Kollywood: ಮಾಜಿ ಆಳಿಯನ ಜತೆ ರಜಿನಿ ನಟನೆ? ಒಂದೇ ಚಿತ್ರದಲ್ಲಿ ಧನುಷ್ – ರಜಿನಿಕಾಂತ್?
Team Udayavani, Oct 23, 2024, 12:44 PM IST
ಚೆನ್ನೈ: ಸೂಪರ್ ಸ್ಟಾರ್ ರಜಿನಿಕಾಂತ್ (Rajinikanth) ಅವರ ವಯಸ್ಸು 70 ದಾಟಿದರೂ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
‘ಜೈಲರ್’ ಬಳಿಕ ಇತ್ತೀಚೆಗೆ ಬಂದ ‘ವೆಟ್ಟೈಯಾನ್’ ನಲ್ಲೂ ರಜಿನಿ ಕಮಾಲ್ ಮಾಡಿದ್ದಾರೆ. ಎನ್ ಕೌಂಟರ್ ಸ್ಪೆಷೆಲಿಸ್ಟ್ ಆಗಿ ರಜಿನಿ ಬಿಗ್ ಸ್ಕ್ರೀನ್ ನಲ್ಲಿ ಮಿಂಚಿದ್ದಾರೆ. ಸಿನಿಮಾ 200 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ.
ರಜಿನಿಕಾಂತ್ ಮುಂದೆ ಲೋಕೇಶ್ ಕನಕರಾಜ್ (Lokesh Kanagaraj) ಅವರ ‘ಕೂಲಿ’ (Coolie) ಸಿನಿಮಾದಲ್ಲಿ ಬಣ್ಣ ಹಚ್ಚಲಿದ್ದಾರೆ. ಇದಾದ ಬಳಿಕ ರಜಿನಿಕಾಂತ್ ನೆಲ್ಸನ್ ದಿಲೀಪ್ ಕುಮಾರ್ (Nelson Dilipkumar) ಅವರ ‘ಜೈಲರ್ -2’ (Jailer-2) ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಇದೀಗ ಈ ಸಿನಿಮಾದ ಬಗೆಗಿನ ಮಾತೊಂದು ಕಾಲಿವುಡ್ ನಲ್ಲಿ ಹರಿದಾಡುತ್ತಿದೆ. ರಜಿನಿಕಾಂತ್ ಅವರ ಮಾಜಿ ಆಳಿಯ ಧನುಷ್ (Dhanush) ‘ಜೈಲರ್-2’ ನಲ್ಲಿ ನಟಿಸಲಿದ್ದಾರೆ ಎನ್ನುವ ಮಾತು ಕಾಲಿವುಡ್ ವಲಯದಲ್ಲಿ ಕೇಳಿ ಬರುತ್ತಿದೆ.
ರಜಿನಿಕಾಂತ್ ಹಾಗೂ ಧನುಷ್ ಇದುವರೆಗೆ ಜತೆಯಾಗಿ ಯಾವ ಸಿನಿಮಾದಲ್ಲೂ ಕಾಣಿಸಿಕೊಂಡಿಲ. ಇಬ್ಬರಿಗೂ ತಮ್ಮದೇ ಆದ ದೊಡ್ಡ ಫ್ಯಾನ್ ಫಾಲೋವಿಂಗ್ ಇದೆ. ಇಬ್ಬರು ಜತೆಯಾಗಿ ನಟಿಸಬೇಕೆನ್ನುವ ಆಸೆ ಅಭಿಮಾನಿಗಳದು. ಈ ನಿಟ್ಟಿನಲ್ಲಿ ‘ಜೈಲರ್-2’ ನಲ್ಲಿ ಧನುಷ್ ಅವರಿಗಾಗಿ ನೆಲ್ಸನ್ ಸ್ಪೆಷಲ್ ರೋಲ್ ವೊಂದನ್ನು ಬರೆದಿದ್ದಾರೆ ಎನ್ನಲಾಗಿದೆ. ಇದನ್ನು ರಜಿನಿಕಾಂತ್ ಒಪ್ಪಿದರೆ ಸಿನಿಮಾ ಅಧಿಕೃತವಾಗಿ ಘೋಷಣೆ ಆಗಲಿದೆ ಎನ್ನಲಾಗಿದೆ.
ರಜಿನಿಕಾಂತ್ ಪುತ್ರಿ ಐಶ್ವರ್ಯಾ ಹಾಗೂ ಧನುಷ್ ಪರಸ್ಪರ ಒಪ್ಪಿ ವಿಚ್ಛೇದನ ನೀಡಲು ಮುಂದಾಗಿದ್ದಾರೆ. ಆದರೆ ಇಬ್ಬರು ಮತ್ತೆ ಮುನಿಸು ಮರೆತು ಒಂದಾಗುತ್ತಾರೆ ಎಂದು ಹೇಳಲಾಗುತ್ತಿದೆ. ಏಕೆಂದರೆ ಇತ್ತೀಚೆಗೆ ಇಬ್ಬರು ವಿಚ್ಚೇದನ ಸಂಬಂಧದ ಅರ್ಜಿ ವಿಚಾರಣೆಗೆ ಗೈರಾಗಿದ್ದರು.
ಸದ್ಯ ಧನುಷ್ ‘ರಾಯನ್’ ನಿಂದ ಬಿಗ್ ಹಿಟ್ ಪಡೆದು, ‘ಕುಬೇರ’ ಹಾಗೂ ‘ಇಡ್ಲಿ ಕಡೈ’ ಎಂಬ ಸಿನಿಮಾದಲ್ಲಿ ಮುಂದೆ ಕಾಣಿಸಿಕೊಳ್ಳಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mollywood: ಸೂಪರ್ ಸ್ಟಾರ್ ಮೋಹನ್ ಲಾಲ್‌ಗೆ ‘ಆವೇಶಮ್ʼ ನಿರ್ದೇಶಕ ಆ್ಯಕ್ಷನ್ ಕಟ್
Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ
Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ
Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ
Malayalam actor: ಹಾಲಿವುಡ್‌ನಲ್ಲೂ ಮಿಂಚಿದ್ದ ಮಾಲಿವುಡ್‌ನ ಹಿರಿಯ ನಟ ಥಾಮಸ್ ನಿಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BBK11: ವೀಕ್ಷಕರಿಗೆ ಸರ್ಪ್ರೈಸ್; ಮತ್ತೆ ಬಿಗ್ ಬಾಸ್‌ಗೆ ಗೋಲ್ಡ್ ಸುರೇಶ್
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.