Pushpa 2 The Rule; ಅಲ್ಲು ಅರ್ಜುನ್ ಚಿತ್ರದ ಟ್ರೇಲರ್ ಬಿಡುಗಡೆಗೆ ದಿನಾಂಕ ನಿಗದಿ
Team Udayavani, Nov 11, 2024, 4:40 PM IST
ಹೈದರಾಬಾದ್: ನಟ ಅಲ್ಲು ಅರ್ಜುನ್ (Allu Arjun) ಅವರ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ʼಪುಷ್ಪ-2 ದಿ ರೂಲ್ʼ (Pushpa 2 The Rule) ಚಿತ್ರತಂಡದಿಂದ ದೊಡ್ಡ ಅಪ್ಡೇಟ್ ಒಂದು ಬಂದಿದೆ. ಅದು ಎಲ್ಲಾ ಸಿನಿ ಅಭಿಮಾನಿಗಳು ಕಾಯುತ್ತಿರುವ ಚಿತ್ರದ ಟ್ರೇಲರ್ ಬಗ್ಗೆ.
ಹೌದು, ಸುಕುಮಾರ್ ನಿರ್ದೇಶನದ ಪುಷ್ಪ-2 ದಿ ರೂಲ್ ಚಿತ್ರದ ಟ್ರೇಲರ್ ಇದೇ ತಿಂಗಳ 17ರಂದು ಬಿಡುಗಡೆಯಾಗಲಿದೆ. ನ.17ರ ಸಂಜೆ 6.03ರ ಸಮಯದಲ್ಲಿ ಟ್ರೇಲರ್ ರಿಲೀಸ್ ಆಗಲಿದೆ.
ಸದ್ಯ ಪುಷ್ಪ 2 ದಿ ರೂಲ್ ಚಿತ್ರಕ್ಕೆ ದಕ್ಷಿಣ ಭಾರತದಲ್ಲಷ್ಟೇ ಅಲ್ಲದೇ ಉತ್ತರ ಭಾರತದ ರಾಜ್ಯಗಳಲ್ಲೂ ಕ್ರೇಜ್ ಹೆಚ್ಚಾಗಿದೆ. ಅಲ್ಲಿನ ಸಿನಿಪ್ರಿಯರು ಸಹ ಪುಷ್ಪ 2 ದಿ ರೂಲ್ ಟ್ರೇಲರ್‌ಗೆ ಕಾತುರದಿಂದಕಾಯುತ್ತಿದ್ದಾರೆ.
ಅಲ್ಲು ಅರ್ಜುನ್, ಫಾಹದ್ ಫಾಸಿಲ್ ಮತ್ತು ರಶ್ಮಿಕಾ ಮಂದಣ್ಣ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಚಿತ್ರವು ಡಿಸೆಂಬರ್ 5ರಂದು ವಿಶ್ವಾದ್ಯಂತ ಬಿಡುಗಡೆಗೊಳ್ಳಲಿದೆ. ಈಗಾಗಲೇ ಅಮೆರಿಕ, ಯುಕೆ, ಆಸ್ಟ್ರೇಲಿಯಾ ದೇಶಗಳಲ್ಲಿ ಚಿತ್ರದ ಪ್ರಿಮಿಯರ್ ಶೋಗಳ ಟಿಕೆಟ್‌ಗಳು ಬಹುತೇಕ ಮಾರಾಟವಾಗಿವೆ.
Dropping an EXPLOSIVE BANGER before the MASS festival begins in Cinemas ❤🔥
Experience the MASSIVE #Pushpa2TheRuleTrailer on 17th November at 6:03 PM 🌋🌋
With a Blasting Event at PATNA 💥💥#Pushpa2TheRule#Pushpa2TheRuleOnDec5th
Icon Star @alluarjun @iamRashmika… pic.twitter.com/nCFKC4kYA5
— Pushpa (@PushpaMovie) November 11, 2024
ಪುಷ್ಟ-1 ಚಿತ್ರದಲ್ಲಿ ಸಮಂತಾ ಸೊಂಟ ಕುಣಿಸಿದ್ದ ʼಊ ಅಂಟವಾʼ ಹಾಡು ಬೇರೆಯದ್ದೇ ರೀತಿಯ ಹವಾ ಕ್ರಿಯೇಟ್ ಮಾಡಿತ್ತು. ʼಪುಷ್ಪ 2 ದಿ ರೂಲ್ʼ ನಲ್ಲೂ ಇದೇ ರೀತಿಯ ಹಾಡು ಇರಲಿದೆ. ಪುಷ್ಟ-2 ಚಿತ್ರದಲ್ಲಿ ಕನ್ನಡದ ಬೆಡಗಿ ಶ್ರೀಲೀಲಾ ಕಾಣಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಿಗ್ ಹಿಟ್ ಕೊಟ್ಟ ಸಂಕ್ರಾಂತಿ; ಸಂಭಾವನೆ ಹೆಚ್ಚಿಸಿಕೊಂಡ ಟಾಲಿವುಡ್ ಸೂಪರ್ ಸ್ಟಾರ್ಸ್
Kollywood: 2024ರಲ್ಲಿ ಬರೋಬ್ಬರಿ 1000 ಕೋಟಿ ರೂ. ನಷ್ಟ ಕಂಡ ಕಾಲಿವುಡ್: ಎಡವಿದ್ದೆಲ್ಲಿ?
Bollywood: ಸಲ್ಮಾನ್ – ಅಟ್ಲಿ ಚಿತ್ರಕ್ಕೆ ರಶ್ಮಿಕಾ ನಾಯಕಿ; ಹೆಚ್ಚಿದ ನಿರೀಕ್ಷೆ
Kollywood: ಸುಧಾ ಕೊಂಗರ – ಶಿವಕಾರ್ತಿಕೇಯನ್ ಚಿತ್ರಕ್ಕೆ ಟೈಟಲ್ ಫಿಕ್ಸ್ – ಟೀಸರ್ ಔಟ್
Actor Yash: ‘ರಾಮಾಯಣʼಕ್ಕೆ ಯಶ್ ತಯಾರಿ; ಯಾವಾಗ ಚಿತ್ರೀಕರಣ ಶುರು?
MUST WATCH
ಹೊಸ ಸೇರ್ಪಡೆ
Union Budget: ಭಾರೀ ಏರಿಕೆ, ಭಾರೀ ಇಳಿಕೆ: ವಹಿವಾಟು ಮುಗಿಸಿದ ಸೆನ್ಸೆಕ್ಸ್
Bengaluru: ಅತ್ಯಾಚಾರ ಪ್ರಕರಣ: ಬಾಲಕಿಯ ಗರ್ಭಪಾತಕ್ಕೆ ಹೈಕೋರ್ಟ್ ಅನುಮತಿ
Preperation: ಎಲ್ಲರನ್ನೂ ಒಳಗೊಂಡ ಕಾಂಗ್ರೆಸ್ ಬೆಂಬಲಿತರ ಸಮಾವೇಶ: ಸಚಿವ ರಾಜಣ್ಣ
Micro Finance ಕಿರುಕುಳ: ತಾಯಿ ಸಾವಿನಿಂದ ನೊಂದು ಮಗನೂ ಆತ್ಮಹತ್ಯೆ
Budget; ದ್ವಿದಳ ಧಾನ್ಯಗಳ ಉತ್ಪಾದನೆಯನ್ನು ಹೆಚ್ಚಿಸಲು ‘ಆತ್ಮನಿರ್ಭರ ಮಿಷನ್’