Pushpa 2: ಖಾಕಿಗೆ ಸವಾಲು‌ ಹಾಕುವ ʼಪುಷ್ಪ-2ʼ ಹಾಡು ರಿಲೀಸ್; ವಿವಾದದ ಬೆನ್ನಲ್ಲೇ ಡಿಲೀಟ್

Team Udayavani, Dec 26, 2024, 12:46 PM IST

Pushpa 2: ಖಾಕಿಗೆ ಸವಾಲು‌ ಹಾಕುವ ʼಪುಷ್ಪ-2ʼ ಹಾಡು ರಿಲೀಸ್; ವಿವಾದದ ಬೆನ್ನಲ್ಲೇ ಡಿಲೀಟ್

ಹೈದರಾಬಾದ್:‌ ʼಪುಷ್ಪ-2ʼ (Pushpa 2) ಚಿತ್ರದ ಪ್ರಿಮಿಯರ್‌ ಶೋ ಸಂದರ್ಭದಲ್ಲಿ ಉಂಟಾದ ಕಾಲ್ತುಳಿತ ಪ್ರಕರಣ ಸುದ್ದಿಯಲ್ಲಿರುವಾಗಲೇ ಚಿತ್ರದ ಹಾಡೊಂದು ಸೋಶಿಯಲ್‌ ಮೀಡಿಯಾದಲ್ಲಿ ರಿಲೀಸ್‌ ಆಗಿ ಭಾರೀ ವೈರಲ್‌ ಆದ ಬೆನ್ನಲ್ಲೇ ಅದನ್ನು ಡಿಲೀಟ್‌ ಮಾಡಲಾಗಿದೆ.

ಡಿ.4 ರಂದು ಸಂಧ್ಯಾ ಥಿಯೇಟರ್‌ನಲ್ಲಿ ಕಾಲ್ತುಳಿತ (Sandhya Theatre Stampede) ಉಂಟಾಗಿ ರೇವತಿ ಎನ್ನುವ ಮಹಿಳೆ ಮೃತಪಟ್ಟಿದ್ದರು. ಈ ಘಟನೆ ಬೆನ್ನಲ್ಲೇ ಅಲ್ಲು ಅರ್ಜುನ್‌ (Allu Arjun) ಮೇಲೆ ಎಫ್‌ ಐಆರ್‌ ದಾಖಲಿಸಿ ಪೊಲೀಸರು ಅವರನ್ನು ಬಂಧಿಸಿದ್ದರು. ಮಧ್ಯಂತರ ಜಾಮೀನು ಪಡೆದು ಆಚೆ ಬಂದ ಬಳಿಕವೂ ಪೊಲೀಸರು ಅಲ್ಲು ಅರ್ಜುನ್‌ ಅವರನ್ನು ವಿಚಾರಣೆಗೆ ಒಳಪಡಿಸಿದ್ದರು.

ಪೊಲೀಸರು ಅಲ್ಲು ಅರ್ಜುನ್‌ ಅವರನ್ನು ಬಂಧಿಸಿದ ವಿಚಾರ ಆಂಧ್ರದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಈ ನಡುವೆ ಡಿ.24 ರಂದು ಟಿ- ಸಿರೀಸ್‌ನಲ್ಲಿ ʼಪುಷ್ಪ-2ʼ ಚಿತ್ರದ ಹಾಡೊಂದನ್ನು ಚಿತ್ರತಂಡ ರಿಲೀಸ್‌ ಮಾಡಿತ್ತು.

ʼದಮ್ಮುಂಟೆ ಪತ್ತುಕೋರʼ (ದಮ್ಮು ಇದ್ರೆ ಹಿಡಿದು ನೋಡು) ಎನ್ನುವ ಹಾಡನ್ನು ಚಿತ್ರತಂಡ ರಿಲೀಸ್‌ ಮಾಡಿತ್ತು. ದೇವಿ ಶ್ರೀ ಪ್ರಸಾದ್ ಸಂಯೋಜನೆಯ ಹಾಡಿಗೆ ಅಲ್ಲು ಅರ್ಜುನ್ ಧ್ವನಿಯಾಗಿದ್ದು, ನಿರ್ದೇಶಕ ಸುಕುಮಾರ್ ಬರೆದ ಸಾಹಿತ್ಯವನ್ನು ಬರೆದಿದ್ದಾರೆ.

ಈ ಹಾಡು ʼಪುಷ್ಪʼ ಹಾಗೂ ಪೊಲೀಸ್ ಅಧಿಕಾರಿ ಭನ್ವರ್ ಸಿಂಗ್ ಶೇಖಾವತ್ (ಫಾಹದ್ ಫಾಸಿಲ್) ನಡುವಿನ ಮುಖಾಮುಖಿಯನ್ನು ತೋರಿಸುತ್ತದೆ.

ʼದಮ್ಮುಂಟೆ ಪಟ್ಟುಕೋರ (Dammunte Pattukora) ಶೇಖಾವತ್ʼ (ನಿಮಗೆ ಧೈರ್ಯವಿದ್ದರೆ ನನ್ನನ್ನು ಹಿಡಿ ಶೇಖಾವತ್!) ಎನ್ನುವ ಸಾಹಿತ್ಯವಿರುವ ಹಾಡು ರಿಲೀಸ್‌ ಆದ ಕೆಲವೇ ಗಂಟೆಗಳಲ್ಲಿ ವೈರಲ್‌ ಆಗಿತ್ತು. ಇದು ಶೇಖಾವತ್‌ ಅವರಿಗೆ ʼಪಷ್ಪʼ ಸವಾಲು ಎಸೆಯುವ ಹಾಡಾಗಿತ್ತು.

ಆದರೆ ಹಾಡಿನ ಸಾಹಿತ್ಯ ಹಾಗೂ ಪ್ರಸ್ತುತ ಕಾಲ್ತುಳಿತ ಪ್ರಕರಣದಿಂದ ನಡೆಯುತ್ತಿರುವ ಕೆಲವೊಂದಿಷ್ಟು ವಿಚಾರಗಳಿಂದ ಈ ಹಾಡು ಈಗಿನ ಸ್ಥಿತಿಯಲ್ಲಿ ವಿವಾದಕ್ಕೀಡು ಮಾಡಿದೆ.

ನೆಟ್ಟಿಗರಲ್ಲಿ ಕೆಲ ಮಂದಿ ಈ ಹಾಡಿನ ಕುರಿತು ಕರೆಕ್ಟ್‌ ಟೈಮಿಂಗ್ ಹಾಡು ರಿಲೀಸ್‌ ಮಾಡಿದ್ದೀರಿ ಎಂದು ಕಮೆಂಟ್‌ ಮಾಡಿದ್ದಾರೆ. ಪೊಲೀಸರಿಗೆ ಅಲ್ಲು ಅರ್ಜುನ್‌ ಧೈರ್ಯವಿದ್ದರೆ ಬಂಧಿಸಿ ಎನ್ನುವ ಹಾಗೆ ಈ ಹಾಡು ಇದೆ ಎಂದು ಕೆಲವರು ಕಮೆಂಟ್‌ ಮಾಡಿದ್ದಾರೆ. ಹಾಡು ವಿವಾದದೆಡೆಗೆ ಸಾಗುತ್ತಿದ್ದಂತೆ ಟಿ- ಸಿರೀಸ್‌ ಹಾಡನ್ನು ಸೋಶಿಯಲ್‌ ಮೀಡಿಯಾದಿಂದ ಡಿಲೀಟ್‌ ಮಾಡಿದೆ.

ಇನ್ನೊಂದೆಡೆ ಮೃತ ರೇವತಿಯ ಪುತ್ರ ಕಾಲ್ತುಳಿತ ಪ್ರಕರಣದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕತ್ಸೆ ಪಡೆಯುತ್ತಿದ್ದು, ಬುಧವಾರ (ಡಿ.25 ರಂದು) ಅಲ್ಲು ಅರ್ಜುನ್‌ ತಂದೆ ಅಲ್ಲು ಅರವಿಂದ್‌, ನಿರ್ಮಾಪಕರ ದಿಲ್‌ ರಾಜ್‌ ಅವರು ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರವನ್ನು ನೀಡಿದೆ.

ಟಾಪ್ ನ್ಯೂಸ್

MM-Singh

Mourning: ಮನಮೋಹನ್‌ ಸಿಂಗ್‌ ನಿಧನ; ದೇಶಾದ್ಯಂತ 7 ದಿನ ಶೋಕಾಚರಣೆ ಘೋಷಿಸಿದ ಕೇಂದ್ರ ಸರಕಾರ

Mangaluru: ಶಾರ್ಜಾದಲ್ಲಿ ತುಂಬೆ ಸೈಕಿಯಾಟ್ರಿಕ್‌ ಆಸ್ಪತ್ರೆ

Mangaluru: ಶಾರ್ಜಾದಲ್ಲಿ ತುಂಬೆ ಸೈಕಿಯಾಟ್ರಿಕ್‌ ಆಸ್ಪತ್ರೆ

Sabarimala: ಸಾವಿರಾರು ಭಕ್ತರಿಂದ ಮಂಡಲ ಪೂಜೆ ವೀಕ್ಷಣೆSabarimala: ಸಾವಿರಾರು ಭಕ್ತರಿಂದ ಮಂಡಲ ಪೂಜೆ ವೀಕ್ಷಣೆ

Sabarimala: ಸಾವಿರಾರು ಭಕ್ತರಿಂದ ಮಂಡಲ ಪೂಜೆ ವೀಕ್ಷಣೆ

Mangaluru ಡಿ. 28, 29: ತಣ್ಣೀರುಬಾವಿಯಲ್ಲಿ ಬೀಚ್‌ ಉತ್ಸವ

Mangaluru ಡಿ. 28, 29: ತಣ್ಣೀರುಬಾವಿಯಲ್ಲಿ ಬೀಚ್‌ ಉತ್ಸವ

Udupi: ಶ್ರೀ ಕೃಷ್ಣಮಠಕ್ಕೆ ಮಾಜಿ ಕ್ರಿಕೆಟಿಗ ವಿ.ವಿ.ಎಸ್‌. ಲಕ್ಷ್ಮಣ್‌ ಭೇಟಿ

Udupi: ಶ್ರೀ ಕೃಷ್ಣಮಠಕ್ಕೆ ಮಾಜಿ ಕ್ರಿಕೆಟಿಗ ವಿ.ವಿ.ಎಸ್‌. ಲಕ್ಷ್ಮಣ್‌ ಭೇಟಿ

Kundapura: ಬಾವಿಗೆ ಬಿದ್ದು ಯುವತಿ ಸಾವುKundapura: ಬಾವಿಗೆ ಬಿದ್ದು ಯುವತಿ ಸಾವು

Kundapura: ಬಾವಿಗೆ ಬಿದ್ದು ಯುವತಿ ಸಾವು

ಸಿಲಿಂಡರ್‌ ಸ್ಫೋ*ಟ ಪ್ರಕರಣ: ಗಾಯಾಳು ಮಹಿಳೆ ಸಾವು; ಮತ್ತೋರ್ವರ ಸ್ಥಿತಿ ಗಂಭೀರ

Surathkal: ಸಿಲಿಂಡರ್‌ ಸ್ಫೋ*ಟ ಪ್ರಕರಣ: ಗಾಯಾಳು ಮಹಿಳೆ ಸಾವು; ಮತ್ತೋರ್ವರ ಸ್ಥಿತಿ ಗಂಭೀರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್

Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್

Actress: ರೊಮ್ಯಾನ್ಸ್‌ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್

Actress: ರೊಮ್ಯಾನ್ಸ್‌ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್

MT Vasudevan Nair: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ

Updated: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ

ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ

ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ

Kollywood: ಕಾರ್ತಿಕ್‌ ಸುಬ್ಬರಾಜ್‌ ಚಿತ್ರಕ್ಕೆ ʼರೆಟ್ರೋʼ ಆದ ಸೂರ್ಯ; ಮಸ್ತ್‌ ಆಗಿದೆ ಮಾಸ್

Kollywood: ಕಾರ್ತಿಕ್‌ ಸುಬ್ಬರಾಜ್‌ ಚಿತ್ರಕ್ಕೆ ʼರೆಟ್ರೋʼ ಆದ ಸೂರ್ಯ; ಮಸ್ತ್‌ ಆಗಿದೆ ಮಾಸ್

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

MM-Singh

Mourning: ಮನಮೋಹನ್‌ ಸಿಂಗ್‌ ನಿಧನ; ದೇಶಾದ್ಯಂತ 7 ದಿನ ಶೋಕಾಚರಣೆ ಘೋಷಿಸಿದ ಕೇಂದ್ರ ಸರಕಾರ

Mangaluru: ಶಾರ್ಜಾದಲ್ಲಿ ತುಂಬೆ ಸೈಕಿಯಾಟ್ರಿಕ್‌ ಆಸ್ಪತ್ರೆ

Mangaluru: ಶಾರ್ಜಾದಲ್ಲಿ ತುಂಬೆ ಸೈಕಿಯಾಟ್ರಿಕ್‌ ಆಸ್ಪತ್ರೆ

Sabarimala: ಸಾವಿರಾರು ಭಕ್ತರಿಂದ ಮಂಡಲ ಪೂಜೆ ವೀಕ್ಷಣೆSabarimala: ಸಾವಿರಾರು ಭಕ್ತರಿಂದ ಮಂಡಲ ಪೂಜೆ ವೀಕ್ಷಣೆ

Sabarimala: ಸಾವಿರಾರು ಭಕ್ತರಿಂದ ಮಂಡಲ ಪೂಜೆ ವೀಕ್ಷಣೆ

Mangaluru ಡಿ. 28, 29: ತಣ್ಣೀರುಬಾವಿಯಲ್ಲಿ ಬೀಚ್‌ ಉತ್ಸವ

Mangaluru ಡಿ. 28, 29: ತಣ್ಣೀರುಬಾವಿಯಲ್ಲಿ ಬೀಚ್‌ ಉತ್ಸವ

Mangaluru: ಕಾಂಗ್ರೆಸ್‌ನ‌ ಅಧಿವೇಶನವಲ್ಲ: ಬಿಜೆಪಿ

Mangaluru: ಕಾಂಗ್ರೆಸ್‌ನ‌ ಅಧಿವೇಶನವಲ್ಲ: ಬಿಜೆಪಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.