Pushpa 2: ರಿಲೀಸ್ ಆದ ಕೆಲವೇ ಗಂಟೆಯಲ್ಲಿ ಆನ್‌ಲೈನ್‌ನಲ್ಲಿ ʼಪುಷ್ಪ-2ʼ HD ಪ್ರಿಂಟ್ ಲೀಕ್
Team Udayavani, Dec 5, 2024, 10:41 AM IST
ಹೈದರಾಬಾದ್: ಎಲ್ಲೆಡೆ ʼಪುಷ್ಪ-2ʼ (Pushpa 2: The Rule) ಹವಾ ಶುರುವಾಗಿದೆ. ಸಾವಿರಾರು ಮಂದಿ ಥಿಯೇಟರ್ ಮುಂದೆ ʼಪುಷ್ಪರಾಜ್ʼ ನೋಡಿ ಜೈಹಾರ ಹಾಕುತ್ತಿದ್ದಾರೆ. ಅಲ್ಲು ಅರ್ಜುನ್ (Allu Arjun) ವೈಲ್ಡ್ ಫೈಯರ್ ಆಗಿ ಸ್ಕ್ರೀನ್ ಮೇಲೆ ಅಬ್ಬರಿಸಿದ್ದಾರೆ.
ಫಸ್ಟ್ ಡೇ ಫಸ್ಟ್ ಶೋಗಾಗಿ ಜನ ಮುಗಿಬಿದ್ದಿದ್ದಾರೆ. ʼಬನ್ನಿʼ ಅಭಿಮಾನಿಗಳು ಥಿಯೇಟರ್ ಮುಂದೆ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.
ಬಹುನಿರೀಕ್ಷೆಯ ಸಿನಿಮಾಗಳ ರಿಲೀಸ್ ಆಗಿದ್ದು, ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಚಿತ್ರಕ್ಕೆ ಪೈರಸಿ ಕಾಟ ಶುರುವಾಗಿದೆ. ಫೇಸ್‌ಬುಕ್ ಸೇರಿದಂತೆ ಹಲವು ಸೈಟ್‌ಗಳಲ್ಲಿ ಸಿನಿಮಾ ಲೀಕ್ ಆಗಿದೆ ಎಂದು ವರದಿಯಾಗಿದೆ.
ಹೆಚ್ ಡಿ ಕ್ವಾಲಿಟಿಯಲ್ಲೇ ಸಿನಿಮಾ ಮೂವಿ ರೂಲ್ಸ್, ತಮಿಳ್ ರೂಕರ್ಸ್, ಫಿಲ್ಮಿಜಿಲ್ಲಾ ಮತ್ತು ಟೆಲಿಗ್ರಾಮ್ ನಲ್ಲಿ ಪೂರ್ತಿ ಸಿನಿಮಾ ಲೀಕ್ ಆಗಿದೆ ಎಂದು ʼಟೈಮ್ಸ್ ನೌʼ ವರದಿ ಮಾಡಿದೆ.
720p, 1080p, 480p, 360p, 240p ಕ್ವಾಲಿಟಿಯಲ್ಲಿ ಸಿನಿಮಾ ಲೀಕ್ ಆಗಿದೆ. ಇವಿಷ್ಟು ಸೈಟ್‌ಗಳಲ್ಲಿ ಮಾತ್ರವಲ್ಲದೆ ತಮಿಳ್ ಯೋಗಿ, ಇಬೊಮ್ಮ, ತಮಿಳ್ ಬ್ಲಾಸ್ಟರ್ಸ್, 9xmovies, Bolly4u, Moviesda, ಮತ್ತು Jaisha Moviez ಗಳಲ್ಲೂ ಸಿನಿಮಾದ ಕಾಪಿ ಲೀಕ್ ಆಗಿದೆ ಎಂದು ವರದಿಯಾಗಿದೆ.
ಆನ್‌ಲೈನ್‌ನಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಅಥವಾ ಬಹುನಿರೀಕ್ಷಿತ ಸಿನಿಮಾ ಈ ರೀತಿ ಲೀಕ್ ಆಗಿರುವುದು ಇದೇ ಮೊದಲಲ್ಲ. ಈ ಹಿಂದೆ ಕೂಡ ಹೀಗೆಯೇ ಹಲವು ಸಿನಿಮಾಗಳು ಲೀಕ್ ಆಗಿದೆ. ಅದರ ಪರಿಣಾಮ ಬಾಕ್ಸ್ ಆಫೀಸ್‌ನಲ್ಲಿ ಗಳಿಕೆ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎನ್ನುವುದನ್ನು ಕಾದುನೋಡಬೇಕಿದೆ.
ಸುಕುಮಾರ್ ನಿರ್ದೇಶನದ ಈ ಸಿನಿಮಾದಲ್ಲಿಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಫಾಹದ್ ಫಾಸಿಲ್ ಮುಂತಾದವರು ಸಿನಿಮಾದಲ್ಲಿ ನಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pushpa 2: ಕಾಲ್ತುಳಿತದ ಗಾಯಾಳು ಬಾಲಕನ ಭೇಟಿಯಾದ ಅಲ್ಲು ಅರ್ಜುನ್
Car Crash: ಕಾರು ರೇಸ್ ತರಬೇತಿ ವೇಳೆ ನಟ ಅಜಿತ್ ಕುಮಾರ್ ಕಾರು ಅಪಘಾತ!
ಕೌಟುಂಬಿಕ ದೌರ್ಜನ್ಯ ಆರೋಪ: ʼಬಿಂದಾಸ್ʼ ನಟಿ ಹನ್ಸಿಕಾ, ಸಹೋದರ, ತಾಯಿ ವಿರುದ್ಧ FIR ದಾಖಲು
Oscars 2025: ಹೀನಾಯವಾಗಿ ಸೋತರೂ ʼಆಸ್ಕರ್ʼ ಅರ್ಹತಾ ಸುತ್ತಿನಲ್ಲಿ ಕಾಣಿಸಿಕೊಂಡ ʼಕಂಗುವʼ
Tamil actor ವಿಶಾಲ್‌ಗೆ ಅನಾರೋಗ್ಯ?: ಅಭಿಮಾನಿಗಳಿಗೆ ಆತಂಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi; ಸಂಘದ ಹೆಸರಲ್ಲಿ ಮಹಿಳೆಯರಿಗೆ 19.35 ಕೋಟಿ ರೂ. ಮಹಾ ವಂಚನೆ!
Vitla; ನಿವೃತ್ತ ಶಿಕ್ಷಕ, ಅರ್ಥಧಾರಿ ಪಕಳಕುಂಜ ಶ್ಯಾಮ ಭಟ್ ವಿಧಿವಶ
Trump warns; ಹಮಾಸ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ ನರಕ…
Yakshagana: ಕಾಲಮಿತಿ, ಕಾಲಗತಿಯ ಕಾಲದ ಯಕ್ಷಗಾನ-ಚಿಂತನೆ
ಜಿ.ಪಂ.,ತಾ.ಪಂ. ಚುನಾವಣೆ ವಿಳಂಬಕ್ಕೆ ಸರಕಾರವೇ ನೇರ ಹೊಣೆ, ನಾವು ಚುನಾವಣೆಗೆ ಸಿದ್ಧ: ಆಯೋಗ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.