![Dubai Garden Glow: ಅದ್ಭುತ ಮ್ಯಾಜಿಕ್ ಪಾರ್ಕ್ “ಗ್ಲೋ ಗಾರ್ಡನ್ ದುಬಾೖ’](https://www.udayavani.com/wp-content/uploads/2025/02/Dubai1-415x234.jpg)
![Dubai Garden Glow: ಅದ್ಭುತ ಮ್ಯಾಜಿಕ್ ಪಾರ್ಕ್ “ಗ್ಲೋ ಗಾರ್ಡನ್ ದುಬಾೖ’](https://www.udayavani.com/wp-content/uploads/2025/02/Dubai1-415x234.jpg)
Team Udayavani, Jan 29, 2025, 3:40 PM IST
ಬೆಂಗಳೂರು: ಬಹುಭಾಷಾ ನಟ ಪ್ರಕಾಶ್ ರಾಜ್ (Actor Prakash Raj) ಮಹಾಕುಂಭ ಮೇಳದಲ್ಲಿ ಪವಿತ್ರ ಸ್ನಾನ ಮಾಡುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭದಲ್ಲಿ ಇದುವರೆಗೂ ಕೋಟ್ಯಂತರ ಮಂದಿ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದ್ದಾರೆ. ರಾಜಕಾರಣಿಗಳು, ಚಿತ್ರ ನಟರು ಸೇರಿದಂತೆ ದೇಶ – ವಿದೇಶದಿಂದ ಬಂದಿರುವ ಭಕ್ತರು ಪವಿತ್ರ ಸ್ನಾನವನ್ನು ಮಾಡಿದ್ದಾರೆ.
ಇದನ್ನೂ ಓದಿ: ಚಿಕಿತ್ಸೆ ನೀಡುವ ಬದಲು ರೀಲ್ಸ್ ನೋಡುತ್ತಾ ಕೂತ ಡಾಕ್ಟರ್.. ಹೃದಯಾಘಾತದಿಂದ ಮಹಿಳೆ ಮೃತ್ಯು
ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ಮಹಾಕುಂಭಕ್ಕೆ (Maha Kumbh Mela) ಭೇಟಿ ನೀಡಿ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ ಎನ್ನುವ ಹೇಳಿಕೆಯೊಂದಿಗಿನ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಫೋಟೋ ಎಐನಿಂದ (AI Photo) ರಚಿತವಾಗಿದ್ದು, ಕೆಲವರು ಇದನ್ನೇ ಸತ್ಯವೆಂದು ನಂಬಿ ಕಮೆಂಟ್ ಮಾಡುತ್ತಿದ್ದಾರೆ. ಈ ಬಗ್ಗೆ ಪ್ರಕಾಶ್ ರಾಜ್ ಅವರು ಸ್ವತಃ ವೈರಲ್ ಆದ ಫೋಟೋವನ್ನು ಹಂಚಿಕೊಂಡು ಇದು ನಕಲಿ ಎಂದಿದ್ದು, ದೂರು ದಾಖಲಿಸಿರುವ ಬಗ್ಗೆ ಹೇಳಿಕೊಂಡಿದ್ದಾರೆ.
ಸುಳ್ಳು ಸುದ್ದಿ “ಸುಳ್ಳ ರಾಜ” ನ ಹೇಡಿಗಳ ಸೈನ್ಯಕ್ಕೆ .. ಅವರ ಪವಿತ್ರ ಪೂಜೆಯಲ್ಲೂ ಸುಳ್ಳು ಸುದ್ದಿ ಹಬ್ಬಿಸಿ ಹೊಲಸು ಮಾಡುವುದೇ ಕೆಲಸ .. Police Complaint ದಾಖಲಾಗಿದೆ .. ಕೋರ್ಟಿನ ಕಟಕಟೆಯಲ್ಲಿ ಏನು ಮಾಡುತ್ತಾರೋ ನೋಡೋಣ ಎಂದು ʼಎಕ್ಸ್ʼ ನಲ್ಲಿ ಬರೆದುಕೊಂಡು ಆಕ್ರೋಶ ಹೊರಹಾಕಿದ್ದಾರೆ.
ಸುಳ್ಳು ಸುದ್ದಿ
“ಸುಳ್ಳ ರಾಜ” ನ ಹೇಡಿಗಳ ಸೈನ್ಯಕ್ಕೆ .. ಅವರ ಪವಿತ್ರ ಪೂಜೆಯಲ್ಲೂ ಸುಳ್ಳು ಸುದ್ದಿ ಹಬ್ಬಿಸಿ ಹೊಲಸು ಮಾಡುವುದೇ ಕೆಲಸ .. police complaint ದಾಖಲಾಗಿದೆ .. ಕೋರ್ಟಿನ ಕಟಕಟೆಯಲ್ಲಿ ಏನು ಮಾಡುತ್ತಾರೋ ನೋಡೋಣ 😊 #justasking pic.twitter.com/S6ySeyFKmh— Prakash Raj (@prakashraaj) January 28, 2025
ಇನ್ನು ಚಿತ್ರರಂಗದ ನಟಿ ಅದಾ ಶರ್ಮಾ, ಗಾಯಕ ಗುರು ರಾಂಧವಾ, ಅನುಪಮ್ ಖೇರ್ ಮತ್ತು ಶಂಕರ್ ಮಹಾದೇವನ್ , ನಟಿ ಹೇಮಾ ಮಾಲಿನಿ ಮುಂತಾದವರು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ.
Rashmika Mandanna: ರಶ್ಮಿಕಾ ಮುಟ್ಟಿದ್ದೆಲ್ಲ ಚಿನ್ನ; ಹ್ಯಾಟ್ರಿಕ್ ಹಿಟ್ ಕಂಡ ಶ್ರೀವಲ್ಲಿ
Kollywood: ಬರ್ತ್ ಡೇಗೆ ʼಮದರಾಸಿʼಯಾಗಿ ಮಾಸ್ ಅವತಾರದಲ್ಲಿ ಮಿಂಚಿದ ಶಿವಕಾರ್ತಿಕೇಯನ್
Remark Sparks: ನಾನು ಹೈದರಾಬಾದಿನವಳು ಎಂದ ರಶ್ಮಿಕಾಗೆ ನೆಟ್ಟಿಗರ ಕ್ಲಾಸ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ
Anandapura:ಮನೆಗೆ ಆಕಸ್ಮಿಕ ಬೆಂಕಿ; ಅಪಾರ ನಷ್ಟ; ಶಾಸಕ ಗೋಪಾಲಕೃಷ್ಣ ಬೇಳೂರು ಸ್ಥಳಕ್ಕೆ ಭೇಟಿ
Dubai Garden Glow: ಅದ್ಭುತ ಮ್ಯಾಜಿಕ್ ಪಾರ್ಕ್ “ಗ್ಲೋ ಗಾರ್ಡನ್ ದುಬಾೖ’
ಎಲ್ಲೆಲ್ಲಿ ಆಡಿ ಬಂದೆ ಹೇಳಯ್ಯಾ ರಂಗ!: ಆಡೂ ಆಟ ಆಡು ….ನೀ ಆಡು ಆಡು ಆಡಿ ನೋಡು
Railway; ಮಹಾಕುಂಭಕ್ಕೆ ಟಿಕೆಟ್ ಇಲ್ಲದೆ ಪ್ರಯಾಣಿಸಲು ಮೋದಿ ಜಿ ಹೇಳಿದ್ದಾರೆ ಎಂದ ಮಹಿಳೆಯರು
Udupi: ಡಾ| ಟಿಎಂಎ ಪೈ ಆಸ್ಪತ್ರೆ; ಫೆ.20ರಂದು ಲಿಂಫೆಡೆಮಾ ತಪಾಸಣೆ ಶಿಬಿರ
You seem to have an Ad Blocker on.
To continue reading, please turn it off or whitelist Udayavani.