ʼPushpa-2ʼ ಎರಡನೇ ಹಾಡು ರಿಲೀಸ್: ಕಪಲ್ಸ್ ಹಾಡಿಗೆ ಹೆಜ್ಜೆ ಹಾಕಿದ ʼಪುಷ್ಪʼ, ʼಶ್ರೀವಲ್ಲಿʼ
Team Udayavani, May 29, 2024, 3:11 PM IST
ಹೈದರಾಬಾದ್: ಅಲ್ಲು ಅರ್ಜುನ್ – ರಶ್ಮಿಕಾ ಮಂದಣ್ಣ ಅಭಿನಯದ ʼಪುಷ್ಪ-2ʼ ಸಿನಿಮಾದ ಎರಡನೇ ಹಾಡು ರಿಲೀಸ್ ಆಗಿದ್ದು, ಕೆಲವೇ ಗಂಟೆಗಳಲ್ಲಿ ಲಕ್ಷಗಟ್ಟಲೆ ವೀಕ್ಷಣೆ ಕಂಡು ಸದ್ದು ಮಾಡಿದೆ.
ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಬಹು ನಿರೀಕ್ಷೆ ಹುಟ್ಟಿಸಿರುವ ʼಪುಷ್ಪ-2ʼ ಸೆಟ್ಟೇರಿದ ಸಮಯದಿಂದ ಒಂದಲ್ಲ ಒಂದು ಕಾರಣದಿಂದ ಇಂಟರ್ ನೆಟ್ ನಲ್ಲಿ ಟ್ರೆಂಡ್ ಆಗುತ್ತಲೇ ಬಂದಿದೆ. ಪೋಸ್ಟರ್, ಕಲಾವಿದರ ಪರಿಚಯ ಟೀಸರ್ ಹಾಗೂ ಹಾಡಿನಿಂದ ಸದ್ದು ಮಾಡಿದ ʼಪುಷ್ಪ-2ʼ ಚಿತ್ರತಂಡ ಇದೀಗ ಎರಡನೇ ಹಾಡು ರಿಲೀಸ್ ಮಾಡಿದೆ.
ಕೆಲ ದಿನಗಳ ಹಿಂದಷ್ಟೇ ಚಿತ್ರದʼಪುಷ್ಪ ಪುಷ್ಪʼ ಹಾಡು ರಿಲೀಸ್ ಆಗಿ ಸಖತ್ ಸೌಂಡ್ ಮಾಡಿತ್ತು. ಹಾಡು ವೈರಲ್ ಆಗುವುದರ ಜೊತೆಗೆ ರೀಲ್ಸ್ ನಲ್ಲಿ ಹರಿದಾಡಿತ್ತು. ಇದೀಗ ʼ ಸೂಸೆಕಿʼ ಎನ್ನುವ ಕಪಲ್ಸ್ ಸಾಂಗ್ ನ್ನು ರಿಲೀಸ್ ಮಾಡಿದೆ.
ಶೂಟಿಂಗ್ ಸೆಟ್ ನಲ್ಲಿ ಸಿಂಪಲ್ ಲುಕ್ ನಲ್ಲಿ ಅಲ್ಲು – ರಶ್ಮಿಕಾ ಸ್ಟೆಪ್ ಹಾಕಿದ್ದಾರೆ. ಲಿರಿಕಲ್ ವಿಡಿಯೋ ಹಾಡಿನಲ್ಲಿ ಶ್ರೀವಲ್ಲಿ ,ಪುಷ್ಪ ಸಖತ್ ಮಿಂಚಿದ್ದಾರೆ. ಶೂಟಿಂಗ್ ಸೆಟ್ ನಲ್ಲಿನ ಫನ್ನಿ ಮೊಮೆಂಟ್ ಹಾಗೂ ನಿರ್ದೇಶಕ, ನೃತ್ಯ ಸಂಯೋಜಕರನ್ನು ತೋರಿಸಲಾಗಿದೆ.
ಈ ಹಾಡನ್ನು ಶ್ರೇಯಾ ಘೋಷಾಲ್ ಹಾಡಿದ್ದು, ದೇವಿ ಶ್ರೀ ಪ್ರಸಾದ್ ಸಂಗೀತ ಸಂಯೋಜಿಸಿದ್ದಾರೆ ಮತ್ತು ಚಂದ್ರಬೋಸ್ ಸಾಹಿತ್ಯವನ್ನು ಬರೆದಿದ್ದಾರೆ.
ಹಾಡಿನಲ್ಲಿ ಬರುವ ಸ್ಟೆಪ್ ಗಳು ʼಶ್ರೀವಲ್ಲಿʼ ಮತ್ತು ʼಸಾಮಿ ಸಾಮಿʼ ಹಾಡನ್ನು ನೆನೆಪಿಸುತ್ತದೆ.
ಪ್ಯಾನ್ ಇಂಡಿಯಾ ʼಪುಷ್ಪ-2ʼ ಇದೇ ಆಗಸ್ಟ್ 15 ರಂದು ರಿಲೀಸ್ ಆಗಲಿದ್ದು, ಈ ಸಿನಿಮಾದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಫಾಹದ್ ಫಾಸಿಲ್, ಪ್ರಕಾಶ್ ರಾಜ್, ಜಗಪತಿ ಬಾಬು, ಜಗದೀಶ್ ಪ್ರತಾಪ್ ಭಂಡಾರಿ ಹಾಗೂ ಇತರೆ ಪ್ರಮುಖರು ಕಾಣಿಸಿಕೊಳ್ಳಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ
Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ
Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ
Malayalam actor: ಹಾಲಿವುಡ್‌ನಲ್ಲೂ ಮಿಂಚಿದ್ದ ಮಾಲಿವುಡ್‌ನ ಹಿರಿಯ ನಟ ಥಾಮಸ್ ನಿಧನ
‘Pushpa 2: 10 ದಿನಗಳಲ್ಲಿ ಹೊಸ ದಾಖಲೆಯ ಕಲೆಕ್ಷನ್ ಕಂಡು ಮುನ್ನುಗ್ಗುತ್ತಿರುವ ಪುಷ್ಪ 2
MUST WATCH
ಹೊಸ ಸೇರ್ಪಡೆ
Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!
ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.