡೇಟ್ ಮುಂದೂಡಿಕೆ?
Actor Surya: ಶಿವಣ್ಣ ಜೊತೆ ಸ್ಪರ್ಧೆಯಿಲ್ಲ; ತಮಿಳು ನಟ ಸೂರ್ಯ ಸ್ಪಷ್ಟನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.