ಮುಂದಿನ ಸಿನಿಮಾಕ್ಕೆ ಲೋಕಲ್ ಹೈದನಾದ ಪ್ರಭಾಸ್: ʼThe Raja Saabʼ ಫಸ್ಟ್ ಲುಕ್ ಔಟ್
Team Udayavani, Jan 15, 2024, 11:48 AM IST
ಹೈದರಾಬಾದ್: ಡಾರ್ಲಿಂಗ್ ಪ್ರಭಾಸ್ ʼಸಲಾರ್ʼ ಮೂಲಕ ಮತ್ತೆ ಬಹುಬೇಡಿಕೆಯ ನಟನಾಗಿ ಕಾಣಿಸಿಕೊಂಡಿದ್ದಾರೆ. ʼಬಾಹುಬಲಿʼ ಬಳಿಕ ʼಸಲಾರ್ʼ ಅವರಿಗೆ ದೊಡ್ಡ ಹಿಟ್ ಕೊಟ್ಟಿದೆ. ಇದರ ಬೆನ್ನಲ್ಲೇ ಅವರ ಮುಂದಿನ ಸಿನಿಮಾದ ಫಸ್ಟ್ ಲುಕ್ ಸಂಕ್ರಾಂತಿ ಹಬ್ಬದ ಪ್ರಯುಕ್ತ ರಿಲೀಸ್ ಆಗಿದೆ.
ಈ ಹಿಂದೆ ʼಬಲೆ ಬಲೆ ಮಗಾಡಿವೋಯ್ʼ, ʼಮಹಾನುಭಾವುಡುʼ ಮುಂತಾದ ಕೌಟುಂಬಿಕ ಮನರಂಜನೆಯ ಸಿನಿಮಾವನ್ನು ನೀಡಿರುವ ನಿರ್ದೇಶಕ ಮಾರುತಿ ಅವರೊಂದಿಗೆ ಪ್ರಭಾಸ್ ಅವರು ತನ್ನ ಮುಂದಿನ ಸಿನಿಮಾವನ್ನು ಮಾಡಲಿದ್ದಾರೆ. ಇದಕ್ಕೆ ʼದಿ ರಾಜಾ ಸಾಬ್ʼ ಎಂದು ಟೈಟಲ್ ಇಡಲಾಗಿದೆ.
ಕಪ್ಪು ಟಿ-ಶರ್ಟ್, ಲುಂಗಿ ಹಾಕಿಕೊಂಡು ಬಿಂದಾಸ್ ಆಗಿ ರಸ್ತೆಯಲ್ಲಿ ಪ್ರಭಾಸ್ ನಡೆಯುವುದನ್ನು ಪೋಸ್ಟರ್ ನಲ್ಲಿ ತೋರಿಸಲಾಗಿದೆ. ಪ್ರಭಾಸ್ ಪಕ್ಕಾ ಲೋಕಲ್ ಹೈದನಾಗಿ ಇಲ್ಲಿ ಕಾಣಿಸಿಕೊಂಡಿದ್ದಾರೆ. ಇದೊಂದು ರೊಮ್ಯಾಂಟಿಕ್ ಹಾರಾರ್ ಸಿನಿಮಾವಾಗಿರಲಿದೆ ಎನ್ನಲಾಗಿದೆ. ಪ್ಯಾನ್ ಇಂಡಿಯಾದಲ್ಲಿ ಸಿನಮಾ ಅದ್ಧೂರಿಯಾಗಿ ತೆರೆ ಕಾಣಲಿದೆ.
ಪೀಪಲ್ ಮೀಡಿಯಾ ಫ್ಯಾಕ್ಟರಿಯ ವಿಶ್ವ ಪ್ರಸಾದ್ ಚಿತ್ರವನ್ನು ನಿರ್ಮಿಸಲಿದ್ದಾರೆ. ಚಿತ್ರಕ್ಕೆ ಸಂಗೀತವನ್ನು ಥಮನ್ ಎಸ್ ಸಂಯೋಜಿಸುತ್ತಿದ್ದಾರೆ. ʼಆದಿಪುರುಷ್ʼ , ʼವಾರಿಸುʼ ಮುಂತಾದ ಚಲನಚಿತ್ರಗಳಿಗೆ ಸಹ ಛಾಯಾಗ್ರಹಣ ಮಾಡಿರುವ ಕಾರ್ತಿಕ್ ಪಳನಿ ಛಾಯಗ್ರಹಣ ಮಾಡಲಿದ್ದಾರೆ.
ʼದಿ ರಾಜಾ ಸಾಬ್ʼ ಇದಕ್ಕೂ ಮೊದಲು ಪ್ರಭಾಸ್ ಮಲ್ಟಿಸ್ಟಾರ್ಸ್ ಬಿಗ್ ಬಜೆಟ್ ಸಿನಿಮಾ ʼಕಲ್ಕಿ2898 ಎಡಿʼ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
#TheRajaSaab It is… 👑
Wishing you all a very Happy and Joyous Sankranthi! ❤️
𝐀 𝐑𝐞𝐛𝐞𝐥’𝐬 𝐄𝐧𝐭𝐞𝐫𝐭𝐚𝐢𝐧𝐦𝐞𝐧𝐭 𝐄𝐱𝐩𝐥𝐨𝐝𝐞𝐬 𝐖𝐨𝐫𝐥𝐝𝐰𝐢𝐝𝐞 𝐒𝐨𝐨𝐧 🌋#PrabhasPongalFeast #Prabhas
A @DirectorMaruthi film
Produced by @Vishwaprasadtg
A @MusicThaman Musical… pic.twitter.com/kvmUxIcXFC— People Media Factory (@peoplemediafcy) January 15, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kollywood: ಸೂರ್ಯ – ಕಾರ್ತಿಕ್ ಸುಬ್ಬರಾಜ್ ʼರೆಟ್ರೋʼ ರಿಲೀಸ್‌ಗೆ ಡೇಟ್ ಫಿಕ್ಸ್
Mollywood: ನಟಿ ಹನಿ ರೋಸ್ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ
VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್
Toxic Movie: ಫ್ಯಾನ್ಸ್ ನಶೆಯೇರಿಸಿದ ಯಶ್; ಹಾಲಿವುಡ್ ರೇಂಜ್‌ನಲ್ಲಿ ಮಿಂಚಿದ ರಾಕಿಭಾಯ್.!
Pushpa 2: ಕಾಲ್ತುಳಿತದ ಗಾಯಾಳು ಬಾಲಕನ ಭೇಟಿಯಾದ ಅಲ್ಲು ಅರ್ಜುನ್
MUST WATCH
ಹೊಸ ಸೇರ್ಪಡೆ
Review Meeting: ಉನ್ನತ ಶಿಕ್ಷಣಕ್ಕೆ ಬೋಧಕರ ಕೊರತೆ: ಸಿಎಂ ಸಿದ್ದರಾಮಯ್ಯ ಗರಂ
ನಕ್ಸಲರನ್ನು ಅಮಿತ್ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.