Nayanthara: ನಯನತಾರ ಮಕ್ಕಳ ದಾದಿಯರಿಗೂ ನಾವೇ ಸಂಬಳ ಕೊಡಬೇಕಾ..? ಖ್ಯಾತ ನಿರ್ಮಾಪಕ ಗರಂ
Team Udayavani, Oct 9, 2024, 2:21 PM IST
ಚೆನ್ನೈ: ಬಹುಭಾಷಾ ನಟಿ ನಯನತಾರ (Lady Superstar Nayanthara) ಆಗಾಗ ವಿವಾದದಲ್ಲಿ ಸಿಲುಕಿಕೊಂಡು ಸುದ್ದಿಯಾಗುತ್ತಾರೆ. ಕೆಲ ಸಮಯದ ಹಿಂದಷ್ಟೇ ಅವರ ಸಿನಿಮಾವೊಂದರ ಮೇಲೆ ವಿವಾದ ಉಂಟಾಗಿತ್ತು. ಇದೀಗ ಅವರ ಮಕ್ಕಳ ವಿಚಾರಕ್ಕೆ ಅವರು ವಿವಾದಕ್ಕೀಡಾಗಿದ್ದಾರೆ.
ನಯನತಾರ ಅಭಿನಯನದ ʼಅನ್ನಪೂರ್ಣಿʼ ಭಾರೀ ವಿವಾದಕ್ಕೆ ಗುರಿಯಾಗಿತ್ತು. ಇದಾದ ಬಳಿಕ ಅವರು ದೇವಸ್ಥಾನಕ್ಕೆ ಹೋಗುವಾಗ ಚಪ್ಪಲಿ ಹಾಕಿಕೊಂಡು ಹೋದರು ಎನ್ನುವ ವಿಚಾರ ಕೂಡ ವಿವಾದಕ್ಕೆ ಕಾರಣವಾಗಿತ್ತು.
ಇದೀಗ ಅವರ ಮೇಲೆ ನಿರ್ಮಾಪಕರೊಬ್ಬರು ಗರಂ ಆಗಿದ್ದಾರೆ. ತಮಿಳು ಸಿನಿಮಾ ನಿರ್ಮಾಪಕ ಹಾಗೂ ಯೂಟ್ಯೂಬರ್ ಅನಂತನ್ (Producer and Youtuber Ananthan) ನಯನತಾರ ಅವರು ಶೂಟಿಂಗ್ ಸೆಟ್‌ಗೆ ಬರುವಾಗ ಏಳೆಂಟು ಜನ ಸಹಾಯಕರನ್ನು ಕರೆದುಕೊಂಡು ಬರುತ್ತಾರೆ. ಅವರಿಗೆ ನಿರ್ಮಾಪಕರು ತಮ್ಮ ಜೇಬಿನಿಂದ ಸಂಭಾವನೆ ನೀಡಬೇಕೆಂದು ಈ ಹಿಂದೆ ಹೇಳಿದ್ದರು. ಇದೀಗ ಅದೇ ರೀತಿಯ ಮಾತನ್ನು ಮತ್ತೊಮ್ಮೆ ಅವರು ಹೇಳಿದ್ದಾರೆ.
ಈಗ ನಯನತಾರ ಶೂಟಿಂಗ್ ಗೆ ಬರುವಾಗ ತಮ್ಮ ಮಕ್ಕಳ ಜೊತೆ ಇಬ್ಬರು ದಾದಿಯರನ್ನು ಕರೆತರುತ್ತಾರೆ. ಈ ದಾದಿಯರಿಗೆ ನಿರ್ಮಾಪಕರೇ ಸಂಬಳ ನೀಡಬೇಕೆಂದು ಅವರು ಹೇಳುತ್ತಾರೆ. ಅವರ ಮಕ್ಕಳನ್ನು ನೋಡಿಕೊಳ್ಳಲು ಬರುವ ದಾದಿಯರಿಗೆ ನಿರ್ಮಾಪಕರು ತಮ್ಮ ಜೇಬಿನಿಂದ ಸಂಬಳ ನೀಡಬೇಕೆನ್ನುವುದರಲ್ಲಿ ಯಾವ ನ್ಯಾಯವಿದೆ ಎಂದು ಅಂತನನ್ ಸಂದರ್ಶನವೊಂದರಲ್ಲಿ ಪ್ರಶ್ನಿಸಿದ್ದಾರೆ.
2022ರಲ್ಲಿ ನಿರ್ದೇಶಕ ವಿಘ್ನೇಶ್ ಶಿವನ್ ಜೊತೆ ನಯನತಾರ ಮದುವೆ ನಡೆದಿತ್ತು. ಮಹಾಬಲಿಪುರಂ ಬಳಿಕ ರೆಸಾರ್ಟ್‌ವೊಂದರಲ್ಲಿ ಅದ್ಧೂರಿಯಾಗಿ ಜೋಡಿ ಹಸೆಮಣೆ ಏರಿದ್ದರು. ಈ ಕಾರ್ಯಕ್ರಮದಲ್ಲಿ ಖ್ಯಾತ ಕಲಾವಿದರು ಹಾಗೂ ಗಣ್ಯರು ಭಾಗಿಯಾಗಿದ್ದರು.
ವಿಘ್ನೇಶ್ ಶಿವನ್ ಜೊತೆ ನಯನತಾರ ಮದುವೆಯ ಫುಟೇಜ್ ವುಳ್ಳ ಡ್ಯಾಕ್ಯುಮೆಂಟರಿಯನ್ನು ನೆಟ್ ಫ್ಲಿಕ್ಸ್ ಭಾರೀ ಮೊತ್ತಕ್ಕೆ ಖರೀದಿಸಿದೆ. ‘ನಯನತಾರ: ಬಿಯಾಂಡ್ ದಿ ಫೇರಿ ಟೇಲ್’ ಡಾಕ್ಯುಮೆಂಟರಿ ಶೀಘ್ರದಲ್ಲೇ ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್ ಆಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral Pics: ಡೇಟಿಂಗ್ ರೂಮರ್ಸ್ ನಡುವೆ ವಿಜಯ್ – ರಶ್ಮಿಕಾ ಸೀಕ್ರೆಟ್ ಲಂಚ್ ಡೇಟ್
Dhanashree Verma: ಯಶ್ ಸಿನಿಮಾಕ್ಕೆ ಕ್ರಿಕೆಟಿಗ ಚಹಾಲ್ ಪತ್ನಿ ಹೀರೋಯಿನ್
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !
Kollywood: ʼಅಮರನ್ʼ ಚಿತ್ರತಂಡದಿಂದ 1 ಕೋಟಿ ರೂ. ಪರಿಹಾರ ಕೇಳಿದ ವಿದ್ಯಾರ್ಥಿ; ಕಾರಣವೇನು?
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.